ಧಾರವಾಡ: ಹಳ್ಳದಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಮೂರ್ಛೆ ತಪ್ಪಿ ಯುವಕಯೊಬ್ಬ ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಯಮನೂರಿನ ಬೆಣ್ಣಿಹಳ್ಳದಲ್ಲಿ ನಡೆದಿದೆ. ವಾಸಿಂ (22) ಮೃತ ದುರ್ದೈವಿ.
ಮೃತಪಟ್ಟ ಯುವಕನ್ನ ಮುದ್ದೇಬಿಹಾಳ ಮೂಲದವನು ಎಂದು ಗುರುತಿಸಲಾಗಿದೆ. ತಾಯಿ ಜೊತೆಗೆ ಗೋವಾಕ್ಕೆ ಕೆಲಸಕ್ಕೆ ತೆರಳಿದ್ದ ಯುವ, ಕುಟುಂಬದ ಜೊತೆಗೆ ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ. ದೇವರ ದರ್ಶನಕ್ಕೂ ಮೊದಲು ಸ್ನಾನ ಮಾಡಲು ಹಳ್ಳಕ್ಕೆ ಇಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post