ಭಾರತ- ಸೌತ್ ಆಫ್ರಿಕಾ ನಡುವಿನ ಹೈವೋಲ್ಟೆಜ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಸಮಬಲಗೊಂಡಿರುವ ಸರಣಿಯ ವಿನ್ನರ್ ಯಾರು ಅನ್ನೋದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಿರ್ಧಾರವಾಗಲಿದೆ.
ಇಂದಿನ ನಿರ್ಣಾಯಕ ಫೈಟ್ಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪಂದ್ಯದ ಟಿಕೆಟ್ಸ್ ಸೋಲ್ಡ್ಡೌಟ್ ಆಗಿದ್ದು, ಸ್ಟೇಡಿಯಂ ಹೌಸ್ಫುಲ್ ಆಗೋದು ಪಕ್ಕಾ..! ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.
ಈಗಾಗಲೇ ಟೀಂ ಇಂಡಿಯಾ ಮತ್ತು ಸೌತ್ ಆಫ್ರಿಕಾದ ಆಟಗಾರರ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮ್ಯಾಚ್ಗೆ ಮುನ್ನ ಮಾತಾಡಿದ ಟೀಂ ಇಂಡಿಯಾ ಗ್ರೇಟ್ ಫಿನಿಶರ್ ದಿನೇಶ್ ಕಾರ್ತಿಕ್, ಬೆಂಗಳೂರು ಸ್ಟೇಡಿಯಂ ನನಗೆ ಹೋಮ್ ಗ್ರೌಂಡ್ ಎಂದರು.
ಆರ್ಸಿಬಿಗೆ ಸೇರಿದ ಬಳಿಕ ಕಳೆದ ಐಪಿಎಲ್ನಲ್ಲಿ ಬೆಂಗಳೂರಿನಲ್ಲಿ ಯಾವುದೇ ಮ್ಯಾಚ್ ನಡೀಲಿಲ್ಲ. ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಾನು ಐಪಿಎಲ್ ಮ್ಯಾಚ್ ಆಡದಿದ್ರು, ಎಷ್ಟೋ ಮ್ಯಾಚ್ ಬೆಂಗಳೂರಲ್ಲಿ ಆಡಿದ್ದೇನೆ ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post