ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ಹಲವು ರಾಜ್ಯಗಳಲ್ಲಿ ಮಿತಿ ಮೀರಿದ ಹಿಂಸಾಚಾರ ನಡೆದು ಹೋಗಿದೆ. ಹಲವಾರು ಟ್ರೇನ್ಗಳು ಬೆಂಕಿಗೆ ಆಹುತಿಯಾಗಿವೆ. ಈ ನಡುವೆ ನಾಲ್ಕು ವರ್ಷಗಳ ಬಳಿಕ ಅಗ್ನಿವೀರರ ಭವಿಷ್ಯವೇನಾಗಿರುತ್ತೆ? ಅನ್ನೋ ಪ್ರಶ್ನೆ ಕೂಡ ಹಲವರ ಮನದಲ್ಲಿ ಮೂಡುತ್ತಿದೆ. ಆ ಎಲ್ಲ ವಿಷಯಗಳಿಗೂ ಸಂಬಂಧಪಟ್ಟಂತೆ ಇಂದು ಭಾರತದ ತಲಸೇನೆ, ವಾಯುಸೇನೆ ಹಾಗೂ ಜಲ ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬಹುತೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ, ಜೊತೆಗೆ ಹಿಂಸೆಯಲ್ಲಿ ತೊಡಗಿದವರು ಆರ್ಮಡ್ ಫೋರ್ಸಸ್ ಯೂನಿಫಾರ್ಮ್ ಹಾಕಿಕೊಳ್ಳೋದನ್ನ ಮರೆತು ಬಿಡಲು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಕರುಳಬಳ್ಳಿ ಸಂಬಂಧ
ಅಗ್ನಿ ವೀರರಾಗಿ ಆಯ್ಕೆಯಾಗುವ ಯುವತಿ/ಯುವಕರ ಭವಿಷ್ಯ ನಾಲ್ಕು ವರ್ಷಗಳ ನಂತರ ಏನಾಗಿರುತ್ತೆ? ಅನ್ನೋ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಉತ್ತರ ನೀಡಿರುವ ಡಿಪಾರ್ಟ್ಮೆಂಟ್ ಆಫ್ ಮಿಲಿಟರಿ ಅಫೇರ್ಸ್ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನಂಟ್ ಜನರಲ್ ಅನಿಲ್ ಪುರಿ, ಭಾರತೀಯ ಸೇನೆ ಯಾವಾಗಲೂ ಅಗ್ನಿವೀರರ ಜೊತೆ ಇರುತ್ತೆ. ಮೊದಲು ಶೇ.25 ಜನರನ್ನು ಸೇನೆಯೇ ಉಳಿಸಿಕೊಳ್ಳುತ್ತೆ. ಉಳಿದ ಶೇ.75 ಜನರಿಗೂ ಹಲವು ಅವಕಾಶಗಳನ್ನು ಈಗಾಗಲೇ ಘೋಷಿಸಲಾಗುತ್ತೆ. ಒಂದು ವೇಳೆ ಅವರಿಗೆ ಏನಾದ್ರೂ ಸಮಸ್ಯೆಯಾದ್ರೆ ಸೇನೆ ಎಂದಿಗೂ ಜೊತೆ ಇರುತ್ತೆ. ಭಾರತೀಯ ಸೇನೆ ತನ್ನ ಸೈನಿಕರ ಜೊತೆ ಕರುಳಬಳ್ಳಿ ಸಂಬಂಧ ಹೊಂದಿರುತ್ತೆ ಎಂದು ಅಭಯ ನೀಡಿದ್ದಾರೆ.
ಸೇನಾಧಿಕಾರಿಗಳು ಹೇಳಿದ ಮುಖ್ಯಾಂಶಗಳ ಹೈಲೈಟ್ಸ್ -ಅಗ್ನಿಪಥ್ ವಾಪಸ್ ಇಲ್ಲ
- ಹೆಚ್ಚಿನ ವಯಸ್ಸಿನ ಕಾರಣದಿಂದಾಗಿ ಎತ್ತರದ ಪ್ರದೇಶದಲ್ಲಿ ಹಲವು ಸೈನಿಕರು ಸಾವನ್ನಪ್ಪುತ್ತಾರೆ
- ಈ ಕ್ಯಾಶುವಲ್ಟಿಯನ್ನು ನಾವು ತಡೆಯಲೇ ಬೇಕಿದೆ
- 1989ರಿಂದ ಭಾರತೀಯ ಸೇನೆಯ ವಯೋಮಾನ ಇಳಿಸಲು ಯತ್ನಿಸಲಾಗುತ್ತಿದೆ
- ಶ್ರೀಲಾಂಕದಲ್ಲಿ ಸೇನೆ-ನಿಯೋಜಿಸಿದಾಗಿನಿಂದ-ಕಾರ್ಗಿಲ್ ಯುದ್ಧದ ಸಮಯದಲ್ಲೂ ನಮಗೆ ಯಂಗ್ ಸೈನಿಕರ ಅವಶ್ಯಕತೆ ಕಂಡು ಬಂದಿತ್ತು
- ಹೀಗಾಗಿ ಇದು ಒಂದೆರಡು ವರ್ಷದಲ್ಲಿ ಸಿದ್ಧ ಪಡಿಸಿದ ಯೋಜನೆಯಲ್ಲ, ಅಥವಾ ಯಾರದ್ದೋ ಒತ್ತಡಕ್ಕೆ ಮಾಡಿದ್ದಲ್ಲ
- ಸೇನೆಯ ಅವಶ್ಯಕತೆಗನುಗುಣವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ
- ಇಂದಿನ ಯುವಕರು ಟೆಕ್ನಾಲಜಿಯೊಂದಿಗೆ ಸಮರ್ಥರಾಗಿದ್ದಾರೆ.. ಡ್ರೋಣ್ ವಾರ್ಫೇರ್ ನಡೆದಂಥ ಪಕ್ಷದಲ್ಲಿ ಈ ಯುವಕರು ನಮಗೆ ಅತಿ ಹೆಚ್ಚು ಉಪಯುಕ್ತರಾಗಿರುತ್ತಾರೆ
- ಹೀಗಾಗಿ, ನಾವು ನಮ್ಮ ಸೇನೆಯ ಸರಾಸರಿ ವಯಸ್ಸನ್ನು 24ಕ್ಕೆ ಇಳಿಸಲೇಬೇಕಿದೆ
- ಈ ಕಾರಣದಿಂದಾಗಿ ಅಗ್ನಿ ಪಥ್ ಯೋಜನೆ ಹಿಂಪಡೆಯುವ ಮಾತೇ ಇಲ್ಲ
- ಇನ್ನು ಯಾರು ಹಿಂಸಾಚಾರದಲ್ಲಿ ತೊಡಗಿದ್ದಾರೋ ಅವರ ಬ್ಯಾಗ್ರೌಂಡ್ ಚೆಕ್ ಮಾಡಲಾಗುತ್ತೆ
- ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಅಂಥವರನ್ನು ಯಾವುದೇ ಕಾರಣದಕ್ಕೂ ಸೇನೆಗೆ ತೆಗೆದುಕೊಳ್ಳಲ್ಲ
- ಸೇನೆಯಲ್ಲಿ ಶಿಸ್ತು ಮತ್ತು ಬದ್ಧತೆ ಮೂಲ ಶಕ್ತಿ.. ಯಾರು ದೇಶದ ಆಸ್ತಿಗೆ ಹಾನಿ ಮಾಡಿದ್ದಾರೋ ಅಂಥವರಿಗೆ ಸೇನೆ ಸೇರೋ ಅರ್ಹತೆ ಇಲ್ಲ
- ಒಟ್ಟು 84 ಱಲಿಗಳನ್ನು ಅಗ್ನಿವೀರರ ನೇಮಕಾತಿಗೆ ಮಾಡಲಾಗುತ್ತೆ
- ನವೆಂಬರ್ 21, 2022 ರಂದು ಮೊದಲ ಬ್ಯಾಚ್ ಟ್ರೇನಿಂಗ್ ಶುರು
- ಭಾರತದ ಮೂರೂ ಸೇನಾಧಿಕಾರಿಗಳ ಪ್ರಮುಖ ಮಾಹಿತಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post