ಬೆಳಗಾವಿ: ಹೊರವಲಯದ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರ ಭುಗಿಲ್ಲೆದಿದೆ. ಎರಡು ಗುಂಪುಗಳ ಮಾರಾಮಾರಿಯಲ್ಲಿ ಒರ್ವ ಸಾವನ್ನಪ್ಪಿದರೆ, ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗ್ರಾಮದ ಮನೆಗಳ ಮುಂದೆ ನಿಲ್ಲಿಸಿದ ನೂರಾರು ವಾಹನಗಳು ಹೊತ್ತಿ ಉರಿದಿವೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಲವರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಗೌಂಡವಾಡ ಗ್ರಾಮದಲ್ಲಿ ಭುಗಿಲ್ಲೆದ್ದ ಹಿಂಸಾಚಾರ..
ನಿನ್ನೆ ರಾತ್ರಿ 9.30 ಗಂಟೆ ಸುಮಾರಿಗೆ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರ ಭುಗಿಲ್ಲೆದಿದೆ. ಎರಡು ಗುಂಪುಗಳ ನಡುವಿನ ಮಾರಾಮಾರಿಯಿಂದ ಸತೀಶ್ ಪಾಟೀಲ್ ಎಂಬ ಯುವಕ ಭೀಕರವಾಗಿ ಕೊಲೆಯಾಗಿದ್ದಾನೆ. ಪಾರ್ಕಿಂಗ್ ವಿಚಾರದಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ, ಹಲವರು ತೀವ್ರ ಗಾಯಗೊಂಡಿದ್ದಾರೆ. ಅವರನ್ನ ಬೆಳಗಾವಿಯ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆಸುವುದಲ್ಲದೇ, ಮನೆಗಳ ಮುಂದೆ ನಿಲ್ಲಿಸಿದ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನೂ ಹುಲ್ಲಿನ ಬಣಮೆಗಳಿಗೂ ಬೆಂಕಿ ಹಚ್ಚಿದ್ದರಿಂದ ಕೆಲ ಕಾಲ ಆತಂಕ ಸೃಷ್ಡಿಯಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಗ್ನಿ ನಂದಿಸಲು ಹರಸಾಹಸ ಮಾಡಿದರು. ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಪರಿಸ್ಥತಿಯನ್ನು ಹತೋಟಿಗೆ ತೆಗೆದುಕೊಂಡು ಬಂದರು.
ಬೂದಿಮುಚ್ಚಿದ ಕೆಂಡಂತೆ ಇದೆ ಪರಿಸ್ಥಿತಿ..
ಇನ್ನೂ ಮೃತ ಯುವಕ ಸತೀಶ್ ಪಾಟೀಲ್ ಗ್ರಾಮದ ದೇವರ ಜಾಗ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದ. ಹಿಂದೆ ಇತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ರಾಜೀ ಸಂದಾನ ನಡೆದಿತ್ತು. ಅಷ್ಟೇ ಅಲ್ಲ ದೇವರ ಜಾಗ ದೇವರಿಗೆ ಸಿಗಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ. ಇತನ ಗ್ರಾಮದ ಬಹುತೇಕರು ಬೆಂಬಲ ನೀಡಿದ್ದರು. ಆದರೆ ನಡೆದಿರುವ ಕೊಲೆ ಅದೇ ಕಾರಣದಿಂದ ನಡೆದಿದೆ ಎನ್ನುವುದು ಕುಟುಂಬಸ್ಥರ ಆರೋಪ. ಸದ್ಯ ಕೊಲೆಯಾದ ಯುವಕನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಕೊಲೆಗೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 20 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಎರಡು ಕೆಎಸ್ಆರ್ಪಿ ತುಕಡಿ, 4 ಎಸಿಪಿ, 10ಕ್ಕೂ ಹೆಚ್ಚು ಪಿಐಗಳ ಸೇರಿದಂತೆ ನಗರ ಪೋಲಿಸ್ ಆಯುಕ್ತ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದೆ, ಸ್ನೇಹಾ ಸೇರಿದಂತೆ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಪರಿಸ್ಥಿತಿ ಸದ್ಯಕ್ಮೆ, ಬೂದಿಮುಚ್ಚಿದ ಕೆಂಡಂತೆ ಇದೆ. ಜನ ಭಯದಿಂದ ರಾತ್ರಿಯಿಡೀ ಹೊರ ಬರಲಾರದೇ ಬಾಗಿಲು ಬಂದ್ ಮಾಡಿ ಆತಂಕದಲ್ಲಿ ಕಾಲ ಕಳೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post