ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ನಡೆದ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ‘ವೇದ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾಗಿಯಾಗಿದ್ದರು. ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡುವ ವೇಳೆ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನ ಸ್ಮರಿಸಿದರು.
‘ವೇದ’ ಚಿತ್ರದ ಕಾರ್ಯಕ್ರಮಕ್ಕೆ ಬರಬೇಕು ಎಂದು ಈ ಹಿಂದೆ ಹೇಳಿದಾಗ ನಮ್ಮ ಜೊತೆ ಪುನೀತ್ ರಾಜ್ಕುಮಾರ್ ಇದ್ದರು. ನಮ್ಮ ಬ್ಯಾಡ್ ಲಕ್. ಅಪ್ಪು ನಿಧನರಾಗಿದ್ದಾರೆ. ನಾನು ಈಗಲೂ ಹೇಳೋದು ಇಷ್ಟೇ, ಪುನೀತ್ ರಾಜ್ಕುಮಾರ್ ನಮ್ಮನ್ನ ಬಿಟ್ಟು ಎಲ್ಲಿಗೂ ಹೋಗಿಲ್ಲ. ಈಗಲೂ ಇದ್ದಾರೆ ಎಂದು ಭಾವುಕರಾದರು.
ಇನ್ನು ಶಿವಣ್ಣ ಟೆಸ್ಟ್ ಪ್ಲೇಯರ್ ಥರಾ, 125ನೇ ಸಿನಿಮಾವನ್ನ ಯಶಸ್ವಿಯಾಗಿ ಪೂರೈಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನಾನು ಆಲ್ದಿ ಬೆಸ್ಟ್ ಹೇಳ್ತೀನಿ ಅಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post