ಮುಂಬೈ: ಶಿವಸೇನೆ ಪಕ್ಷದ ಯುವ ನಾಯಕ, ಪ್ರವಾಸೋದ್ಯಮ ಸಚಿವ ಆದಿತ್ಯನಾಥ್ ಠಾಕ್ರೆ ತಮ್ಮ ಟ್ವಿಟರ್ ಖಾತೆಯಿಂದ ಸಚಿವ ಪದವನ್ನು ತೆಗೆದು ಹಾಕಿದ್ದು, ಯುವಕರ ಧ್ವನಿ ಎಂದು ಬರೆದುಕೊಂಡಿದ್ದಾರೆ.
ಶಿವಸೇನೆ ಹಿರಿಯ ನಾಯಕ ಶಿಂಧೆ ಹಾಗೂ ಇತರ 22ಕ್ಕೂ ಹೆಚ್ಚು ಶಾಸಕರು ಬಂಡಾಯ ಬಾವುಟ ಹಾರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಿಎಂ ಉದ್ಧವ್ ಠಾಕ್ರೆ ಅವರ ಸರ್ಕಾರದಲ್ಲಿ ಆದಿತ್ಯನಾಥ್ ಠಾಕ್ರೆ ಪ್ರವಾಸೋದ್ಯಮ ಸಚಿವರಾಗಿದ್ದರು. ಶಿವಸೇನೆ ನೇತೃತ್ವದ ಮಹಾ ಸರ್ಕಾರ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ.
ಸದ್ಯ ಏಕ್ನಾಥ್ ಶಿಂಧೆ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಸಕರು ಸರ್ಕಾರ ವಿರುದ್ಧ ಬಂಡಾಯ ಎದ್ದಿದ್ದು, ಅಸ್ಸಾಂನ ಗುವಾಹಟಿ ಹೋಟೆಲ್ವೊಂದರಲ್ಲಿ ತಂಗಿದ್ಧಾರೆ. ಬಂಡಾಯ ಶಾಸಕರು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳೊಂದಿಗೆ ಮೈತ್ರಿಯನ್ನು ವಿರೋಧ ಮಾಡುತ್ತಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಷರತ್ತು ವಿಧಿಸಿದ್ದಾರೆ. ರಾಜಕೀಯ ಬೆಳವಣಿಗೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರೋ ಶಿಂಧೆ, ನಮ್ಮೊಂದಿಗೆ 47 ಶಾಸಕರಿದ್ದಾರೆ. ನಾವು ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ದಾಂತಕ್ಕೆ ಬದ್ಧ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post