ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ, ಕ್ಯಾಪ್ಟನ್ಸಿಗಾಗಿ ನಾನು ಯಾವುದೇ ಸ್ಪರ್ಧೆ ನಡೆಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಎಲ್ಲರೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ರು. ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೇನೆ. ಹಾಗಂತ ನಾಯಕತ್ವ ಪಟ್ಟಕ್ಕಾಗಿ ಪೈಪೋಟಿ ನಡೆಸಿದವನಲ್ಲ ಎಂದಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದರು. ಇದಾದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕೊಹ್ಲಿ ನಡುವೆ ಮುನಿಸಾಗಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ನಡೆದವು.
ಇನ್ನೊಂದೆಡೆ ಗಂಗೂಲಿ ಚಿನ್ಗೆ, ಹೊಸ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ. ಸಚಿನ್ ತೆಂಡುಲ್ಕರ್, ವಿಶ್ವ ಕ್ರಿಕೆಟ್ನ ಮಾಸ್ಟರ್ ಪೀಸ್.. ಕ್ರಿಕೆಟರ್ ಆಗಿ ಲೆಕ್ಕವಿಲ್ಲದಷ್ಟು ಸಾಧನೆ ಮಾಡಿರುವ ಸಚಿನ್, ಅಸಂಖ್ಯ ದಾಖಲೆಗಳ ಒಡೆಯ. ಭಾರತೀಯ ಕ್ರಿಕೆಟ್ಗೆ ತನ್ನದೇ ಆದ ಕೊಡುಗೆ ನೀಡಿರುವ ಸಚಿನ್ಗೆ, ಈಗ ಬಿಸಿಸಿಐನಲ್ಲಿ ಪ್ರಮುಖ ಹುದ್ದೆಯೊಂದನ್ನ ನೀಡೋಕೆ ಗಂಗೂಲಿ ಆ್ಯಂಡ್ ಟೀಮ್ ಸಜ್ಜಾಗಿದೆ. ಇದು ಕೂಡ ತಮ್ಮ ಮತ್ತು ಸಚಿನ್ ನಡುವೆ ಕ್ಯಾಪ್ಟನ್ಸಿ ವಿಚಾರವಾಗಿ ಯಾವ ಸ್ಪರ್ಧೆಯೂ ಇರಲಿಲ್ಲ ಎಂಬುದು ಹೇಳುತ್ತದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post