ಅಗ್ರೆಸ್ಸೀವ್ ವಿರಾಟ್ ಕೊಹ್ಲಿ. ಒಂದು ಸಲ ಮಗುವಿನಂತೆ ಗಳಗಳನೆ ಅತ್ತಿದ್ರು ಅಂದ್ರೆ ನಂಬ್ತಿರಾ..? ನಂಬಲೇ ಬೇಕು ಕಣ್ರಿ! ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಗಳಗಳನೆ ಅತ್ತ ಕೊಹ್ಲಿ, ರಾತ್ರಿ ನಿದ್ದೆಯನ್ನೂ ಮಾಡಿದೆ ಕುಳಿತುಬಿಟ್ಟಿದ್ರಂತೆ!
ವಿರಾಟ್ ಕೊಹ್ಲಿ.. ಮಾರ್ಡರ್ನ್ ಕ್ರಿಕೆಟ್ನ ಲೆಜೆಂಡ್. ಪ್ಯಾಡ್ ಕಟ್ಟಿ ಮೈದಾನಕ್ಕಿಳಿದ ಮೇಲೆ ಎದುರಾಳಿ ಯಾರೇ ಇರಲಿ. ಮೈದಾನ ಯಾವುದೇ ಆಗಲಿ. ಅಬ್ಬರ ಅಂತೂ ಫಿಕ್ಸ್.! ಫಾರ್ಮ್ನಲ್ಲಿ ಇರಲಿ. ಇರದೇ ಇರಲಿ, ಕೊಹ್ಲಿ ಮೈದಾನಕ್ಕಿಳಿದ್ರೆ ಸಾಕು ಎದುರಾಳಿ ಕ್ಯಾಪ್ಟನ್ ಹಾಗೂ ಬೌಲಿಂಗ್ ಯುನಿಟ್ ಒಂದು ಕ್ಷಣ ಸ್ಟನ್ ಆಗೋದಂತೂ ಕನ್ಫರ್ಮ್.
ಕಳೆದ 2 ವರ್ಷಗಳಿಂದ ವಿರಾಟ್ ಫಾರ್ಮ್ನಲ್ಲಿಲ್ಲ ನಿಜ. ಹಾಗೆಂದ ಮಾತ್ರಕ್ಕೆ ವಿರಾಟ್ ಕೊಹ್ಲಿಯ ಹವಾ, ಕಿಂಚಿತ್ತು ಕಡಿಮೆಯಾಗಿಲ್ಲ. ಇಗ್ಲೂ ಮೈದಾನಕ್ಕಿಳಿದ್ರೆ, ಬೌಲರ್ಗಳ ಎದೆಯಲ್ಲಿ ಢವಢವ ಸ್ಟಾರ್ಟ್ ಆಗಿ ಬಿಡುತ್ತೆ. ಆ ಲೆವೆಲ್ಗೆ ಕೊಹ್ಲಿ ಟ್ರೆಡ್ಮಾರ್ಕ್ ಸೆಟ್ ಮಾಡಿದ್ದಾರೆ.
ಇನ್ನು ಬೌಲಿಂಗ್ ವೇಳೆ ಕೊಹ್ಲಿ ಮೈದಾನದಲ್ಲಿದ್ರೆ ಸಾಕು, ಬೌಲರ್ಗಳ ಜೋಷ್ ನೆಕ್ಸ್ಟ್ ಲೆವೆಲ್ನಲ್ಲಿರುತ್ತೆ. ಪ್ರತಿ ವಿಕೆಟ್ ಬಿದ್ದಾಗಲೂ ಕೊಹ್ಲಿಯ ಸೆಲೆಬ್ರೆಷನ್ ವಿಕೆಟ್ ತೆಗೆದುಕೊಂಡ ಬೌಲರ್ಗಿಂತ ಹೆಚ್ಚೆ ಇರುತ್ತೆ. ಈ ಅಗ್ರೆಸಿಸ್ ಆ್ಯಟಿಟ್ಯೂಡ್, ಬೌಲರ್ಗಳ ಕಾನ್ಫಿಡೆನ್ಸ್ ಬೂಸ್ಟ್ ಮಾಡಿದ್ರೆ, ಎದುರಾಳಿ ಬ್ಯಾಟ್ಸ್ಮನ್ಗಳು ನರ್ವಸ್ ಆಗಿ ಸೈಲೆಂಟ್ ಆಗಿ ಬಿಡ್ತಾರೆ. ಆ ಲೆವೆಲ್ಗೆ ಕೊಹ್ಲಿ ಭಯ ಇಟ್ಟಿದ್ದಾರೆ.
ಎಷ್ಟು ಅಗ್ರೆಸ್ಸಿವ್, ಅಷ್ಟೇ ಭಾವುಕ ವಿರಾಟ್ ಕೊಹ್ಲಿ.!
ಈಗ ಇಷ್ಟೇಲ್ಲಾ ಅಗ್ರೆಸ್ಸೀವ್ ಆಗಿರೋ ಕೊಹ್ಲಿ, ಹಿಂದೊಮ್ಮೆ ಒಂದು ಫ್ರಾಂಕ್ಗೆ ಹೆದರಿ ಗಳಗಳನೆ ಅತ್ತು ಬಿಟ್ಟಿದ್ರು ಅಂದ್ರೆ ನೀವು ನಂಬಲೆಬೇಕು. ಆದ್ರೆ, ಇದು ಈಗಿನ ಕಥೆಯಲ್ಲ..! ಅಂಡರ್-17 ಕಾಲದ ಕಥೆ.
ಸ್ಥಾನ ಕೈ ತಪ್ಪುತ್ತೆ ಅಂತ ಗಳಗಳನೇ ಅತ್ತಿದ್ರಂತೆ ಕೊಹ್ಲಿ.!
ಸದ್ಯ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದಾರೆ. ಇದು ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿರೋದಂತೂ ಸುಳ್ಳಲ್ಲ.! ಇದೇ ರೀತಿ ಅಂಡರ್-17 ದಿನಗಳಲ್ಲೂ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಎದುರಿಸಿದ್ರಂತೆ. ಸತತ ಎರಡು ಮೂರು ಪಂದ್ಯಗಳಲ್ಲಿ ಫ್ಲಾಫ್ ಆಗಿದ್ದ ಬೆನ್ನಲ್ಲೇ, ದೆಹಲಿ ಅಂಡರ್-19 ತಂಡದ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್ ಒಂದು ಪ್ರ್ಯಾಂಕ್ ಮಾಡಿದ್ರಂತೆ. ಇದೇ ನೋಡಿ ಕೊಹ್ಲಿ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದು. ಇದನ್ನ ಸ್ವತಃ ಅಂದಿನ ಕೊಹ್ಲಿ ಟೀಮ್ಮೇಟ್ ಪ್ರದೀಪ್ ಸಂಗ್ವಾನ್ ರಿವೀಲ್ ಮಾಡಿದ್ದಾರೆ.
‘ರೂಮ್ಗೆ ಹೋಗಿ ಗಳಗಳನೆ ಅತ್ತಿದ್ರು’
‘ನಾವು ಪಂಜಾಬ್ನಲ್ಲಿ ಅಂಡರ್-17 ಪಂದ್ಯಗಳನ್ನ ಆಡ್ತಾ ಇದ್ವಿ. ಅಲ್ಲಿ ಕೊಹ್ಲಿ 2-3 ಪಂದ್ಯಗಳಲ್ಲಿ ಪರ್ಫಾಮ್ ಮಾಡಲಿಲ್ಲ. ಆಗ ನಮ್ಮ ಕೋಚ್ ಆಗಿದ್ದಿದ್ದು, ಅಜಿತ್ ಚೌಧರಿ ಅಂತ. ಅವರೇ ಪ್ರ್ಯಾಂಕ್ಕ್ ಮಾಡೋ ನಿರ್ಧಾರ ಮಾಡಿದ್ದು. ಪ್ಲಾನ್ನಂತೇ ಟೀಮ್ ಮೀಟಿಂಗ್ ವೇಳೆ ಅವರು ಟೀಮ್ ಪ್ರಕಟಿಸಿದ್ರು. ಆದ್ರೆ, ಕೊಹ್ಲಿ ಹೆಸರನ್ನ ಹೇಳಲೆ ಇಲ್ಲ. ಆಗ ರೂಮ್ಗೆ ಹೋದ ಕೊಹ್ಲಿ, ಗಳಗಳನೇ ಅತ್ತಿದ್ರು’
-ಪ್ರದೀಪ್ ಸಂಗ್ವಾನ್, ಕೊಹ್ಲಿ ಟೀಮ್ಮೆಟ್
ರೂಮ್ಗೆ ಹೋಗಿ ಅತ್ತಿದ್ದಷ್ಟೇ ಅಲ್ಲ.. ತಮ್ಮ ಕೋಚ್ ರಾಜ್ ಕುಮಾರ್ ಶರ್ಮಾಗೆ ಫೋನ್ ಮಾಡಿಯೂ ಕೊಹ್ಲಿ, ಬೇಸರ ವ್ಯಕ್ತಪಡಿಸಿದ್ರಂತೆ. ಇಷ್ಟೇ ಅಲ್ಲ..! ಇಡೀ ರಾತ್ರಿ ಕೊಹ್ಲಿ ನಿದ್ದೆಯನ್ನೆ ಮಾಡಿರಲಿಲ್ವಂತೆ.
‘ನಿದ್ದೆ ಮಾಡದೆ ಕುಳಿತುಬಿಟ್ಟಿದ್ರು’
‘ಮೀಟಿಂಗ್ ಮುಗಿದ ಬಳಿಕ ಕೊಹ್ಲಿ ನನ್ನ ಬಂದು ಕೇಳಿದ್ರು. ಹೇಳು ಸಂಗ್ವಾನ್, ತಪ್ಪಾಗಿದ್ದು ಎಲ್ಲಿ.? ನಾನು ಈ ಸೀಸನ್ನಲ್ಲಿ ರನ್ ಹೊಡೆದಿದ್ದೇನೆ. ಆಗ ನಾನೂ ಹೇಳಿದೆ ಇದು ತಪ್ಪು ಅಂತಾ. ಆ ದಿನ ರಾತ್ರಿ ನಿದ್ದೆ ಮಾಡದೇ ಕೊಹ್ಲಿ ಕುಳಿತುಬಿಟ್ಟಿದ್ರು. ತಂಡದಲ್ಲಿ ಸ್ಥಾನವಿಲ್ಲ ಅಂದ ಮೇಲೆ ನಿದ್ದೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ರು. ಆಗ ನಾನು ಹೇಳಿದೆ. ನೀನು ಆಡ್ತಿದಿಯಾ, ಇದೊಂದು ಪ್ರ್ಯಾಂಕ್ ಅಂತ’!!
ಪ್ರದೀಪ್ ಸಂಗ್ವಾನ್, ಕೊಹ್ಲಿ ಟೀಮ್ಮೆಟ್
ಅಂದು ಅಂಡರ್-17 ತಂಡದಲ್ಲಿ ಸ್ಥಾನ ಇಲ್ಲ ಅಂತ ಕೊಹ್ಲಿಗೆ, ಇಡೀ ತಂಡ ಫ್ರ್ಯಾಂಕ್ ಮಾಡಿತ್ತು. ಇದೀಗ ಕಳೆದೆರಡು ವರ್ಷಗಳ ಕಳಪೆ ಪರ್ಫಾಮೆನ್ಸ್, ಟೀಮ್ ಇಂಡಿಯಾ ಸ್ಥಾನವನ್ನೇ ಕಿತ್ತುಕೊಳ್ಳುವ ಹಂತಕ್ಕೆ ಬಂದಿದೆ. ಟೀಕೆ ಟಿಪ್ಪಣಿಗಳಂತೂ ಹೆಚ್ಚುತ್ತಲೆ ಇವೆ. ಸದ್ಯ ವಿಶ್ರಾಂತಿಯಲ್ಲಿರೋ ಕೊಹ್ಲಿ, ಮುಂದಿನ ದಿನಗಳಲ್ಲಾದ್ರೂ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲಿ, ಟೀಕೆಗಳಿಗೆ ಬ್ಯಾಟ್ನಿಂದ ಉತ್ತರ ಕೊಡಲಿ ಅನ್ನೋದೇ ಎಲ್ಲರ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post