ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಪ್ರಕ್ಷುಬ್ಧತೆ ಹಾಗೆಯೇ ಮುಂದುವರಿದಿದೆ. ಸರ್ಕಾರ ಬೀಳುವ ಮುನ್ಸೂಚನೆಗಳನ್ನ ಶಿವಸೇನೆಯ ನಾಯಕರೇ ನೀಡುತ್ತಿದ್ದಾರೆ.
ಅದರಂತೆ ಅಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ನಾನು ಏಕ್ನಾಥ್ ಸಿಂದೆ ಜೊತೆ ಇಂದು ಬೆಳಗ್ಗೆ ಮಾತನಾಡಿದೆ. ಯಾರೆಲ್ಲಾ ಹೊರಗೆ ಹೋಗಿದ್ದಾರೋ ಅವರೆಲ್ಲಾ ಶಿವಸೇನೆಯ ಸೈನಿಕರು. ಅವರೆಲ್ಲ ಶಿವಸೇನೆ ಜೊತೆ ಉಳಿಯಲು ಬಯಸುತ್ತಾರೆ. ನಮ್ಮಲ್ಲಿ ಕೆಲವು ತಪ್ಪು ತಿಳುವಳಿಕೆಯಿಂದ ಸರ್ಕಾರದಲ್ಲಿ ಹೀಗೆ ಆಗಿರಬಹುದು.
ಇದು ಕೆಟ್ಟ ಸನ್ನಿವೇಶ. ಅಧಿಕಾರ ಕಳೆದುಕೊಳ್ಳಬಹುದು. ಮತ್ತೆ ಪಡೆಯಲೂಬಹುದು. ಅಧಿಕಾರಕ್ಕಿಂತ ಘನತೆ ಮುಖ್ಯ
ಸಂಜಯ್ ರಾವತ್, ಶಿವಸೇನೆ ನಾಯಕ
ಇದಕ್ಕೂ ಮೇಲಾಗಿ ಶಿಂದೆ ನನ್ನ ಬಳಿ ಯಾವುದೇ ಬೇಡಿಕೆಯನ್ನ ಇಟ್ಟಿಲ್ಲ. ಉದ್ಧವ್ ಠಾಕ್ರೆ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆ ಕೈಜೋಡಿಸಿರುವ ಬಗ್ಗೆ ಮಾತನಾಡಿದರು. ನಮ್ಮ ಹೋರಾಟವನ್ನ ಮುಂದುವರಿಸುತ್ತೇವೆ. ಇಲ್ಲಿ ಸಂಭವಿಸುವ ಕೆಟ್ಟ ವಿಚಾರ ಏನು? ನಾವು ಅಧಿಕಾರ ಕಳೆದುಕೊಳ್ಳಬಹುದು. ಮತ್ತೆ ಪಡೆಯಬಹುದು. ಅಧಿಕಾರಕ್ಕಿಂತ ನಮಗೆ ಪಕ್ಷದ ಘನತೆಯೇ ಮುಖ್ಯ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post