ಮಾಸ್ಕೋ: ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುತ್ತಿರುವುದಕ್ಕೆ ರಷ್ಯಾ ವಿರೋಧವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಈ ಬಗ್ಗೆ ನಿನ್ನೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ರಷ್ಯಾದ ವಾರ್ಷಿಕ ಆರ್ಥಿಕ ಸಮ್ಮೇಳನದಲ್ಲಿ ಪುಟಿನ್ ಮಾತನಾಡಿ, 27 ಸದಸ್ಯ ರಾಷ್ಟ್ರಗಳ ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಯೂರೋಪಿಯನ್ ಕಮಿಷನ್ ಉಕ್ರೇನ್ ಅನ್ನ ಶಿಫಾರಸು ಮಾಡಿದ ಬೆನ್ನಲ್ಲೇ ರಷ್ಯಾದಿಂದ ಈ ಹೇಳಿಕೆ ಹೊರಬಿದ್ದಿದೆ.
ಉಕ್ರೇನ್, ಯೂರೋಪಿಯನ್ ಒಕ್ಕೂಟ ಸೇರುತ್ತಿರುವ ಬಗ್ಗೆ ನಮ್ಮ ವಿರೋಧವಿಲ್ಲ. ಆರ್ಥಿಕ ಒಕ್ಕೂಟಕ್ಕೆ ಸೇರುವುದು ಅವರ ಪರಮಾಧಿಕಾರವಾಗಿದೆ. ಇದು ಅವರ ಉದ್ಯಮಕ್ಕೆ ಸಂಬಂಧಿಸಿದ ವಿಚಾರ ಎಂದು ಅವರು ಹೇಳಿದ್ದಾರೆ.
ಉಕ್ರೇನ್, ನ್ಯಾಟೊ ಒಕ್ಕೂಟ ಸೇರಲು ಮುಂದಾಗಿದ್ದನ್ನ ವಿರೋಧಿಸಿ ರಷ್ಯಾ ಫೆಬ್ರುವರಿ 24ರಿಂದ ದಾಳಿ ನಡೆಸುತ್ತಿದೆ. ಉಕ್ರೇನ್ ನ್ಯಾಟೊಗೆ ಸೇರ್ಪಡೆಗೊಳ್ಳುವ ನಿರ್ಧಾರವು ತಮ್ಮ ಭದ್ರತೆಗೆ ಧಕ್ಕೆ ಎಂದು ರಷ್ಯಾ ಭಾವಿಸಿತ್ತು. ಆದರೆ ಈಗ ಅದೇ ರಷ್ಯಾ ಉಕ್ರೇನ್ ಯೂರೋಪಿಯನ್ ಒಕ್ಕೂಟಕ್ಕೆ ಸೇರುವುದರಿಂದ ನಮಗೆ ಯಾವುದೇ ವಿರೋಧವಿಲ್ಲ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post