ನವದೆಹಲಿ: ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಯುವಕರು ಪ್ರತಿಭಟನೆಗೆ ಇಳಿದಿದ್ದಾರೆ. ಸೇನೆಗೆ ಸೇರೋ ಮಹತ್ವಾಂಕ್ಷಿಯೊಂದಿಗೆ ಪರೀಕ್ಷೆ ಬರೆದು ನೇಮಕವಾಗಿದ್ದ ಹಾಗೂ ತರಬೇತಿ ಪಡೆದು ಸೇನಾ ನೇಮಕಾತಿಗಾಗಿ ಕಾಯುತ್ತಿದ್ದ ಯುವಕರ ಆತಂಕಕ್ಕೆ ಕೇಂದ್ರದ ಯೋಜನೆ ಕಾರಣವಾಗಿದೆ. ಹೀಗಾಗಿ, ಇದನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಮಂಗಳವಾರವಷ್ಟೇ ಅಗ್ನಿಪಥ್ ಯೋಜನೆಯನ್ನು ಘೋಷಣೆ ಮಾಡಿತ್ತು. ಯೋಜನೆಯನ್ನು ಬಿಹಾರ್ ಮುಜಫರ್ ನಗರ್, ಬಕ್ಸರ್ ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಸ್ಪರ್ಧಾಳುಗಳು ಪ್ರತಿಭಟನೆಗೆ ಇಳಿದಿದ್ದಾರೆ. ನಮಗೆ ಕೆಲಸ ಕೊಡಿ, ಇಲ್ಲ ಸಾಯಿಸಿ ಬಿಡಿ.. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಕೂಗುತ್ತಾ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಸೇನಾ ನೇಮಕಾತಿ ನಡೆಯುವ ಉತ್ತರ ಪ್ರದೇಶದ ಲಕ್ನೋ ಕೇಂದ್ರ ಹಾಗೂ ಬಿಹಾರದ ಬಿರಾನಿ, ರಾಜಸ್ಥಾನ ಸೇರಿದಂತೆ ಹಲವು ಸ್ಥಳಗಳಲ್ಲಿ ಬೃಹತ್ ರ್ಯಾಲಿ ನಡೆಸಿ ರಸ್ತೆ ತಡೆದು ಟಯರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ರೈಲು ತಡೆಯನ್ನ ನಡೆಸಿದ್ದಾರೆ. ಚಾಪ್ರಾ ಎಂಬಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Candidates protest at #Bihar's #Saharsa railway station against Centre's new #AgnipathRecruitmentScheme, a radical recruitment plan for the armed forces.#IndianArmy #AgnipathScheme #Agniveers #Agnipath pic.twitter.com/WhFA7mJ6fU
— Hate Detector 🔍 (@HateDetectors) June 16, 2022
ಪ್ರತಿಭಟನೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ತಮ್ಮ ಸಂಕಷ್ಟ ತೋಡಿಕೊಂಡಿರುವ ಅಭ್ಯರ್ಥಿಗಳು, ಕಳೆದ ಎರಡು ವರ್ಷಗಳಿಂದ ನಾವು ತರಬೇತಿ ಪಡೆದು ಸಾಮಾನ್ಯ ಸೇನಾ ನೇಮಕಾತಿಗಾಗಿ ಕಾಯುತ್ತಿದ್ದೇವು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿಯನ್ನು ನಿಲ್ಲಿಸಲಾಗಿತ್ತು. ಇದುವರೆಗೂ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಆರಂಭ ಮಾಡಿಲ್ಲ. ಕಳೆದ ಎರಡು ವರ್ಷಗಳಿಂದ ಕಾಯುತ್ತಿರೋ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸೇನೆ ವಯೋಮಿತಿಯನ್ನು ಸಡಿಲಿಸಬೇಕು ಎಂದು ಕೋರಿದ್ದಾರೆ.
सेना बहाली पूरी करने और #AgnipathYojana के खिलाफ बिहार के अलग-अलग जिलों में युवाओं का प्रदर्शन. @QuintHindi @TheQuint pic.twitter.com/uyMaCZgfxR
— Shadab Moizee (@shadabmoizee) June 15, 2022
ಅಗ್ನಿಪಥ್ ಯೋಜನೆ ಅಡಿ 17.5 ವರ್ಷದಿಂದ 21 ವರ್ಷಕ್ಕೆ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಸರ್ಕಾರ ನಮ್ಮೊಂದಿಗೆ ಪಬ್ ಜೀ ತರ ಗೇಮ್ ಆಡ್ತಿದೆ. ನೇಮಕಾತಿ ನಿಲ್ಲಿಸಿದ್ದ ಬಗ್ಗೆ ಇದುವರೆಗೂ ಯಾವುದೇ ಜನಪ್ರತಿನಿಧಿ ಕೂಡ ಧ್ವನಿ ಎತ್ತಿರಲಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇಸುವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ರಾಜಕಾರಣಿಗಳು, ಶಾಸಕರು, ಸಂಸದರು, ಜನ ಪ್ರತಿನಿಧಿಗಳಿಗೆ ಐದು ವರ್ಷಗಳ ಅವಧಿಯನ್ನು ನೀಡಲಾಗಿದೆ. ಆದರೆ ನಾವು 4 ವರ್ಷ ಅಗ್ನಿವೀರ್ ಆಗಿ ತರಬೇತಿ ಪಡೆದ ಏನ್ಮಾಡಬೇಕು ಎಂದು ಹಲವು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
#Chapra Train set on fire- #Agnipath protest pic.twitter.com/o6nlnqqy8D
— Utkarsh Singh (@utkarshs88) June 16, 2022
#अग्निवीर #Agniveers #Agnipath #tourofduty protest from maner, bihar@HansrajMeena @yadavtejashwi pic.twitter.com/d2K9DD0Fu0
— Dhiraj Kumar (@DhirajK22702206) June 15, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post