ಕ್ರಿಕೆಟ್ನಲ್ಲಿ ನಾಯಕತ್ವ ಮತ್ತು ನಾಯಕನಿಗೆ ಇರುವ ವ್ಯತ್ಯಾಸ ಏನೆಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿವರಿಸಿದ್ದಾರೆ.
ನನ್ನ ಪ್ರಕಾರ ಈ ಎರಡು ಪದಗಳಿಗೂ ತುಂಬಾ ವ್ಯತ್ಯಾಸ ಇದೆ. ನಾಯಕತ್ವದಲ್ಲಿ ಆಟಗಾರರ ಮೇಲೆ ಹೇಗೆ ವಿಶ್ವಾಸ ಇಡುತ್ತೀರಿ ಎಂಬುದು ಸವಾಲಿನ ಕೆಲಸ. ನನಗನಿಸಿದ ಪ್ರಕಾರ ನಾಯಕತ್ವ ಎಂದರೆ ಮೈದಾನದಲ್ಲಿ ತಂಡವನ್ನ ಮುನ್ನಡೆಸುವುದು, ನಾಯಕ ಎಂದರೆ ತಂಡವನ್ನ ಕಟ್ಟುವುದು. ನಾನು ಲೀಡರ್ ತರ ತಂಡವನ್ನ ಮುನ್ನಡೆಸಿದೆ ಎಂದು ಹೇಳಿದ್ದಾರೆ.
ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಎಲ್ಲರೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೇನೆ. ಹಾಗಂತ ನಾಯಕತ್ವ ಪಟ್ಟಕ್ಕಾಗಿ ಪೈಪೋಟಿ ನಡೆಸಿದವನಲ್ಲ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post