ಇವತ್ತಿಗೆ ನಮ್ಮನೆ ಯುವರಾಣಿ ಧಾರಾವಾಹಿ ಬರೋಬ್ಬರಿ 1000 ಸಂಚಿಕೆಗಳನ್ನು ಪೂರೈಸಿದ ಖುಷಿಯಲ್ಲಿದೆ. ಜೈಮಾತಾ ಕಂಬೈನ್ಸ್ ಅಡಿಯಲ್ಲಿ ಮೂಡಿ ಬರ್ತಿರೋ ಈ ಸೀರಿಯಲ್ ಇಂದಿಗೂ ವೀಕ್ಷಕರಿಗೆ ಅಚ್ಚು ಮೆಚ್ಚಿನ ಸೀರಿಯಲ್ ಆಗಿದೆ. ಈ ಸೀರಿಯಲ್ನಿಂದ ಕೆಲವರು ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಈ ಧಾರಾವಾಹಿಯಿಂದ ಸ್ನೇಹಕ್ಕೆ ಬೇರೆನೆ ಅರ್ಥ ಸಿಕ್ಕಿತು. ಕುಟುಂಬದ ಮಾನವೀಯತೆಯ ಎಳೆಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕೋಳಿ ಮರಿ, ಗುಗ್ಗು, ಸಾಕು. ಈ ಮೂವರ ಬಾಂಡಿಗ್ಗೆ ಫಿದಾ ಆಗಿದ್ದಾರೆ. ಮೀರಾ ಗುಗ್ಗು ಫ್ಯಾನ್ಸ್ ಇಡೀ ಕರ್ನಾಟಕ ತುಂಬಾ ಇದ್ದಾರೆ.
ಸದ್ಯ ನಮ್ಮನೆ ಯುವರಾಣಿಯಲ್ಲಿ ಹೊಸ ಅಧ್ಯಾಯ ಶುರುವಾಗಿದ್ದು. ಪ್ರಣಮ್- ಗಂಗಾಳನ್ನು ಕೂಡ ಮೆಚ್ಚಿ ಕೊಂಡಾಡುತ್ತಿದ್ದಾರೆ. ಇವತ್ತು ಇಡೀ ನಮ್ಮನೆ ಯುವರಾಣಿ ಕುಟುಂಬ ಖುಷಿಯ ಅಲೆಯಲ್ಲಿ ತೇಲ್ತಿದ್ದಾರೆ. ಇಡೀ ತಂಡ ಸತತವಾಗಿ 3 ವರ್ಷಗಳಿಂಡ ಕಷ್ಟ ಪಟ್ಟು ಇವತ್ತು ಸಾವಿರ ಸಂಚಿಕೆಯ ಹೊಸ್ತಿಲಲ್ಲಿ ನಿಂತಿರೋದು ಎಲ್ಲರಿಗೂ ಖುಷಿ ತಂದಿದೆ. ಈ ಬಗ್ಗೆ ಸಾಕೇತ್ ಪಾತ್ರಧಾರಿಯಾದ ರಘು ಕೂಡ ವೀಕ್ಷಕರಿಗೆಲ್ಲರಿಗೂ ಧನ್ಯವಾದಗಳನ್ನು ತಿಳಿಸುವ ಮೂಲಕ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಅವರ ಪಾತ್ರದ ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೂ ಇಡೀ ತಂಡ ಸಾವಿರ ಸಂಚಿಕೆಯ ಕೇಕ್ ಕತ್ತರಿಸುವ ಮೂಲಕ ಅವರ ಕನಸಿನ ದಿನವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಪಟ್ಟ ಶ್ರಮಕ್ಕೆ ಅದ್ಭುತವಾದ ಪ್ರತಿಫಲ ಸ್ವಿಕರಿಸುತ್ತಿದ್ದಾರೆ ನಮ್ಮನೆ ಯುವರಾಣಿ ತಂಡದವರು. ಈ ಬಗ್ಗೆ ಮೀರಾ ಪಾತ್ರಧಾರಿಯಾದ ನಟಿ ಅಂಕಿತಾ ಅಮರ್ ಕೂಡ ಅಭಿಮಾನಿಗಳಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post