ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಅವಹೇಳನ ಮಾಡಿರುವ ಆರೋಪದ ಮೇಲೆ ಬಿಜೆಪಿ ನಾಯಕ ಜಿಟ್ಟಾ ಬಾಲಕೃಷ್ಣ ರೆಡ್ಡಿ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ನಾಟಕದಲ್ಲಿ ಕೆಸಿಆರ್ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗಿದೆ ಎಂದು ಆರೋಪಿಸಿ ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯ ವೈ ಸತೀಶ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು.
ಸತೀಶ್ ರೆಡ್ಡಿ ತಮ್ಮ ದೂರಿನಲ್ಲಿ, ಬಂಡಿ ಸಂಜಯ್, ಜಿಟ್ಟಾ ಬಾಲಕೃಷ್ಣ ರೆಡ್ಡಿ, ರಾಣಿ ರುದ್ರಮ್ಮ, ಬೊಡ್ಡು ಯೆಲ್ಲಣ್ಣ ಅಲಿಯಾಸ್ ಸರುವು ಯೆಲ್ಲಣ್ಣ ಹಾಗೂ ಅವರ ತಂಡ ಜನರ ದಾರಿ ತಪ್ಪಿಸುವ ಉದ್ದೇಶದಿಂದ ಸಿಎಂ ಹಾಗೂ ಸರ್ಕಾರದ ವಿರುದ್ಧ ಸುಳ್ಳು ಆರೋಪ ಹೊರಿಸಿ, ಸರ್ಕಾರದ ಯೋಜನೆಗಳನ್ನು ದೂಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗೆ ಅವಹೇಳನ ಮಾಡಿರುವ ಆರೋಪದಡಿ ಜಿಟ್ಟಾ ಬಾಲಕೃಷ್ಣ ರೆಡ್ಡಿ ಅವರನ್ನು ಹಯಾತ್‌ನಗರ ಪೊಲೀಸರು ಹೈದರಾಬಾದ್‌ನ ಘಾಟ್‌ಸೇಕರ್ ಟೋಲ್ ಗೇಟ್ ಬಳಿ ಬಂಧಿಸಿದ್ದಾರೆ.
Registered my complaint against BJP Leaders @bandisanjay_bjp , Jitta Balakrishna Reddy etc for disrespecting, abusing & using indecent utterances on Hon’ble CM KCR garu & TS Govt schemes via a skit program.
Will not be tolerating anyone who disrespects our leader KCR garu ! pic.twitter.com/uqReY5EkqH
— YSR (@ysathishreddy) June 3, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post