ಉಳಿದಿರೋ ಒಂದು ಟೆಸ್ಟ್ ಪಂದ್ಯವನ್ನ ಜಯಿಸಿ ಇಂಗ್ಲೆಂಡ್ನಲ್ಲಿ, ಐತಿಹಾಸಿಕ ಸಾಧನೆ ಮಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಆದ್ರೆ ಕಳೆದ ವರ್ಷದಂತೆ ಸುಲಭವಾಗಿ ಆಂಗ್ಲರನ್ನ ಈ ಬಾರಿ ಮಣಿಸೋಕೆ ಆಗಲ್ಲ. ಗೆದ್ದು ಬೀಗಬೇಕಂದ್ರೆ ಟೀಮ್ ಇಂಡಿಯಾ ಸಿಕ್ಕಾಪಟ್ಟೆ ಹಾರ್ಡ್ವರ್ಕ್ ಮಾಡಬೇಕಿದೆ.
ಸೌತ್ ಆಫ್ರಿಕಾ ಸರಣಿ ಇದೀಗ ಮುಗಿದ ಅಧ್ಯಾಯ. ಈಗೇನಿದ್ರೂ ಎಲ್ಲರ ಚಿತ್ತ, ಇಂಗ್ಲೆಂಡ್ ಪ್ರವಾಸದ ಮೇಲೆ ನೆಟ್ಟಿದೆ. ಉಳಿದಿರೋ ಏಕೈಕ ಟೆಸ್ಟ್ ಪಂದ್ಯವನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಲು, ಟೀಮ್ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಇಂಗ್ಲೆಂಡ್ನಲ್ಲಿ ಬೀಡು ಬಿಟ್ಟಿರುವ ಆಟಗಾರರು ಸಿದ್ಧತೆಯನ್ನ ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಹೆಡ್ ಕೋಚ್ ಎಡ್ಜ್ಬಸ್ಟನ್ನಲ್ಲಿ ಗೆದ್ದು ಬೀಗೋ ವಿಶ್ವಾಸವನ್ನೂ, ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಬಾರಿ ಗೆಲುವು ಅಷ್ಟು ಸುಲಭದ್ದಿಲ್ಲ.
ಆಟಗಾರರು ರೆಡ್ ಬಾಲ್ ಕ್ರಿಕೆಟ್ ಆಡಿ ಕಳೆದಿವೆ 3 ತಿಂಗಳು.!
ಟೀಮ್ ಇಂಡಿಯಾ ಕೊನೆಯದಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದು, ಮಾರ್ಚ್ನಲ್ಲಿ..! ಅದೂ ತವರಿನ ಪಿಚ್ನಲ್ಲಿ..! ಅದಾಗಿ ಈಗ 3 ತಿಂಗಳು ಉರುಳಿವೆ. ಇದರ ನಡುವೆ ಟೀಮ್ ಇಂಡಿಯಾ ಆಟಗಾರರು ಐಪಿಎಲ್ ಸೇರಿದಂತೆ ಲಿಮಿಟೆಡ್ ಓವರ್ ಸೀರಿಸ್ನಲ್ಲೇ ಬ್ಯುಸಿಯಾಗಿದ್ದಾರೆ. ಚೇತೇಶ್ವರ್ ಪೂಜಾರ ಹೊರತುಪಡಿಸಿದ್ರೆ, ಟೆಸ್ಟ್ ತಂಡದಲ್ಲಿರೋ ಯಾವೊಬ್ಬ ಆಟಗಾರ ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ. ಇದೀಗ ಒಂದೇ ಸಲ ಅದೂ ಇಂಗ್ಲೆಂಡ್ನ ಪಿಚ್ಗಳಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡೋದು ನಿಜಕ್ಕೂ ಸವಾಲಾಗಲಿದೆ.
ಮಿಡಲ್ ಆರ್ಡರ್ ಬ್ಯಾಟರ್ಸ್ ಒಬ್ರೂ ಫಾರ್ಮ್ನಲ್ಲಿಲ್ಲ.!
ಟೀಮ್ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟಿಂಗ್ನಲ್ಲಿ ಬಲವೇ ಇಲ್ಲ ಅಂದ್ರೆ, ತಪ್ಪಾಗಲ್ಲ.! ವಿರಾಟ್ ಕೊಹ್ಲಿ ಫಾರ್ಮ್ನಲ್ಲೇ ಇಲ್ಲ. ಇನ್ನು ಇನ್ಕನ್ಸಿಸ್ಟೆಂಟ್ ರಿಷಭ್ ಪಂತ್ರನ್ನ ನಂಬೋ ಹಾಗಿಲ್ಲ. ಹನುಮ ವಿಹಾರಿ, ಶ್ರೇಯಸ್ ಅಯ್ಯರ್ದ್ದೂ, ಇದೇ ಕಥೆ. ಈ ಮಿಡಲ್ ಆರ್ಡರ್ ಸಮಸ್ಯೆಯೆ ತಂಡಕ್ಕೆ ಹಿನ್ನಡೆಯಾಗೋ ಸಾಧ್ಯತೆಯಿದೆ.
ಅಂದಿದ್ದ ಇಂಗ್ಲೆಂಡ್ ತಂಡವೇ ಬೇರೆ, ಈಗಿರೋದೆ ಬೇರೆ.!
ಯೆಸ್..! ಟೀಮ್ ಇಂಡಿಯಾದಲ್ಲಿರೋ ವೀಕ್ನೆಸ್ ಒಂದೆಡೆಯಾದ್ರೆ, ಎದುರಾಳಿ ಸ್ಟ್ರೆಂಥ್ ಇನ್ನೊಂದೆಡೆ. ಕಳೆದ ಬಾರಿಯ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ ಇನ್ಕನ್ಸಿಸ್ಟೆನ್ಸಿ ಸಮಸ್ತೆ ಎದುರಿಸ್ತಾ ಇತ್ತು. ಆದ್ರೆ ಈಗ ಹಾಗಿಲ್ಲ. ಇಂಗ್ಲೆಂಡ್ ಟೆಸ್ಟ್ ತಂಡದ ಅಪ್ರೋಚ್ ಕಂಪ್ಲೀಟ್ ಚೈಂಜ್ ಆಗಿದೆ. ಬೆನ್ ಸ್ಟೋಕ್ಸ್ ಕ್ಯಾಪ್ಟನ್, ಬ್ರೆಂಡನ್ ಮೆಕಲಮ್ ಕೋಚ್ ಆಗಿದ್ದೇ ಆಗಿದ್ದು, ಡಿಫೆನ್ಸಿವ್ ಆಗಿದ್ದ ಆಂಗ್ಲರ ಪಡೆ ಇದೀಗ ಅಗ್ರೆಸ್ಸೀವ್ ಕ್ರಿಕೆಟ್ ಆಡ್ತಿದೆ. ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಟಿ20 ಗೇಮ್ ಆಡಿ ಬರೋಬ್ಬರಿ 299 ಚೇಸ್ ಮಾಡಿದ್ದೇ ಇದಕ್ಕೆ ಸಾಕ್ಷಿ.
ಡ್ರೀಮ್ ಫಾರ್ಮ್ನಲ್ಲಿದ್ದಾರೆ ಇಂಗ್ಲೆಂಡ್ ಬ್ಯಾಟರ್ಸ್ .!
ಇಂಗ್ಲೆಂಡ್ ಟೆಸ್ಟ್ ತಂಡದ ಬ್ಯಾಟರ್ಸ್ಗಳೆಲ್ಲಾ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಮಾಜಿ ಕ್ಯಾಪ್ಟನ್ ಜೋ ರೂಟ್, ಕಿವೀಸ್ ಪಡೆಯ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಬೇರ್ ಸ್ಟೋ, ಬೆನ್ ಸ್ಟೋಕ್ಸ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಇವರನ್ನ ಕಟ್ಟಿ ಹಾಕೋದು ಟೀಮ್ ಇಂಡಿಯಾಗೆ ನಿಜಕ್ಕೂ ಸವಾಲೇ ಸರಿ.
ಜೇಮ್ಸ್ ಌಂಡರ್ಸನ್ – ಸ್ಟುವರ್ಟ್ ಬ್ರಾಡ್, ಬೆಂಕಿ- ಬಿರುಗಾಳಿ.!
ಪೆಸ್ ಅಟ್ಯಾಕ್ ಇಂಗ್ಲೆಂಡ್ ತಂಡದ ಮೇನ್ ಸ್ಟ್ರೆಂಥ್.! ಕಳೆದ ವರ್ಷದ ಪ್ರವಾಸದಲ್ಲಿ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ತಂಡದಲ್ಲಿದ್ರೂ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತ್ತು. ಆದ್ರೆ, ಈ ಬಾರಿ ಈ ಇಬ್ಬರನ್ನ ಎದುರಿಸೋದು ಅಷ್ಟು ಸುಲಭವಿಲ್ಲ. ಸದ್ಯ ಸಾಲಿಡ್ ಪ್ರದರ್ಶನ ನೀಡ್ತಾ ಇರೋ ಇಬ್ಬರು ಕಿವೀಸ್ ಬ್ಯಾಟ್ಸ್ಮನ್ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಇವರ ದಾಳಿಯನ್ನ ಸಮರ್ಥವಾಗಿ ಎದುರಿಸಬೇಕಂದ್ರೆ, ಟೀಮ್ ಇಂಡಿಯಾ ಬ್ಯಾಟರ್ಸ್ ಸಖತ್ ಹಾರ್ಡ್ವರ್ಕ್ ಮಾಡಬೇಕಿದೆ.
Practice 🔛
Strength and Conditioning Coach, Soham Desai, takes us through Day 1⃣ of #TeamIndia's practice session in Leicester as we build up to the #ENGvIND Test. 💪 pic.twitter.com/qxm2f4aglX
— BCCI (@BCCI) June 21, 2022
ಕಳೆದ ಬಾರಿ ಪ್ರವಾಸಕ್ಕಿಂತ ಭಿನ್ನವಾಗಿದೆ ತಂಡ.!
ಟೀಮ್ ಇಂಡಿಯಾ ಕೊನೆಯ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ರೆ, ರವಿಶಾಸ್ತ್ರಿ ಕೋಚ್ ಆಗಿದ್ರು. ಇದೀಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಗಿದ್ರೆ, ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದಾರೆ. ಅತ್ತ ಇಂಗ್ಲೆಂಡ್ ತಂಡದ ಕೋಚ್-ಕ್ಯಾಪ್ಟನ್ ಕೂಡ ಚೈಂಜ್ ಆಗಿದ್ದಾರೆ. ಇದೆಲ್ಲದರ ಜೊತೆಗೆ ಕಳೆದ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ 7 ಆಟಗಾರರು ಈಗ ತಂಡದಲ್ಲೇ ಇಲ್ಲ.
ಇದೆಲ್ಲದರ ಜೊತೆ ಇಂಗ್ಲೆಂಡ್ ಕಂಡೀಷನ್ಗೆ ಹೊಂದಿಕೊಳ್ಳೋ ಸವಾಲೂ ಟೀಮ್ ಇಂಡಿಯಾ ಮುಂದಿದೆ. ಈಗಾಗಲೇ ಒಂದು ಬ್ಯಾಚ್ ಇಂಗ್ಲೆಂಡ್ನಲ್ಲಿ ಅಭ್ಯಾಸ ಆರಂಭಿಸಿದ್ರೆ, ಇನ್ನೊಂದು ಬ್ಯಾಚ್ ನಿನ್ನೆ ರಿಚ್ ಆಗಿದೆ. ಇದು ಕೂಡ ಹಿನ್ನಡೆಯಾಗೋ ಸಾಧ್ಯತೆಯಿದೆ.\
ಸರಣಿಯಲ್ಲಿ ಟೀಮ್ ಇಂಡಿಯಾ ಸದ್ಯ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಉಳಿದಿರುವ ಒಂದು ಪಂದ್ಯದಲ್ಲಿ ಗೆಲ್ಲದಿದ್ರೂ, ಡ್ರಾ ಮಾಡಿಕೊಂಡರೆ ಸಾಕು ಸರಣಿ ಭಾರತದ ಕೈ ವಶವಾಗಲಿದೆ. ಆದ್ರೆ, ಎದುರಿರುವ ಸವಾಲುಗಳನ್ನ ಗಮನಿಸಿದ್ರೆ, ಟೀಮ್ ಇಂಡಿಯಾ ಎಚ್ಚರಿಕೆಯ ಆಟವಾಡಿದ್ರೆ ಮಾತ್ರ ಇವೆಲ್ಲಾ ಸಾಧ್ಯ ಅನ್ನೋದಂತೂ ಸ್ಪಷ್ಟ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post