ರಾಜ್ಯಸಭೆ ಚುನಾವಣೆಯ ಫಲಿತಾಂಶ ಇನ್ನೇನು ಅಧಿಕೃತವಾಗಿ ಪ್ರಕಟ ಮಾಡಬೇಕಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗುವ ನಾಲ್ಕನೇ ಸದಸ್ಯ ಯಾರು ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿಯಿಂದ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲೆಹರ್ ಸಿಂಗ್ ಸಿರೋಯಾ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಚ್ಚಾಟದಲ್ಲಿ ಬಿಜೆಪಿಗೆ ಲಾಭ ಆಗಿದೆ.
ತೆರವುಗೊಂಡಿದ್ದ 4 ಸದಸ್ಯರ ಸ್ಥಾನಕ್ಕೆ ಒಟ್ಟು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಆರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ನಿಂದ ಎರಡನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್ನ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ.
ಯಾರೆಲ್ಲಾ ರಾಜ್ಯಸಭೆಗೆ ಆಯ್ಕೆ..?
- ನಿರ್ಮಲಾ ಸೀತಾರಾಮನ್ (ಬಿಜೆಪಿ)
- ಜಗ್ಗೇಶ್ (ಬಿಜೆಪಿ)
- ಲೆಹರ್ ಸಿಂಗ್ (ಬಿಜೆಪಿ
- ಜೈರಾಂ ರಮೇಶ್ (ಕಾಂಗ್ರೆಸ್)
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post