ಕಾಬುಲ್: ಅಫ್ಘಾನಿಸ್ತಾನದಲ್ಲಿ ಘೋರ ದುರಂತ ಸಂಭವಿಸಿದೆ. ಭೀಕರ ಭೂಕಂಪಕ್ಕೆ 950ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ.
ಇನ್ನು, ಭೀಕರ ಭೂಕಂಪಕ್ಕೆ ಬಲಿಯಾಗೋ ಸಾವು ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಸಾವಿರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಘ್ಫಾನಿಸ್ತಾನ್ ಸರ್ಕಾರ ತಿಳಿಸಿದೆ.
ಅಫ್ಘಾನಿಸ್ತಾನದ ಖೋಸ್ಟ್ ಸಿಟಿ ಭೂಕಂಪನದ ಕೇಂದ್ರ ಎಂದು ಹೇಳಲಾಗಿದೆ. ಯುಎಸ್ಜಿಎಸ್ (US Geological Survey ) ಸರ್ವೇ ಪ್ರಕಾರ, ಖೋಸ್ಟ್ ಸಿಟಿಯಿಂದ 51 ಕಿಲೋ ಮೀಟರ್ ವರೆಗೆ ಭೂಕಂಪನದ ಎಫೆಕ್ಟ್ ಆಗಿದೆ ಎಂದು ತಿಳಿಸಿದೆ. ಕೇವಲ ಅಫ್ಘಾನಿಸ್ತಾನ ಮಾತ್ರವಲ್ಲ ಭಾರತ, ಪಾಕಿಸ್ತಾನದಲ್ಲೂ ಭೂಕಂಪನದ ತೀವ್ರತೆಯು ಪ್ರಭಾವ ಬೀರಿದೆ ಎಂದು EMSC ಹೇಳಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post