ಬೆಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಫಾತಿಮಾ ಓಮರೀ ಬಂಧಿತ ಆರೋಪಿ.
ಕಮನಹಳ್ಳಿ ಬಳಿ ಇರುವ ಕಾಫಿ ಡೇ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಳು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಬಂಧಿತ ಮಹಿಳೆಯಿಂದ 1.5 ಲಕ್ಷ ಬೆಲೆ ಬಾಳುವ ಎಂಡಿ ಕ್ರಿಸ್ಟಲ್ ಮಾದಕ ವಸ್ತು ಹಾಗೂ ಒಂದು ಐ ಪೋನ್ನನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಆಫ್ರಿಕಾದ ತಾಂಜೇನಿಯಾ ದೇಶದಿಂದ 2018ರಲ್ಲಿ ಟೂರಿಸ್ಟ್ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿದ್ದಳು. ಮೀಸಾ ಅವಧಿ ಮುಗಿದಿದ್ದರು ಕೂಡ ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹೈ-ಫೈ ಜೀವನವನ್ನು ನಡೆಸುತ್ತಿದ್ದಳು. ಈಕೆಯ ಗಂಡನು ಮಾದಕ ದಂಧೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾನೆ. ಗಂಡನನ್ನು ಜೈಲಿನಿಂದ ಹೊರತರಲು ಮಾದಕ ವಸ್ತುವನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ.
ಗಂಡ ಕೆಲ್ವಿನ್ ಜೋಸೆಫ್ನನ್ನ ಸಂಪಿಗೆಹಳ್ಳಿ ಪೊಲೀಸರು ಒಂದು ವರ್ಷದ ಹಿಂದೆ ಬಂಧಿಸಿದ್ದರು. ಗಂಡನ ಬಂಧನದ ಬಳಿಕ ಆತನ ದಂಧೆ ಮುಂದುವರೆಸಿದ್ದಳು. ಸದ್ಯ ಬಂಧಿತ ಆರೋಪಿಯ ಮೇಲೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post