ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿ ಅಭಿಮಾನಿಯೊಬ್ಬರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತೆಲಂಗಾಣದ ರವಿಕುಮಾರ್ ಎನ್ನುವವರು ಪುನೀತ್ ರಾಜ್ಕುಮಾರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕಾಲ್ನಡಿಗೆ ಅಭಿಯಾನ ಆರಂಭಿಸಿದ್ದಾರೆ.
ಇವರು ತೆಲಂಗಾಣ ಮೂಲದ ನಿವೃತ್ತ ಸಿಆರ್ಪಿಸಿ ಇನ್ಸ್ ಪೆಕ್ಟರ್ ಆಗಿದ್ದಾರೆ. 120 ದಿನಗಳಲ್ಲಿ 3200 ಕಿಲೋಮೀಟರ್ ನಡೆಯುವ ಗುರಿ ಹೊಂದಿರುವ ರವಿಕುಮಾರ್, ಈಗಾಗಲೇ 2100 ಕಿಲೋಮೀಟರ್ ಪೂರ್ಣಗೊಳಿಸಿದ್ದಾರೆ.
ಇನ್ನು 98 ದಿನಗಳ ಹಿಂದೆ ಈ ಅಭಿಯಾನ ಆರಂಭಿಸಿರುವ ರವಿ ಕುಮಾರ್, ಪ್ರತಿನಿತ್ಯ 6 ರಿಂದ 7 ಗಂಟೆಗಳ ಕಾಲ ಕಾಲ್ನಿಡಿಗೆಯಲ್ಲಿ ಕ್ರಮಿಸುತ್ತಿದ್ದಾರೆ. ಈ ಮೂಲಕ ಅಪ್ಪುಗೆ ಭಾರತ ರತ್ನ ನೀಡಬೇಕು ಅದಕ್ಕಾಗಿ ಈ ಮೂಲಕ ಹೋರಾಟ ಮಾಡ್ತಿದ್ದೀನಿ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post