ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ T20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಎಲ್ಲಾ ತಂಡಗಳು ಪರ್ಫೆಕ್ಟ್ ಟೀಮ್ ಸೆಟ್ ಮಾಡೋಕೆ ತಯಾರಿ ನಡೆಸ್ತಿದ್ರೆ, ಟೀಮ್ ಇಂಡಿಯಾ ಮಾತ್ರ ಅದರ ಗೋಜಿಗೇ ಹೋಗಿಲ್ಲ.
ಒಂದೆಡೆ T20 ವಿಶ್ವಕಪ್ಗೆ ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿದ್ರೆ, ಮತ್ತೊಂದೆಡೆ ಟೀಮ್ ಮ್ಯಾನೇಜ್ಮೆಂಟ್ಗಳಿಗೆ, ಟೀಮ್ ಕಾಂಬಿನೇಷನ್ ಸೆಟ್ ಮಾಡೋ ಟೆನ್ಶನ್.. ಇದರ ನಡುವೆ T20 ವಿಶ್ವಕಪ್ ಹಬ್ಬಕ್ಕೆ, ಟೀಮ್ SQUAD ಸಬ್ಮಿಷನ್ಗೆ ICC ಡೆಡ್ಲೈನ್ ನೀಡಿರೋದು ಮತ್ತಷ್ಟು ತಲೆ ಬಿಸಿ ಏರಿಸಿದೆ. ಸೆಪ್ಟೆಂಬರ್ 15ರೊಳಗೆ 15 ಸದಸ್ಯರ ತಂಡ ಸಲ್ಲಿಸುವಂತೆ ಎಲ್ಲಾ ಕ್ರಿಕೆಟ್ ಮಂಡಳಿಗಳಿಗೆ ICC ನಿರ್ದೇಶನ ನೀಡಿದೆ.
ಅಕ್ಟೋಬರ್ 16ರಿಂದ ವಿಶ್ವಕಪ್ ಆರಂಭ. ವಿಶ್ವಕಪ್ಗೆ ದಿನಾಂಕ ಪ್ರಕಟವಾಗ್ತಿದ್ದಂತೆ ಎಲ್ಲಾ ತಂಡಗಳು ಪರ್ಫೆಕ್ಟ್ ಟೀಮ್ ಸೆಟ್ ಮಾಡೋಕೆ ಭರ್ಜರಿ ತಯಾರಿ ನಡೆಸ್ತಿದ್ರೆ, ಟೀಮ್ ಇಂಡಿಯಾ ಮಾತ್ರ ಅದರ ಗೋಜಿಗೇ ಹೋಗಿಲ್ಲ. ಆದ್ರೀಗ ಟೀಮ್ ಅನೌನ್ಸ್ಗೆ, ಡೆಡ್ಲೈನ್ ನೀಡ್ತಿದ್ದಂತೆ ಟೀಮ್ ಮ್ಯಾನೇಜ್ಮೆಂಟ್ ಸಾಕಷ್ಟು ಹೋಮ್ವರ್ಕ್ ಮಾಡೋಕೆ ಸಿದ್ಧವಾಗ್ತಿದೆ. ಜೊತೆಗೆ ಸೆಲೆಕ್ಟರ್ಸ್ ಮುಂದಿರೋ ಈ 4 ಅವಕಾಶಗಳಲ್ಲೇ, ಟೀಮ್ ಫೈನಲೈಸ್ ಮಾಡೋ ಅನಿವಾರ್ಯಕ್ಕೆ ಸಿಲುಕಿದೆ.
ಭಾರತ ಆಡಲಿರುವ T20 ಸರಣಿಗಳು
- ಐರ್ಲೆಂಡ್ ಎದುರು 2 ಪಂದ್ಯಗಳ T20 ಸರಣಿ
- ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ T20 ಸರಣಿ
- ವೆಸ್ಟ್ ಇಂಡೀಸ್ ಎದುರು 3 ಪಂದ್ಯಗಳ T20 ಸಮರ
- ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭ
ನಾಲ್ಕು ಸರಣಿಗಳಲ್ಲೇ T20 ಸಮರಕ್ಕೆ ಆಟಗಾರರ ಆಯ್ಕೆ?
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಬಹುತೇಕ ಆಟಗಾರರು, ಚುಟುಕು ಸಮರಕ್ಕೆ ಸದ್ದಿಲ್ಲದೆ ಆಯ್ಕೆಯಾಗಿದ್ದಾರೆ. ಆದರೆ ಕೆಲವು ಪ್ಲೇಸ್ಮೆಂಟ್ಗಳಿಗೆ ಇನ್ನೂ ಆನ್ಸರ್ ಸಿಕ್ಕಿಲ್ಲ. ಹೀಗಾಗಿ ಆ ಸ್ಲಾಟ್ಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ ಈ ನಾಲ್ಕು ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನ, ರಹಸ್ಯವಾಗಿ ಸ್ಲಾಟ್ ಫಿಲ್ ಮಾಡೋಕೆ ದ್ರಾವಿಡ್ & ಕಂಪನಿ ತೀರ್ಮಾನಿಸಿದೆ. ಆದ್ರೆ ಅದಕ್ಕೂ ಮೊದಲು ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್ಮೆಂಟ್ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಗ್ರೂಪ್ ಹಂತದಲ್ಲೇ ಭಾರತ ಹೊರಬಿದ್ದಿತ್ತು. ಆದ್ರೀಗ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡಲಾಗಿದೆ. ಆದ್ರೆ ಕೆಲವು ಪ್ರಶ್ನೆಗಳು ಇನ್ನೂ ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಟರ್ಸ್ಗೆ ಇನ್ನಿಲ್ಲದಂತೆ ಕಾಡ್ತಿವೆ.
ಸೆಲೆಕ್ಟರ್ಸ್ ಮುಂದಿರೋ ಪ್ರಶ್ನೆಗಳು.?
- ರೋಹಿತ್-ರಾಹುಲ್ಗೆ ಬ್ಯಾಕ್ ಅಪ್ ಓಪನರ್ ಯಾರು..?
- ಕೊಹ್ಲಿ ಫಾರ್ಮ್ ಸಮಸ್ಯೆ.? 3ನೇ ಸ್ಲಾಟ್ ಆಯ್ಕೆಗೆ ಸರಿಯೇ..?
- 4ನೇ ಸ್ಲಾಟ್ಗೆ ಸೂರ್ಯ-ಅಯ್ಯರ್ ಯಾರಿಗೆ ಆದ್ಯತೆ..?
- ಮೊದಲ ಆಯ್ಕೆ ವಿಕೆಟ್ಕೀಪರ್ಗೆ DK ಅಥವಾ ಪಂತ್..?
- 2ನೇ ಸ್ಪಿನ್ನರ್ ಆಗಿ ಯುಜಿ ಚಹಲ್ ಜೊತೆ ಯಾರು..?
- ಬೂಮ್ರಾ, ಶಮಿ ಜೊತೆಗೆ ಇನ್ನಿಬ್ಬರು ವೇಗಿಗಳು ಯಾರು..?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರಷ್ಟೆ, ಪರ್ಫೆಕ್ಟ್ ಟೀಮ್ ಸೆಟ್ ಆಗೋಕೆ ಸಾಧ್ಯ. ಆದ್ರೆ ಪ್ರತಿ ಸರಣಿಯಲ್ಲೂ ಒಬ್ಬೊಬ್ಬರು ಅದ್ಭುತ ಪ್ರದರ್ಶನ ನೀಡ್ತಿರೋದು, ಸೆಲೆಕ್ಟರ್ಸ್ ಮತ್ತು ಮ್ಯಾನೇಜ್ಮೆಂಟ್ ತಲೆಬಿಸಿ ಹೆಚ್ಚಿಸಿದೆ. ಯಾರಿಗೆ ಅವಕಾಶ ನೀಡಬೇಕು ಅನ್ನೋ ಗೊಂದಲಕ್ಕೂ ಸಿಲುಕಿದೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಇಂಗ್ಲೆಂಡ್ ಸರಣಿಯಲ್ಲೇ ಉತ್ತರ ಕಂಡುಕೊಳ್ಳಬೇಕಿದೆ.
ವಿಶ್ವಕಪ್ಗೆ ತಂಡದ ಆಯ್ಕೆ..!
‘ಇಂಗ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ಆಟಗಾರರ ಪ್ರದರ್ಶನವನ್ನ ದ್ರಾವಿಡ್ ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ. ಸ್ಥಿರ ಪ್ರದರ್ಶನ ನೀಡುವ ಆಟಗಾರರಿಗೆ, ಹೆಚ್ಚು ಆದ್ಯತೆ ನೀಡಲು ಯೋಜನೆ ಹಾಕಿದ್ದಾರೆ. ಸರಣಿಯಲ್ಲಿ ನೀಡೋ ಪ್ರದರ್ಶನದ ಆಧಾರದ ಮೇಲೆ, ಟಿ20 ವಿಶ್ವಕಪ್ಗೆ ಆಯ್ಕೆ ಮಾಡುವ ಸಂಭವ ಇದೆ. ವಿಶ್ವಕಪ್ ಆಯ್ಕೆಗೆ ಇದೇ ಸರಣಿ ಬಹಳ ಪ್ರಮುಖವಾಗಿದ್ದು, ಆಟಗಾರರ ಪಾಲಿಗೆ ಮಹತ್ವದ ಸರಣಿ’ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ
ದ್ರಾವಿಡ್ ಅಧಿಕಾರಕ್ಕೆ ಬಂದಾಗಿನಿಂದ, ತಂಡದ ಬೆಂಚ್ಸ್ಟ್ರೆಂಥ್ ಕೂಡ ಹೆಚ್ಚಾಗಿದೆ. ಅದೇ ರೀತಿ, ಒಂದು ಸರಣಿಯಲ್ಲಿ ಕಾಣಿಸಿಕೊಂಡ ಆಟಗಾರರು, ಮತ್ತೊಂದು ಸರಣಿಯಲ್ಲಿ ಮರೆಯಾಗ್ತಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಹಾಗಾಗಿ ತಂಡದ ಆಯ್ಕೆ ವಿಚಾರದಲ್ಲಿ, ದ್ರಾವಿಡ್ ನಡೆ ನಿಗೂಢವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post