ಬಂಡಾಯ ಎದ್ದಿರುವ ಶಾಸಕರು ನನ್ನ ಬಳಿಬಂದು ಪಕ್ಷದಲ್ಲಿ ಹಾಗೂ ಆಡಳಿತದಲ್ಲಿ ಉಂಟಾಗಿರುವ ಸಮಸ್ಯೆಯನ್ನ ನೇರವಾಗಿ ಹೇಳಿದರೆ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆ ಹಿರಿಯ ನಾಯಕ ಏಕ್ನಾಥ್ ಶಿಂದೆ ತಮ್ಮ ಬೆಂಬಲಿಗರೊಂದಿಗೆ ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಅತಂತ್ರಕ್ಕೆ ಸಿಲುಕಿದೆ. ಯಾವುದೇ ಕ್ಷಣದಲ್ಲಾದರೂ ಸರ್ಕಾರ ಪತನಗೊಳ್ಳುವ ಬೆಳವಣಿಗೆಗಳು ನಡೆಯುತ್ತಿವೆ.
ಹಿಂದುತ್ವ ಶಿವಸೇನೆಯ ಆತ್ಮ
ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸಿಎಂ ಉದ್ಧವ್ ಠಾಕ್ರೆ ಇಂದು ಫೇಸ್ಬುಕ್ ಲೈವ್ ಬಂದು ಬಂಡಾಯ ಎದ್ದಿರುವ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಈ ಹಿಂದೆ ಸರ್ಜರಿ ಆಗಿದ್ದ ಹಿನ್ನೆಲೆಯಲ್ಲಿ ಕೆಲವು ಸಚಿವರ ಜೊತೆ ನೇರವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ರಾಜಕೀಯದಲ್ಲಿ ಪ್ರಕ್ಷುಬದ್ಧ ಬೆಳವಣಿಗೆಗಳು ನಡೆದಿವೆ.
ಶಿವಸೇನೆ ಬಗ್ಗೆ ನಮ್ಮದೇ ನಾಯಕರು ಅವಮಾನವಾಗುವ ರೀತಿಯಲ್ಲಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಇದು ಸರಿ ಅಲ್ಲ. ಹಿಂದುತ್ವ ಅನ್ನೋದು ಶಿವಸೇನೆಯ ಆತ್ಮ. ಶಿವಸೇನೆ ಯಾವುತ್ತೂ ಹಿಂದುತ್ವದ ವಿರುದ್ಧ ನಡೆದುಕೊಂಡಿಲ್ಲ. ಮುಂದೆಯೂ ನಡೆಯೋದಿಲ್ಲ ಎಂದು ಮಾಹಾರಾಷ್ಟ್ರದ ಜನರಿಗೆ ನಾನು ಭರವಸೆ ನೀಡುತ್ತೇನೆ ಎಂದರು.
ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ನಮಗೆ ಬೇರೆ ಆಯ್ಕೆ ಇರಲಿಲ್ಲ. ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ ಇರಲಿಲ್ಲ. ಶಿವಸೇನೆ ತೆಗೆದುಕೊಂಡ ನಿರ್ಧಾರ ಮತ್ತು ಕಾಂಗ್ರೆಸ್ ಹಾಗೂ ಎನ್ಸಿಪಿ ನಾಯಕರ ನಡುವೆ ನಡೆದ ಮಾತುಕತೆಯ ಬಳಿಕವೇ ನಾನು ಸಿಎಂ ಆಗಲು ಒಪ್ಪಿಕೊಂಡಿದ್ದು. ಅಧಿಕಾರದ ಆಸೆ ನನಗೆ ಇಲ್ಲ.
ಪಕ್ಷದ ಸ್ಥಾನಕ್ಕೂ ರಾಜೀನಾಮೆ ನೀಡ್ತೇನೆ
ನನಗೆ ಅಧಿಕಾರದ ವ್ಯಾಮೋಹ ಇಲ್ಲ. ಶಿವಸೇನೆ ಹಿಂದುತ್ವದ ಮೇಲೆ ನಿಂತಿದೆ. ಪಕ್ಷದ ಹಿಂದುತ್ವದ ಬಗ್ಗೆ ಮಾತನಾಡಿದರೆ ನನಗೆ ನೋವು ಆಗುತ್ತದೆ. ಬಂಡಾಯ ಎದ್ದಿರುವ ಶಾಸಕರು ಯಾವುದೋ ಹೋಟೆಲ್ನಲ್ಲಿ ಕೂತು ಮಾತನಾಡೋದಲ್ಲ. ನೇರವಾಗಿ ನನ್ನ ಬಳಿ ಬಂದು ಸಮಸ್ಯೆ ಏನು ಎಂದು ಹೇಳಲಿ. ಅಲ್ಲಿರುವ ಒಬ್ಬನೇ ಒಬ್ಬ ಶಾಸಕ ನನ್ನ ರಾಜೀನಾಮೆ ಕೇಳಿದರೆ, ಅಥವಾ ನಾನು ಎಲ್ಲಿ ಪಕ್ಷ ಮತ್ತು ಹಿಂದುತ್ವ ವಿಚಾರದಲ್ಲಿ ಎಡವಿದ್ದೇನೆ ಎಂದು ಹೇಳಿದರೆ ಈಗಾಗಲೇ ರಾಜೀನಾಮೆ ನೀಡುತ್ತೇನೆ. ಕೇವಲ ಸಿಎಂ ಸ್ಥಾನಕ್ಕೆ ಮಾತ್ರವಲ್ಲ. ಶಿವಸೇನೆಯ ಮುಖ್ಯಸ್ಥ ಸ್ಥಾನಕ್ಕೂ ರಾಜೀನಾಮೆಗೆ ಸಿದ್ಧನಿದ್ದೇನೆ. ರಾಜೀನಾಮೆಯ ಪತ್ರ ನನ್ನ ಬಳಿ ರೆಡಿ ಇದೆ. ನಮ್ಮ ನಾಯಕರು ನೇರವಾಗಿ ಚರ್ಚೆಗೆ ಬರಲಿ. ನನ್ನ ಬಳಿ ಸಮಸ್ಯೆ ಏನೆಂದು ಹೇಳಿಕೊಳ್ಳಲಿ. ಆಮೇಲೆ ಏನೆಂದು ತೀರ್ಮಾನಿಸೋಣ ಅಂತಾ ಮೂಲಕ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post