ವಂಶಿಕಾ ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಒಳ್ಳೆಯ ಕಲಾವಿದಳಾಗಿ ಬೆಳೆಯುತ್ತ ಇದ್ದಾಳೆ. ಎಲ್ಲ ರೀತಿಯ ಸ್ಕಿಟ್ಗಳನ್ನು ಬಹಳ ಅದ್ಭುತವಾಗಿ ನಟನೆ ಮಾಡಿ ತೋರಿಸೋದು ಇವಳಿಗೆ ಸುಲಭವಾದ ಕೆಲಸ ಆಗ್ಬಿಟ್ಟಿದೆ. ಈ ವಾರದ ಸ್ಕಿಟ್ನಲ್ಲಿ ಶೃತಿ ಮೇಡಮ್ ನಟನೆಯ ರತ್ನನ್ ಪ್ರಪಂಚದ ಸಿನಿಮಾನದ ಒಂದು ತುಣುಕನ್ನು ವಂಶಿಕಾ ಹಾಗೂ ಶಿವು ನಟಿಸಿದರು. ಇವರಿಬ್ಬರ ನಟನೆಗೆ ಇಡೀ ವೇದಿಕೆಯೇ ಕಣ್ಣೀರಿಟ್ಟಿತ್ತು.
ಈ ವಾರದ ಸ್ಕಿಟ್ನಲ್ಲಿ ತಾನು ಎಂತಹ ಡ್ರಾಮಾವನ್ನು ಬೇಕಾದ ಮಾಡಬಲ್ಲೆ ಅನ್ನೋದ್ನ ಮತ್ತೊಮ್ಮೆ ನಿರೂಪಿಸಿದ್ದಾಳೆ. ಉತ್ತರ ಕರ್ನಾಟಕದ ಭಾಷೆಯನ್ನು ಒಳಗೊಂಡಿರೋ ಈ ಸಿನಿಮಾದಲ್ಲಿ ಯಲ್ಲವ್ವನ ಪಾತ್ರವನ್ನು ವಂಶಿ ನಟಿಸಿದರೆ, ಬಾಬು ರಾವ್ ಪಾತ್ರವನ್ನು ಶಿವು ನಟಿಸಿದ್ದಾರೆ. ಈ ಚಿತ್ರದ ಕೊನೆಯ ಘಟ್ಟದ ತುಣಕಾದ ತಾಯಿ ಮಗನ ನಿಜವಾದ ಬಾಂಧವ್ಯವನ್ನು ತೋರಿಸಿರುವ ದೃಶ್ಯವನ್ನ ವೇದಿಕೆಯಲ್ಲಿ ಅದ್ಭುತವಾಗಿ ರೀ ಕ್ರಿಯೇಟ್ ಮಾಡಿದ್ದಾರೆ.
ವಂಶಿಕಾ ನಟನೆಯನ್ನು ನೋಡಿ ಎಲ್ಲರೂ ನಿಜಕ್ಕೂ ಬೆರಗಾಗಿ ಹೋಗಿದ್ದಾರೆ. ಸ್ವತಃ ಶೃತಿ ಅವರೇ ವೇದಿಕೆ ಮೇಲೆ ಬಂದು ಈ ರೀತಿಯ ನಟನೆ ಮಾಡೋದಕ್ಕೆ ದೈವಿಶಕ್ತಿ ಇರಲೇಬೇಕು. ವಂಶಿಕಾ ಒಬ್ಬ ಬ್ಲೆಸ್ಡ್ ಚೈಲ್ಡ್ ಅಂತಾ ಮನಸಾರೆ ಹಾಡಿ ಹೊಗಳಿದ್ದಾರೆ. ಈಗ ವಂಶಿಕಾ ಲೆವೆಲ್ ಬೇರೆಯೇ ಇದೆ. ವಂಶಿಗೆ ಅವಳಿಗೆ ಸಾಥ್ ನೀಡುತ್ತಿರುವ ಶಿವು ಅವರನ್ನು ಕೂಡ ಅಪ್ರೀಷಿಯೇಟ್ ಮಾಡಲೇಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post