ಈ ಬಾರಿಯ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್, RCB ಪರ ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು. ಒಂದೆರೆಡು ಪಂದ್ಯಗಳನ್ನ ಬಿಟ್ರೆ, ಆಲ್ಮೋಸ್ಟ್ ಎಲ್ಲಾ ಮ್ಯಾಚ್ಗಳಲ್ಲೂ DK, RCBಯ ಸೇವಿಯರ್ ಆಗಿದ್ರು. ಐಪಿಎಲ್ ಸೀಸನ್ 15ರಲ್ಲಿ ದಿನೇಶ್ ಕಾರ್ತಿಕ್, 16 ಪಂದ್ಯಗಳಿಂದ 341 ರನ್ ಸಿಡಿಸಿದ್ರು.
ಆದ್ರೆ ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್, ಅಷ್ಟಾಗಿ ಮಿಂಚ್ತಿಲ್ಲ. ಹಲವು ವರ್ಷಗಳ ನಂತರ ತಂಡಕ್ಕೆ ಎಂಟ್ರಿ ನೀಡಿದ ಈ ಸೀನಿಯರ್ ಪ್ಲೇಯರ್, ತಮ್ಮ ಮೇಲಿನ expectationsನ ರೀಚ್ ಮಾಡುವಲ್ಲಿ ವಿಫರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಮೂರು ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ದಿನೇಶ್ ಕಾರ್ತಿಕ್, 119ರ ಸ್ಟ್ರೈಕ್ರೇಟ್ನಲ್ಲಿ ಕೇವಲ 37 ರನ್ ಮಾತ್ರ ಗಳಿಸಿದ್ದಾರೆ.
ಕಾರ್ತಿಕ್ ಫೇಲ್ಯೂರ್ಗೆ ಬ್ಯಾಟಿಂಗ್ ಆರ್ಡರ್ ಕಾರಣ ಎನ್ನಲಾಗ್ತಿದೆ.
ಮೊದಲ ಪಂದ್ಯದಲ್ಲಿ ಕಾರ್ತಿಕ್ 6ನೇ ಕ್ರಮಾಂದಕದಲ್ಲಿ ಕಣಕ್ಕಿಳಿದಿದ್ರು. ಇನ್ನು ನಂತರದ ಎರಡು ಪಂದ್ಯಗಳಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post