ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಮಹಾ ಕಂಟಕ ಎದುರಾಗಿದ್ದು ಮಹಾ ಪತನವಾಗುವ ಹಂತಕ್ಕೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮಹಾ ಬಂಡಾಯ ನಾಯಕ ಏಕ್ನಾಥ್ ಶಿಂಧೆ ನೇತೃತ್ವದಲ್ಲಿ 40 ಹೆಚ್ಚು ಎಂಎಲ್ಎಗಳು ಸದ್ಯ ಅಸ್ಸಾಂನ ಗುವಾಹಟಿಯ ರೆಡಿಸನ್ ಬ್ಲೂ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ.
ಈ ನಡುವೆ ಮಹಾ ಬಂಡಾಯ ನಾಯಕ ಶಿವಸೇನೆಯ ಏಕ್ನಾಥ್ ಶಿಂಧೆ ತಮಗೆ 45 ಶಾಸಕರ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ರೆಸಾರ್ಟ್ನಲ್ಲಿ ಮಹತ್ವದ ಸಭೆ ಕೂಡ ನಡೆಸಲಾಗುತ್ತಿದ್ದು, ಶಿವಸೇನೆಯ 35 ಹಾಗೂ 5 ಪಕ್ಷೇತರ ಶಾಸಕರು ಉಪಸ್ಥಿತರಿರೋ ಮಾಹಿತಿ ಲಭ್ಯವಾಗಿದೆ. ವಿಶೇಷವೆಂದ್ರೆ ಈ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾರ ಇಬ್ಬರು ಅತ್ಯಾಪ್ತ ಸಚಿವರು ಕೂಡ ಉಪಸ್ಥಿತಿರಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು 288 ಶಾಸಕರ ಬಲ ಹೊಂದಿರೋ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಹುಮತ ನಿರೂಪಿಸಲು ಯಾವುದೇ ಸರ್ಕಾರಕ್ಕೆ 145 ಶಾಸಕರ ಬೆಂಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 169 ಶಾಸಕರ ಬಲ ಹೊಂದಿರುವ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಸ್ಥಿರವಾಗಿದೆ ಎಂದೇ ಭಾವಿಸಲಾಗಿತ್ತು. ಆದ್ರೀಗ ಒಂದು ವೇಳೆ ಏಕ್ನಾಥ್ ಶಿಂಧೆ ಹೇಳಿದಂತೆ 45 ಶಾಸಕರು ಬೆಂಬಲ ಹಿಂತೆಗೆದುಕೊಂಡ ಪಕ್ಷದಲ್ಲಿ 124 ಕ್ಕೆ ಮೈತ್ರಿಕೂಟದ ಶಾಸಕ ಬಲ ಕುಸಿಯಲಿದ್ದು, ಸರ್ಕಾರ ಮಹಾಪತನವಾಗುತ್ತೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post