ಬಿಹಾರ: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಸ್ಥಳದಲ್ಲೇ 8 ಮಂದಿ ದಾರುಣವಾಗಿ ಸಾವನಪ್ಪಿರುವ ಘಟನೆ ಪೂರ್ಣಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಪೂರ್ಣಿಯಾ ಜಿಲ್ಲೆಯ ತಾರಾಬದಿ ಪ್ರದೇಶದಲ್ಲಿ ಮದುವೆ ಸಮಾರಂಭದ ಮುನ್ನಾ ಕಾರ್ಯಕ್ರಮವಾದ ತಿಲಕ ಶಾಸ್ತ್ರವನ್ನು ಮುಗಿಸಿಕೊಂಡು ಕಿಶಾನ್ ಗಂಜ್ ಜಿಲ್ಲೆಯ ನಾನಿಯಾ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಶನಿವಾರ ನಸುಕಿನ ಜಾವ 3 ಗಂಟೆಗೆ ಈ ದುರಂತ ಸಂಭವಿಸಿದೆ ಎಂದು ಬೈಸಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕುಮಾರಿ ತೌಸಿ ಹೇಳಿದರು.
ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಂಜಿಲಾ ಮಾಧ್ಯಮಿಕ ಶಾಲೆಯ ಬಳಿಯ ಪೂರ್ಣಿಯಾ-ಕಿಶಾನ್ಗಂಜ್ ರಾಜ್ಯ ಹೆದ್ದಾರಿಯ ಪಕ್ಕದ ನೀರಿನಿಂದ ತುಂಬಿದ ಕಂದಕಕ್ಕೆ ವಾಹನ ಉರುಳಿದೆ. ಇದರ ಪರಿಣಾಮ ಸ್ಥಳದಲ್ಲೇ ಎಂಟೂ ಜನರು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post