‘ಅಮ್ಮಾ’ ಇದು ಕೇವಲ ಪದವಲ್ಲ. ಪ್ರೀತಿ, ಸಹನೆ, ವಿಶ್ವಾಸ ಹೀಗೆ.. ಹಲವು ಅಂಶಗಳನ್ನು ಒಳಗೊಂಡಿರುವ ಜೀವನದ ಭಾವ ‘ಅಮ್ಮಾ’. ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ, ಯಾವುದೇ ದೇಶವಿರಲಿ, ಪ್ರತಿ ಮಗುವಿನ ಮನಸ್ಸಿನಲ್ಲಿ ಅಮೂಲ್ಯವಾದ ಪ್ರೀತಿ ಸಿಗೋದು ತಾಯಿಯದ್ದು ಮಾತ್ರ. ಅಮ್ಮಾ, ನಮ್ಮ ದೇಹವನ್ನು ಮಾತ್ರವಲ್ಲದೆ ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ, ನಮ್ಮ ಆತ್ಮ ವಿಶ್ವಾಸವನ್ನು ರೂಪಿಸುತ್ತಾಳೆ. ಇದನೆಲ್ಲಾ ತನ್ನ ಮಕ್ಕಳಿಗಾಗಿ ಮಾಡುತ್ತ ತನ್ನನ್ನೇ ತಾನು ಮರೆತುಬಿಡುತ್ತಾಳೆ.
ನರೇಂದ್ರ ಮೋದಿ, ಪ್ರಧಾನಿ
ಹೌದು ‘ಅಮ್ಮಾ’ ಇದು ಕೇವಲ ಪದವಲ್ಲ.. ಇದು ಜೀವನದ ಆತ್ಮ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಅವರ ತಾಯಿ ಹೀರಾಬೇನ್ ಅವರು ಇಂದು 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಮ್ಮನ ಕುರಿತ ತಮ್ಮ ವೆಬ್ಸೈಟ್ನಲ್ಲಿ ಸುದೀರ್ಘ ನೆನಪುಗಳನ್ನ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೀರಾಬೆನ್ಗೆ 100ರ ಸಂಭ್ರಮ- ಶತಾಯುಷಿ ಅಮ್ಮನ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ಮೋದಿ
‘ಅಮ್ಮನ ಮನಸ್ಸಿನ ಶಕ್ತಿ ಇನ್ನೂ ಹಾಗೆಯೇ ಇದೆ’
ನಿಮ್ಮೊಂದಿಗೆ ಇಂದು ನನ್ನ ಸಂತೋಷ, ನನ್ನ ಅದೃಷ್ಟವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ತಾಯಿ, ಹೀರಾಬಾ ಇಂದು ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಂದರೆ ಅವರ ಜನ್ಮ ಶತಮಾನೋತ್ಸವ ವರ್ಷ ಆರಂಭವಾಗುತ್ತಿದೆ. ಇವತ್ತು ಅಪ್ಪ ಇದ್ದಿದ್ದರೆ ಅವರಿಗೂ ಕಳೆದ ವಾರ 100 ವರ್ಷ ತುಂಬುತ್ತಿತ್ತು.ಕಳೆದ ವಾರ ನನ್ನ ಸೋದರಳಿಯ ಗಾಂಧಿನಗರದಿಂದ ಅಮ್ಮನ ಕೆಲವು ವೀಡಿಯೊಗಳನ್ನು ಕಳುಹಿಸಿದ್ದಾರೆ. ಕೆಲವು ಚಿಕ್ಕ ಹುಡುಗರು ಮನೆಗೆ ಬಂದಿದ್ದಾರೆ. ತಂದೆಯ ಚಿತ್ರವನ್ನು ಕುರ್ಚಿಯ ಮೇಲೆ ಇರಿಸಲಾಗಿದೆ. ಭಜನೆ ಕೀರ್ತನೆ ನಡೆಯುತ್ತಿದೆ. ಅಮ್ಮಾ ಸ್ತೋತ್ರಗಳನ್ನು ಹಾಡುತ್ತಿದ್ದಾರೆ. ಸಂತೋಷದಿಂದ ಮಂಜಿರ ನುಡಿಸುತ್ತಿದ್ದಾರೆ. ಅಮ್ಮ ಈಗಲೂ ಹಾಗೆಯೇ ಇದ್ದಾರೆ. ದೇಹದ ಶಕ್ತಿ ಕಡಿಮೆಯಾಗಿರಬಹುದು ಆದರೆ ಮನಸ್ಸಿನ ಶಕ್ತಿ ಹಾಗೆಯೇ ಇದೆ.
ಇಲ್ಲಿ ಹುಟ್ಟುಹಬ್ಬವನ್ನ ಆಚರಿಸುವ ಸಂಪ್ರದಾಯ ನಮಗಿಲ್ಲ. ಆದರೆ ನಮ್ಮ ಕುಟುಂಬದ ಹೊಸ ತಲೆಮಾರಿನ ಮಕ್ಕಳು, ಅಪ್ಪನ ಜನ್ಮ ಶತಮಾನೋತ್ಸವದಲ್ಲಿ 100 ಗಿಡಗಳನ್ನು ನೆಟ್ಟಿದ್ದಾರೆ. ಇಂದು ನನ್ನ ಜೀವನದಲ್ಲಿ ಒಳ್ಳೆಯದಾಗಿದ್ದರೆ ಅದೆಲ್ಲಾ ತಂದೆ-ತಾಯಿಯ ಕೊಡುಗೆ.
ಅಮ್ಮ ಎಷ್ಟು ಸಾಮಾನ್ಯಳೋ ಅಷ್ಟೇ ಅಸಾಧಾರಣದವಳು. ಪ್ರತಿಯೊಬ್ಬ ತಾಯಿಯಂತೆಯೇ.. ಅಮ್ಮನ ಬಗ್ಗೆ ನಾನು ಬರೆದಿರೋದನ್ನ ಓದುವಾಗ ನಿಮಗೂ ಅನಿಸಬಹುದು.. ಹೇ, ನನ್ನ ತಾಯಿಯೂ ಹೀಗೆಯೇ, ನನ್ನ ತಾಯಿಯೂ ಹಾಗೆಯೇ ಮಾಡುತ್ತಾಳೆ ಎಂದು. ಇದನ್ನು ಓದುವಾಗ ನಿಮ್ಮ ಮನಸ್ಸಿನಲ್ಲಿ ನಿಮ್ಮ ತಾಯಿಯ ಚಿತ್ರ ಮೂಡುತ್ತದೆ. ತಾಯಿಯ ತಪಸ್ಸು ತನ್ನ ಮಗುವನ್ನು ಸರಿಯಾದ ವ್ಯಕ್ತಿಯನ್ನಾಗಿ ಮಾಡುತ್ತದೆ.
ತಾಯಿ ಒಬ್ಬ ವ್ಯಕ್ತಿಯಲ್ಲ, ವ್ಯಕ್ತಿತ್ವವಲ್ಲ, ತಾಯಿ ಒಂದು ರೂಪ. ಭಕ್ತನು ಹೇಗಿರುತ್ತಾನೋ ಹಾಗೆಯೇ ಭಗವಂತನೂ ಎಂದು ಹೇಳಲಾಗಿದೆ. ಹಾಗೆಯೇ ನಮ್ಮ ಮನಸ್ಸಿನ ಭಾವನೆಗೆ ತಕ್ಕಂತೆ ನಾವು ತಾಯಿಯ ಸ್ವಭಾವವನ್ನು ಅನುಭವಿಸಬಹುದು.
Maa…this isn’t a mere word but it captures a range of emotions. Today, 18th June is the day my Mother Heeraba enters her 100th year. On this special day, I have penned a few thoughts expressing joy and gratitude. https://t.co/KnhBmUp2se
— Narendra Modi (@narendramodi) June 18, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post