ಬೆಳಗಾವಿ: ಇವತ್ತು ಬೆಳ್ಳಂಬೆಳಿಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಹಲವಾರು ಪ್ರಕರಣದಲ್ಲಿ ಕರ್ನಾಟಕ-ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಅಂತರ್ ರಾಜ್ಯ ಸುಪಾರಿ ಹಂತಕನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.
ಕಳೆದ ಮಾರ್ಚ್ 15 ರಂದು ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಹತ್ಯೆ ನಡೆದಿತ್ತು. ಅದಾದ ನಂತರ ಹತ್ಯೆಗೆ ಸುಪಾರಿ ಪಡೆದ ಆರೋಪಿ, ಕುಖ್ಯಾತ ರೌಡಿ ವಿಶಾಲಸಿಂಗ್ ಚವ್ಹಾಣ ತಲೆಮರೆಸಿಕೊಂಡಿದ್ದ. ಪೊಲೀಸರಿಗೆ ಸುಳಿವು ಸಿಗದಂತೆ ಓಡಾಡಿಕೊಂಡಿದ್ದ. ದರೆ ಇತ ಇವತ್ತು ಬೆಳಗಾವಿಯ ವೀರಭದ್ರನಗರದಲ್ಲಿರುವ ಒಬ್ಬರ ಬಳಿ ಹಣದ ಬೇಡಿಕೆ ಇಟ್ಟು, ಇವತ್ತು ಹಣ ಪಡೆಯಲು ಬರುತ್ತಿದ್ಧಾನೆ ಅಂತ ಗೊತ್ತಾಗುತ್ತಿದ್ದಂತೆಯೇ ಇವನ ಬರುವಿಕೆಗಾಗಿ ಕಾಯ್ದು ಕುಳಿತ್ತಿದ್ದ ಬೆಳಗಾವಿ ನಗರ ಸಿಸಿಬಿ, ಎಸಿಪಿಯಾಗಿರುವ ಎನ್.ವ್ಹಿ.ಭರಮನಿ ಹಾಗೂ ತಂಡದವರ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ.
ಆರೋಪಿಯ ಸುತ್ತುವರೆದ ಪೋಲಿಸರು, ಶರಣಾಗುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವಾಗ ಆರೋಪಿ ವಿಶಾಲಸಿಂಗ್ ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ದಾಳಿ ಮಾಡಿ ಓಡಿ ಹೋಗಲು ಯತ್ನಿಸಿದ್ದ. ಆಗ ಅಲ್ಲಿಯೇ ಇದ್ದ ಎಸಿಪಿ, ಎನ್.ವಿ ಭರಮನಿ ಶರಣಾಗುವಂತೆ ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾಗ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಆರೋಪಿ ವಿಶಾಲಸಿಂಗ್ ನನ್ನ ಪೋಲಿಸರು ವಶಕ್ಕೆ ಪಡೆದು ಬಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನೂ ಇತನ ಬ್ಯಾಗ್ ತಪಾಸಣೆ ಮಾಡಿದ್ದಾಗ ಒಂದು ಪಿಸ್ತೂಲ್, ಚಾಕುಗಳು ಸಿಕ್ಕಿವೆ. ಇದೇ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಯಾಸೀನ್ ನದಾಪ್ ಅವರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಬೊರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ವಿವರ ಪಡೆದುಕೊಂಡರು.

ಆರೋಪಿಯ ಹಿನ್ನೆಲೆ ಏನು..?
- ವಿಶಾಲಸಿಂಗ್ ಚವ್ಹಾಣ ಕರ್ನಾಟಕ ಮಹಾರಾಷ್ಟ್ರ ಪೊಲೀಸರಿಗೆ ಮೋಸ್ಟ್ ವಾಟೆಂಡ್ ಸುಪಾರಿ ಹಂತಕ..
- ಇತನ ಮೇಲೆ ಕರ್ನಾಟಕದಲ್ಲಿ 9, ಮಹಾರಾಷ್ಟ್ರ ದಲ್ಲಿ 2ಪ್ರಕರಣಗಳಿವೆ..
- ಕರ್ನಾಟಕದ ಕೇಸ್ ಗಳ ಪೈಕಿ-6 ಕೊಲೆಯತ್ನ, 1 ದರೋಡೆ, 1 ಢಕಾಯತಿ, 1 ಆರ್ಮ ಆ್ಯಕ್ಟ್ ಕೇಸ್ ದಾಖಲಾಗಿದೆ..
- ಕರ್ನಾಟಕದಲ್ಲಿ ಇತನ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ..
- ಹತ್ಯೆಗೆ ಸುಪಾರಿ ಪಡೆದು ತನ್ನ ಟೀಂ ನಿಂದ ಹತ್ಯೆ ಮಾಡಿಸಿ ಎರಡೂ ರಾಜ್ಯದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ..
- ಮೂರು ತಿಂಗಳ ಹಿಂದೆ ನಡೆದ ಬಿಲ್ಡರ್ ಮರ್ಡರ್ ಕೇಸ್ ನಲ್ಲಿ ಸುಪಾರಿ ಪಡೆದು ಹತ್ಯೆ ಮಾಡಿ ಮಹಾರಾಷ್ಟ್ರ ದಲ್ಲಿ ಅಡಗಿ ಕುಳಿತಿದ್ದ..

ಬೆಳಗಾವಿ ನಗರ ಸಿಸಿಬಿ ಎಸಿಪಿಯಾಗಿರುವ ಎನ್ ವಿ.ಭರಮನಿ ರೌಡಿಗಳಿಗೆ, ಕೊಲೆಗಡುಕರ, ಪಾತಕಿಗಳ ಪಾಲಿನ ಸಿಂಹಸ್ವಪ್ನವಾಗಿದ್ದಾರೆ. ಹಿಂದೆ ಕುಖ್ಯಾತ ರೌಡಿ ಪ್ರವೀಣ ಸಿಂತ್ರೆ ಸೇರಿ ಹಲವು ರೌಡಿಗಳನ್ನ ಎನ್ ಕೌಂಟರ್ ಮಾಡಿ ಬೆಳಗಾವಿ ಸಿಂಗಂ ಎಂದೇ ಖ್ಯಾತಿ ಪಡೆದವರು. ಕಳೆದ ಕೆಲವು ದಿನಗಳಿಂದ ಸೈಲೆಂಟಾಗಿದ್ದ ಇವರು ಇದೀಗ ಮತ್ತೆ ತಮ್ಮ ಪಿಸ್ತೂಲ್ ಕೈಗೆತ್ತಿಕೊಂಡು ಅಖಾಡಕ್ಕಿಳಿದಿದ್ದಾರೆ. ಇವತ್ತು ಬೆಳಿಗ್ಗೆ ಸುಪಾರಿ ಹಂತಕನ ಗಾಲಿಗೆ ಗುಂಡು ಹೊಡೆದು ಸೆದೆಬಡಿದ್ದಾರೆ. ಹಲವು ವರ್ಷಗಳಿಂದ ನಂತರ ಮತ್ತೆ ಕ್ರಿಮಿನಲ್ಸ್ ವಿರುದ್ಧ ಭರಮನಿ ಅಖಾಡಕ್ಕಿಳಿರುವುದು ಬೆಳಗಾವಿ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ವಿಶೇಷ ಬರಹ: ಶ್ರೀಕಾಂತ್ ಕುಬಕಡ್ಡಿ. ನ್ಯೂಜ್ ಫಸ್ಟ್ ಬೆಳಗಾವಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post