ನವದೆಹಲಿ: ಬಿಜೆಪಿಯ ಮಾಜಿ ವಕ್ತಾರೆ ಪ್ರವಾದಿ ಮೊಹಮ್ಮದ್ ಕುರಿತ ನೀಡಿದ್ದ ಹೇಳಿಕೆ ಖಂಡಿಸಿದ್ದ ಗಲ್ಫ್ ದೇಶ ಕುವೈತ್, ತನ್ನ ದೇಶದ ಸೂಪರ್ ಮಾರ್ಕೆಟ್ಗಳಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನು ತೆರವು ಮಾಡುತ್ತಿದೆ ಎಂಬ ವರದಿಗಳು ಪ್ರಸಾರವಾಗಿತ್ತು. ಅಲ್ಲದೇ ಭಾರತದಲ್ಲಿ ಮುಸ್ಲಿಂರ ವಿರುದ್ಧ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕುವೈತ್ ಆರೋಪಿಸಿತ್ತು. ಆದರೆ ಈ ವಿವಾದ ನಡುವೆಯೇ ಭಾರತದಿಂದ ಸುಮಾರು 192 ಮೆಟ್ರಿಕ್ ಟನ್ ಗೋಮಯವನ್ನು (cow dung) ಆಮದು ಮಾಡಿಕೊಳ್ಳಲು ಕುವೈತ್ ಮುಂದಾಗಿದೆ.
ಹೌದು, ಜೈಪುರ ಮೂಲದ ಸಂಸ್ಥೆಗೆ ಗೋಮಯ ಪೂರೈಕೆ ಮಾಡುವಂತೆ ಕುವೈತ್ ಅರ್ಡರ್ ಕೊಟ್ಟಿದ್ದು, ಇದೇ ಮೊದಲ ಬಾರಿಗೆ ಭಾರತದಿಂದ ಕುವೈತ್ಗೆ ಸಗಣಿ ಪೂರೈಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಕುರಿತಂತೆ ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಮಾಹಿತಿ ಹಂಚಿಕೊಂಡಿದ್ದು, ಜೈಪುರ ಮೂಲದ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಗಣಿ ಪೂರೈಕೆ ಮಾಡುವ ಅರ್ಡರ್ರನ್ನು ಸ್ವೀಕರಿಸಿದೆ ಎಂದು ತಿಳಿಸಿದ್ದಾರೆ.
ಕಂಪನಿ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಮಾಹಿತಿ ಹಂಚಿಕೊಂಡಿದ್ದು, ಕುವೈತ್ಗೆ ಭಾರತದಿಂದ ಹಸುವಿನ ಸಗಣಿ ಆರ್ಡರ್ ಕಳುಹಿಸಿದ್ದು ಬಹುಶಃ ಇದೇ ಮೊದಲು. ಬೃಹತ್ ಕಂಟೈನರ್ಗಳಲ್ಲಿ ಹಸುವಿನ ಸಗಣಿ ಪ್ಯಾಕಿಂಗ್ ಮಾಡುವ ಕೆಲಸ ನಡೆಯುತ್ತಿದೆ. ಜೈಪುರದ ಟೋಂಕ್ ರಸ್ತೆಯಲ್ಲಿರುವ ಶ್ರೀಪಿಂಜ್ರಾಪೋಲ್ ಗೌಶಾಲಾದಲ್ಲಿ ನಡೆಯುತ್ತಿದೆ. ಕುವೈತ್‌ನ ಕೃಷಿ ವಿಜ್ಞಾನಿಗಳು ಹಸುವಿನ ಸಗಣಿ ಖರ್ಜೂರ ಬೆಳೆಯ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ ಎಂದು ಕಂಡುಕೊಂಡಿದ್ದಾರೆ. ಇದೇ ರೀತಿ ಹಲವು ದೇಶಗಳು ಸಂಶೋಧನೆಗಳನ್ನು ನಡೆಸಿ ಹಸುವಿನ ಸಗಣಿ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಕಂಡು ಕೊಂಡಿವೆ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post