ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ವಿಕ್ರಮ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ 10 ದಿನದಲ್ಲೇ ಬರೋಬ್ಬರಿ 300 ಕೋಟಿ ರೂಪಾಯಿ ಲೂಟಿ ಮಾಡಿದೆ.
ಕೇವಲ ತಮಿಳುನಾಡಿನಲ್ಲಿಯೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕರ್ನಾಟಕ, ತೆಲಗು ರಾಜ್ಯಗಳಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾದಿಂದಾಗಿ ಕಮಲ್ ಹಾಸನ್ಗೆ ಚಿತ್ರರಂಗದಲ್ಲಿ ಮತ್ತೆ ಆಗ್ರಸ್ಥಾನ ನೀಡಿದೆ.
ಸಿನಿಮಾ ವಿಶ್ಲೇಷಕರು ಹಾಗೂ ಸಿನಿಮಾ ವಿತರಕ ಉದಯ ನಿಧಿ ಅವರ ಪ್ರಕಾರ ಈ ಸಿನಿಮಾ ವಾರಂತ್ಯದಲ್ಲಿಯೇ ಬಾಕ್ಸ್ ಆಫೀಸ್ ದಾಖಲೆಗಳನ್ನ ಮುರಿಯುವ ಎಲ್ಲಾ ಲಕ್ಷಣಗಳನ್ನ ಹೊಂದಿವೆ ಅಂತ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಅವರ ಲೇಟೆಸ್ಟ್ ಮೂವಿ ‘ವಿಕ್ರಮ್’ ಜೂನ್ 3 ರಂದು ತೆರೆಕಂಡಿದ್ದು, ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುತ್ತ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿರುವ ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕಣಗರಾಜ್ಗೆ Lexus ಕಾರನ್ನ ಗಿಫ್ಟ್ ಮಾಡಿದ್ದಾರೆ. ಜೊತೆಗೆ ಚಿತ್ರದ 13 ಸಹಾಯ ನಿರ್ದೇಶಕರಿಗೆ ತಲಾ ಒಂದೊಂದು TVS Apache RTR 160 ಬೈಕ್ಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post