ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸೋರಿಗೆ ಫೈನ್ ಹಾಕೋ ವಿಚಾರದಲ್ಲಿ ಬೆಂಗಳೂರು ಸಂಚಾರ ಪೊಲೀಸರು ಜನಸಾಮಾನ್ಯರಿಗೊಂದು, ಗಣ್ಯರಿಗೊಂದು ರೂಲ್ಸ್ ಮಾಡಿರೋದು ಭಾರೀ ಟೀಕೆಗೆ ಗುರಿಯಾಗಿದೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರದ ವಾಹನಗಳ ಮೇಲೆ ಎಷ್ಟು ಫೈನ್ ಇದ್ರೂ ಕಲೆಕ್ಟ್ ಮಾಡೋದಿಲ್ಲ. ಬದಲಿಗೆ ಯಾರಾದ್ರೂ ಒಬ್ಬ ಜನಸಾಮಾನ್ಯ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಸಾಕು ಫೈನ್ ಹಾಕೋಕೆ ತುದಿಗಾಲಲ್ಲೇ ನಿಂತಿರುತ್ತಾರೆ.
ಹೌದು, ಟ್ರಾಫಿಕ್ ರೂಲ್ಸ್ ಪತ್ತೆಗೆ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ANPR ಕ್ಯಾಮೆರಾ ಮೂಲಕ ದಂಡ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಸರ್ಕಾರಿ ಬೋರ್ಡ್ ಇರೋ ಕಾರಿಗಿಲ್ಲ ಯವುದೇ ರೂಲ್ಸ್ ಎಂಬುದು ಚರ್ಚೆ ವಿಚಾರ. ಸಚಿವರ ಕಾರಿನ ಮೇಲೆ 2,000 ರೂಪಾಯಿ ಫೈನ್ ಇದ್ರೂ ಸಾಫ್ಟ್ ಕಾರ್ನರ್ ತೋರಿಸಲಾಗುತ್ತಿದೆ.
ಪೊಲೀಸರ ವಾಹನಗಳ ಮೇಲೂ ಫೈನ್ ಇದೆ. ಹಲವು ಪೊಲೀಸರ ವಾಹನದ ಮೇಲೆ ಫೈನ್ ಇದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜನಸಾಮಾನ್ಯರು ತಪ್ಪು ಮಾಡಿದ್ರೆ ಮಾತ್ರ ಪೊಲೀಸರು ದರ್ಪ ತೋರುತ್ತಾರೆ. ಸರ್ಕಾರಿ ವಾಹನಗಳು ಕಂಡರೂ ಕಾಣದಂತೆ ವರ್ತನೆ ಮಾಡುತ್ತಿದ್ದಾರೆ ಪೊಲೀಸ್ರು. ಹಾಗಾಗಿ ಪೊಲೀಸರ ಈ ನಡೆಗೆ ಜನಸಾಮಾನ್ಯರಿಂದ ವಿರೋಧ ವ್ಯಕ್ತವಾಗುತ್ತಿದೆ. ರೂಲ್ಸ್ ಮಾಡುವವರಿಂದಲೇ ಹಲವು ರೂಲ್ಸ್ ಬ್ರೇಕ್ ಹಾಕುತ್ತಿದ್ದು, ಜನಸಾಮಾನ್ಯರಿಗೆ ಮಾತ್ರನಾ ಈ ರೂಲ್ಸ್? ಎಂಬ ಚರ್ಚೆ ನಡೆಯುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post