ರಾಜಾರಾಣಿ ಸೀಸನ್ 1ರಲ್ಲಿ ಸಖತ್ ಲೈವ್ಲಿಯಾಗಿ ಪರ್ಫಾಮ್ ಮಾಡಿದ್ರು ಶ್ರೀಕಾಂತ್. ಅವರ ಹ್ಯೂಮರ್ಸ್ ನೇಚರನ್ನ ವೀಕ್ಷಕರು ಇಷ್ಟಪಟ್ಟಿದ್ದರು. ಇದೇ ಕಾರಣಕ್ಕೆ ಗಿಚ್ಚಿ ಗಿಲಗಿಲಿಗೆ ಎಂಟ್ರಿ ಕೊಟ್ಟಿದ್ದರು. ಕಾರ್ತಿ-ಶ್ರೀಕಾಂತ್ ಪೇರ್ಗೆ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.
ಸದ್ಯ ಹೊಸ ವಿಷ್ಯ ಏನಂದ್ರೆ ಶ್ರೀಕಾಂತ್ ಗಿಚ್ಚಿ ಗಿಲಿಗಿಲಿಯಿಂದ ಹೊರ ನಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಶ್ರೀಕಾಂತ್ ಅವರು ಶೋನಿಂದ ಹೊರಬಂದಿದ್ದಾರೆ. ಇನ್ಮುಂದೆ ಕಾರ್ತಿ ಪೇರ್ ಆಗಿ ಯಾರು ಬರಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ರೋಹಿತ್. ನನ್ನಮ್ಮ ಸೂಪರ್ ಸ್ಟಾರ್ ಸೂಪರೋ ರಂಗ್ ಗಿಚ್ಚಿ ಗಿಲಿಗಿಲಿಗೆ ಬರ್ತಿದ್ದಾನೆ. ‘ನೀನಾ’ ಅಂತಾನೇ ಎಲ್ಲರ ಮನಸ್ಸು ಗೆದ್ದ ಮುದ್ದು ಪುಟಾಣಿ ರೋಹಿತ್ ಕಾರ್ತಿ ಜೊತೆ ಸೇರಿ ನಗೆಗಡಲಲ್ಲಿ ತೆಲಿಸಲಿದ್ದಾನೆ. ನನ್ನಮ್ಮ ಸೂಪರ್ ಸ್ಟಾರ್ನಲ್ಲಿ ರೋಹಿತ್ಗೆ ಸಪರೇಟ್ ಫ್ಯಾನ್ ಬೇಸ್ ಇತ್ತು. ಅವನು ಏನೇ ಮಾಡಿದ್ರು ವೀಕ್ಷಕರು ಇಷ್ಟ ಪಡ್ತಿದ್ರು. ಈಗಲೂ ರೋಹಿತ್ಗೆ ಅದೇ ಕ್ರೇಜ್ಯಿದೆ. ರೋಹಿತ್ ಬೆಸ್ಟ್ ಫ್ರೆಂಡ್ ವನ್ಷಿಕಾ ಕೂಡ ಶೋನಲ್ಲಿ ಇರೋದ್ರಿಂದ ಭರ್ಜರಿ ಎಂಟರ್ಟೈನ್ಮೆಂಟ್ ಪಕ್ಕಾ.
ಒಟ್ಟಿನಲ್ಲಿ ಗೆಸ್ಟ್ ರೀತಿ ಬಂದು ಹೋಗ್ತಿದ್ದ ರೋಹಿತ್ ಮತ್ತೆ ಕಂಪ್ಲೀಟ್ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸೂಪರೋ ರಂಗನಿಗೆ ಮತ್ತಷ್ಟು ಯಶಸ್ಸು ಸಿಗಲಿ. ಆಲ್ ದಿ ಬೆಸ್ಟ್ ರೋಹಿತ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post