ಪಾಕಿಸ್ತಾನ: ಆರ್ಥಿಕತೆಯ ಅದ್ವಾನಕ್ಕೆ ಒಳಗಾಗಿರುವ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನ ಭರಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಅಂತ ಪಾಕಿಸ್ತಾನದ ಫೆಡರಲ್ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಒಂದೇ ಸಲಕ್ಕೆ 24 ರೂಪಾಯಿಗೆ ಏರಿಕೆಯಾಗಿದೆ.
ಈ ಮೂಲಕ ಪಾಕ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 233 ರೂಪಾಯಿ, ಡೀಸೆಲ್ ಬೆಲೆ 263 ರೂಪಾಯಿ, ಸೀಮೆ ಎಣ್ಣೆ ಬೆಲೆ 211 ರೂಪಾಯಿ ಹಾಗೂ ಲೈಟ್ ಡೀಸೆಲ್ ಬೆಲೆ 207 ರೂಪಾಯಿಗೆ ಏರಿಕೆಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post