ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ದಿನೇಶ್ ಕಾರ್ತಿಕ್ ಸಾಕಷ್ಟು ಕಷ್ಟಪಟ್ಟಿದ್ದಾರೆ ಅಂತ ಲೆಜೆಂಡ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಕಾಮೆಂಟೇಟರ್ ಆಗಿದ್ದಾಗಲೂ ದಿನೇಶ್ ಕಾರ್ತಿಕ್ ನೆಟ್ಸ್ನಲ್ಲಿ ಗಂಟೆಗಟ್ಟಲೆ ಪ್ರಾಕ್ಟೀಸ್ ಮಾಡ್ತಿದ್ರು. ಒಂದ್ವೇಳೆ ತಂಡಕ್ಕೆ ಆಯ್ಕೆಯಾದ್ರೆ ಕಾರ್ತಿಕ್ಗೆ 5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತೆ ಅನ್ನೋದು ತಿಳಿದಿತ್ತು. ಇದರಿಂದ ಡೆತ್ ಓವರ್ಗಳಲ್ಲಿ ಹೇಗೆ ಬ್ಯಾಟ್ ಬೀಸಬೇಕೋ, ಅದ್ರಂತೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡ್ತಿದ್ರು ಅಂತ ಗವಾಸ್ಕರ್ ತಿಳಿಸಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ದಿನೇಶ್ ಕಾರ್ತಿಕ್ ಹೆಸರು ಟೀಮ್ ಇಂಡಿಯಾದ ವಿಶ್ವಕಪ್ ತಂಡದ ಆಯ್ಕೆ ರೇಸ್ನಲ್ಲಿ ಇರಲೇ ಇಲ್ಲ. ದಿನೇಶ್ ಕಾರ್ತಿಕ್, ಬ್ಯಾಟ್ & ಗ್ಲೌಸ್ ಬಿಟ್ಟು, ಮೈಕ್ ಹಿಡಿದು ಕಾಮೆಂಟೇಟರ್ ಅವತಾರ ಎತ್ತಿದ್ರು. ಹೀಗಾಗಿ ದಿನೇಶ್ ಕಥೆ ಮುಗಿತು ಅಂದವರೇ ಹೆಚ್ಚು. ಆದ್ರೆ ಐಪಿಎಲ್ ಎಲ್ಲರ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿ ಬಿಡ್ತು.
ಈ ಬಾರಿಯ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಎಲ್ಲರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ್ರು. ಕೀಪಿಂಗ್ ಹಾಗೂ ಫಿನಿಷರ್ ರೋಲ್ನಲ್ಲಿ ಕಾರ್ತಿಕ್ ಉತ್ತಮ ಪರ್ಫಾಮೆನ್ಸ್ ನೀಡಿದ್ರು. ಈ ಮೂಲಕ ಸೌತ್ ಆಫ್ರಿಕಾ ಸೀರೀಸ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರು. ಅಲ್ಲದೇ ಉತ್ತಮ ಪ್ರದರ್ಶನ ಕೂಡ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post