ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಅವರು ಇಂದು 100 ವರ್ಷಗಳನ್ನ ಪೂರೈಸಿ ಶತಾಯುಷಿಯಾಗಿದ್ದಾರೆ. ಅಮ್ಮನ 100ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೋದಿ ಅವರು ಗುಜರಾತ್ನ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.
ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಮೋದಿ, ಅಮ್ಮನ ಪಾದ ಪೂಜೆ ಮಾಡಿ ಸಹಿ ತಿನ್ನಿಸಿದ್ದಾರೆ. ಇದೇ ಖುಷಿಯಲ್ಲಿ ವದ್ನಗರದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನೂ ಕೂಡ ಸಲ್ಲಿಸಲಿದ್ದಾರೆ.
ವಿಶೇಷ ಅಂದ್ರೆ ಹೀರಾಬೆನ್ ತಮ್ಮ ಇಳಿ ವಯಸ್ಸಿನಲ್ಲಿಯೂ ತುಂಬಾ ಆರೋಗ್ಯವಾಗಿದ್ದಾರೆ. ಗಾಂಧಿನಗರದಲ್ಲಿರುವ ಇನ್ನೊಬ್ಬ ಪುತ್ರ ಪಂಕಜ್ (ಮೋದಿ ಕಿರಿಯ ಸಹೋದರ) ಜೊತೆ ವಾಸವಿದ್ದಾರೆ. ಅವರ ಆರೋಗ್ಯವು ಸಾಮಾನ್ಯ ಜನರ ಆರೋಗ್ಯಕ್ಕಿಂತ ಉತ್ತಮವಾಗಿದೆ. ಅವರು ಸದಾ ಸರಳವಾದ ಆಹಾರವನ್ನು ಇಷ್ಟಪಡುತ್ತಾರೆ. ಇದೇ ಅವರ ಆರೋಗ್ಯದ ಗುಟ್ಟು ಎಂದು ಹೇಳಲಾಗಿದೆ.
ಮೋದಿ ಅವರು ಮಾಧ್ಯಮಗಳಿಗೆ ಹಿಂದೊಮ್ಮೆ ಹೇಳಿರುವ ಪ್ರಕಾರ, ಅವರು ಯಾವುದೇ ವಿಶೇಷ ಆಹಾರವನ್ನ ಸೇವಿಸುವುದಿಲ್ಲ. ಅವರೇ ಖುದ್ದು ತಯಾರಿಸಿದ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಸ್ಪೈಸಿ ಹಾಗೂ ಆಯಿಲ್ ಆಹಾರ ಪದಾರ್ಥಗಳನ್ನ ಯಾವತ್ತೂ ಇಷ್ಟಪಟ್ಟಿಲ್ಲ. ಬೇಳೆ, ಅನ್ನ, ಖಿಚಡಿ ಮತ್ತು ಚಪಾತಿಯನ್ನ ನಿತ್ಯ ತಿನ್ನಲು ಇಷ್ಟಪಡುತ್ತಾರೆ. ಸಿಹಿತಿಂಡಿಗಳಲ್ಲಿ ಸಕ್ಕರೆ ಕ್ಯಾಂಡಿ ಮತ್ತು ಲ್ಯಾಪ್ಸಿ ತಿನ್ನಲು ಬಯಸುತ್ತಾರೆ ಎಂದು ಹೇಳಿದ್ದರು.
ಅಂದ್ಹಾಗೆ ಇಂದಿನಿಂದ ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಇಂದು ‘ಗುಜರಾತ್ ಗೌರವ್ ಅಭಿಯಾನ’ಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ 21 ಸಾವಿರ ಕೋಟಿ ಮೌಲ್ಯದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post