ರಷ್ಯಾ ಉಕ್ರೇನ್ ಸಂಘರ್ಷವು ವರ್ಷಗಳ ಕಾಲದವರೆಗೆ ಇರುತ್ತೆ ಎಂದು ನ್ಯಾಟೋ ಮುಖ್ಯಸ್ಥ ಸ್ಟೋಲ್ಟೆನ್ ಬರ್ಗ್ ಎಚ್ಚರಿಸಿದ್ದಾರೆ. ಮಾದ್ಯಮದೊಂದಿಗೆ ಮಾತನಾಡಿದ ಇವರು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಮಿಲಿಟರಿ ಮತ್ತು ಆರ್ಥಿಕ ನೆರವನ್ನ ನೀಡಬೇಕು ಎಂದು ಹೇಳಿದ್ದಾರೆ.
ಈಗ ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್ಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡಬೇಕು. ಏಕೆಂದರೆ ದೇಶದ ಪೂರ್ವದಲ್ಲಿ ರಷ್ಯಾ ವಿರುದ್ಧ ಹೋರಾಡ್ತಿದೆ ಎಂದರು.
ಇದಕ್ಕೆಲ್ಲ ವೆಚ್ಚ ಹೆಚ್ಚಾದರೂ ಸಹ ನಾವು ಉಕ್ರೇನ್ಗೆ ಸಹಾಯ ಮಾಡಬೇಕು. ಈಗಾಗಲೇ ಯುದ್ಧದಿಂದ ಉಕ್ರೇನ್ನ ಜನರು ದೈನಂದಿನ ಅಗತ್ಯತೆಗೆ ದುಬಾರಿ ವೆಚ್ಚ ನೀಡ್ತಾರೆ. ಅದರ ಮುಂದೆ ನಾವು ಭರಿಸುವ ವೆಚ್ಚ ದುಬಾರಿಯಲ್ಲ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post