ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಿಂದ, ಕೆ.ಎಲ್ ರಾಹುಲ್ ಹಿಂದೆ ಸರಿದಿದ್ಯಾಕೆ..? ರಾಹುಲ್ಗೆ ಸೀರಿಯಸ್ ಇಂಜುರಿ ಆಗಿತ್ತಾ..? ಅಥವಾ ರಾಹುಲ್ ಬೇಕಂತಲೇ, ಟೂರ್ನಿಯಿಂದ ಹಿಂದೆ ಸರಿದ್ರಾ..? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡಲಾರಂಭಿಸಿದೆ.
ಇಂಜುರಿ ಸಮಸ್ಯೆಯಿಂದ ಕೆ.ಎಲ್ ರಾಹುಲ್, T20ಸರಣಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಆದ್ರೆ ರಾಹುಲ್ ಇಂಜುರಿ, ಅವರ ಅಲಭ್ಯತೆ, ಹಲವು ಪ್ರಶ್ನೆಗಳು, ಅನುಮಾನಗಳನ್ನ ಹುಟ್ಟುಹಾಕಿದೆ. ಭವಿಷ್ಯದಲ್ಲಿ ತಮ್ಮ ನಾಯಕತ್ವಕ್ಕೆ ಕುತ್ತು ಬರದೇ ಇರಲು ರಾಹುಲ್ ಹೀಗೆ ಮಾಡಿದ್ರಾ.? ಸೆಕೆಂಡ್ ಸ್ಟ್ರಿಂಗ್ ತಂಡವನ್ನ ಲೀಡ್ ಮಾಡಲು ರಾಹುಲ್ಗೆ, ಇಷ್ಟ ಇರಲಿಲ್ವಾ..? ಈ ಮಾತುಗಳು ಕ್ರಿಕೆಟ್ ವಲಯದಲ್ಲಿ, ಕೇಳಿ ಬರ್ತಿವೆ.
ಬೇಕಂತಲೇ T20 ಸರಣಿಯಿಂದ ಹಿಂದೆ ಸರಿದ್ರಾ ರಾಹುಲ್..?
ಯೆಸ್..! ಇಂತಹದ್ದೊಂದು ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಕಾರಣ, ಟೀಮ್ ಇಂಡಿಯಾ ನಾಯಕರಾಗಿ ರಾಹುಲ್, ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡ್ಲಿಲ್ಲ. ಈ ವರ್ಷ ಜನವರಿಯಲ್ಲಿ ಟೀಮ್ ಇಂಡಿಯಾ, ಸೌತ್ ಆಫ್ರಿಕಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಿತ್ತು. ಆದ್ರೆ ಆ ಸರಣಿಯಲ್ಲಿ ರಾಹುಲ್ ಪಡೆ, ವೈಟ್ವಾಶ್ ಮುಖಭಂಗ ಅನುಭವಿಸಿತ್ತು. ಈಗ ಮತ್ತೊಮ್ಮೆ ಸರಣಿ ಸೋಲಿನ ಭಯದಿಂದಲೇ, ರಾಹುಲ್ ಟಿ-20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಅದಕ್ಕೆ ಅಷ್ಟೇನೂ ಸೀರಿಯಸ್ ಅಲ್ಲದ ಇಂಜುರಿಯನ್ನ ನೆಪವಾಗಿಸಿಕೊಂಡಿದ್ದಾರೆ ಅನ್ನೋ ಚರ್ಚೆ, ಜೋರಾಗಿ ನಡೀತಿದೆ.
ಒಂದು ವೇಳೆ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ಟಿ-20 ಸರಣಿ ಸೋತ್ರೆ, ಅದರ ಹೊಣೆ ರಾಹುಲ್ ಹೆಗಲೇರಲಿದೆ. ಇದರಿಂದ ಭವಿಷ್ಯದಲ್ಲಿ ರಾಹುಲ್, ಟೀಮ್ ಇಂಡಿಯಾ ಕ್ಯಾಪ್ಟನ್ ರೇಸ್ನಿಂದ ಔಟಾದ್ರೂ ಅಚ್ಚರಿ ಇಲ್ಲ. ಈಗಾಗ್ಲೇ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಫ್ಯೂಚರ್ ಟೀಮ್ ಇಂಡಿಯಾ ಕ್ಯಾಪ್ಟನ್ ಸ್ಥಾನಕ್ಕೆ, ಸ್ಟ್ರಾಂಗ್ ಕಂಟೆಂಡರ್ಗಳಾಗಿದ್ದಾರೆ.
ಯಾರಿಗೂ ಇಲ್ಲದ್ದು, ರಾಹುಲ್ಗ್ಯಾಕೆ ಸ್ಪೆಷಲ್ ಟ್ರೀಟ್ಮೆಂಟ್..?
ಯೆಸ್, ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಬೆಸ್ಟ್ ಬ್ಯಾಟ್ಸ್ಮನ್ ಅನ್ನೋದ್ರಲ್ಲಿ, ಯಾವುದೇ ಡೌಟಿಲ್ಲ. ಆದ್ರೆ ಯಾರಿಗೂ ಇಲ್ಲದ ಸ್ಪೆಷಲ್ ಟ್ರೀಟ್ಮೆಂಟ್, ರಾಹುಲ್ಗ್ಯಾಕೆ ಅನ್ನೋ ಪ್ರಶ್ನೆಯೂ, ಈಗ ಎದ್ದಿದೆ. ಈ ಪ್ರಶ್ನೆಗೆ ಕಾರಣವೂ ಇದೆ. ಅದೇನಂದ್ರೆ, ಟೀಮ್ ಇಂಡಿಯಾದ ಯಾವುದೇ ಆಟಗಾರ ಇಂಜುರಿಗೊಳಗಾದ್ರೂ, ಬೆಂಗಳೂರಿನ NCAನ ರಿಹ್ಯಾಬ್ ಸೆಂಟರ್ನಲ್ಲಿ, ಭಾಗಿಯಾಗ್ತಾರೆ.
ಆದ್ರೆ ರಾಹುಲ್ ಇಂಜುರಿ, ಗಂಭೀರ ಸ್ವರೂಪದ್ದಲ್ಲ..! UKನಲ್ಲೇ ರಾಹುಲ್ಗೆ ಬೇಕಾದ ಚಿಕಿತ್ಸೆ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ರಾಹುಲ್ರನ್ನ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ ಮೊದಲ ಬ್ಯಾಚ್ನಲ್ಲೇ, ಇಂಗ್ಲೆಂಡ್ಗೆ ಕಳಿಸಲು ಬಿಸಿಸಿಐ ನಿರ್ಧರಿಸಿದೆ. ಟೀಮ್ ಇಂಡಿಯಾ ಜುಲೈನಲ್ಲಿ ಏಕೈಕ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿ ಆಡಲಿದೆ.
ರಾಹುಲ್ ಬಿಟ್ರೆ ಮತ್ಯಾರು ಟ್ಯಾಲೆಂಟೆಡ್ ಕ್ರಿಕೆಟರ್ಸೇ ಇಲ್ವಾ.?
ಟೀಮ್ ಮ್ಯಾನೇಜ್ಮೆಂಟ್ಗ್ಯಾಕೆ ರಾಹುಲ್ ಮೇಲೆ ಒಲವು..?
ಯೆಸ್, ಟೀಮ್ ಇಂಡಿಯಾದಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ. ತಂಡದಲ್ಲಿ ಸ್ಥಾನ ಸಿಕ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗೋದು ಡೌಟ್. ಡೊಮೆಸ್ಟಿಕ್ ಹಾಗೂ ಐಪಿಎಲ್ನಲ್ಲಿ ಮಿಂಚ್ತಿರೋ ಹಲವು ಆಟಗಾರರು, ಟೀಮ್ ಇಂಡಿಯಾದಲ್ಲಿ ಆಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಿದ್ರೂ ಬಿಸಿಸಿಐ ಹಾಗೂ ಕೋಚ್ ರಾಹುಲ್ ದ್ರಾವಿಡ್, ಟೀಮ್ ಮ್ಯಾನೇಜ್ಮಂಟ್ಗೆ ಪದೇ ಪದೇ ಇಂಜುರಿಗೊಳಗಾಗ್ತಿರೋ, ರಾಹುಲ್ ಮೇಲ್ಯಾಕೆ ಅಷ್ಟೊಂದು ಒಲವು, ರಾಹುಲ್ ಸ್ಥಾನದಲ್ಲಿ ಬೇರೆಯವರಿಗೆ ಚಾನ್ಸ್ ನೀಡಿ, ಬೆಂಚ್ ಸ್ಟ್ರೆಂಥ್ ಯಾಕೆ ಪರೀಕ್ಷಿಸ್ತಿಲ್ಲ ಅನ್ನೋ ಪ್ರಶ್ನೆಯೂ ಮೂಡಿದೆ.
ಐಪಿಎಲ್ಗೆ ಫಿಟ್, ದೇಶಕ್ಕಾಗಿ ಅನ್ಫಿಟ್ಟಾ..?
ಈ ಸಿರೀಸ್ ರಾಹುಲ್ಗೆ ಲೆಕ್ಕಕ್ಕಿಲ್ವಾ..?
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಮುನ್ನ ರಾಹುಲ್, ಬರೋಬ್ಬರಿ ಎರಡೂ ತಿಂಗಳ ಕಾಲ, ಐಪಿಎಲ್ನಲ್ಲಿ ಭಾಗಿಯಾಗಿದ್ರು. ಆದ್ರೆ, ರಾಹುಲ್ಗೆ ಆಗ ಫಿಟ್ನೆಸ್, ಇಂಜುರಿ ಸಮಸ್ಯೆ ಕಾಡಿರಲಿಲ್ಲ. ಲಕ್ನೋ ಸೂಪರ್ಜೈಂಟ್ಸ್ ತಂಡವನ್ನ ಮುನ್ನಡೆಸಿದ್ದ ರಾಹುಲ್, ಒಂದೇ ಒಂದು ಪಂದ್ಯವನ್ನೂ ಮಿಸ್ ಮಾಡಿಕೊಂಡಿರಲಿಲ್ಲ. ಅದ್ರೀಗ ದೇಶಕ್ಕಾಗಿ ಕಣಕ್ಕಿಳಿಯೋ ಮುನ್ನವೇ ರಾಹುಲ್ಗೆ, ಇಂಜುರಿ ಕಾಣಿಸಿಕೊಂಡಿರೋದು ಅಚ್ಚರಿಗೆ ಕಾರಣವಾಗಿದೆ.
ಅದೇನೆ ಇರಲಿ, ಇನ್ನು ಮುಂದಾದ್ರೂ ರಾಹುಲ್ ತಮ್ಮ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಲಿ, ತಮಗೆ ಸಿಕ್ಕ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಲಿ. ಆ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ ಅನ್ನೋದ ಫ್ಯಾನ್ಸ್ ಆಶಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post