ಕಳೆದ ವರ್ಷ T20 ವಿಶ್ವಕಪ್ಗೆ ಆಯ್ಕೆಯಾದ ಈ ಇಬ್ಬರನ್ನ, ಭವಿಷ್ಯದ ಸ್ಪಿನ್ನರ್ಗಳೆಂದೇ ಭಾವಿಸಲಾಗಿತ್ತು. ಆದ್ರೀಗ ಅವರು ಹೆಸರು, ಸದ್ದೇ ಇಲ್ಲದಂತಾಗಿದೆ. ಅಪರೂಪದ ಸ್ಪಿನ್ನರ್ಗಳೆಂದು ಹೇಳಿದ್ದ ಬಿಸಿಸಿಐ, ಈಗ ಅವರನ್ನೇ ಮರೆತಿದೆ. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳಲ್ಲಿ ಬ್ಯುಸಿಯಾಗಿದೆ. ಸೌತ್ ಆಫ್ರಿಕಾ ಸರಣಿ ಮುಗಿದ ಬೆನ್ನಲ್ಲೇ ಭಾರತ, ಐರ್ಲೆಂಡ್ ಸಿರೀಸ್ಗೆ ರೆಡಿಯಾಗಿದೆ. ಆ ಬಳಿಕ ಆಂಗ್ಲರ ಎದುರು ಕಾದಾಟ ನಡೆಸಲು ಸಿದ್ಧತೆ ನಡೆಸ್ತಿದೆ. ಇದರ ನಡುವೆ ಲೆಗ್ ಸ್ಪಿನ್ನರ್ ರಾಹುಲ್ ಚಹರ್, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಬಗ್ಗೆ ಬಹಳ ದಿನಗಳ ಬಳಿಕ ಭಾರೀ ಚರ್ಚೆ ನಡೀತಿದೆ. ಅಂದು ತಂಡಕ್ಕೆ ಬೇಕಾದವರು, ಇಂದು ಯಾಕೆ ಬೇಡ ಎಂಬ ಪ್ರಶ್ನೆ ಎತ್ತಿದ್ದಾರೆ ದಿಗ್ಗಜರು..!
IPLನಲ್ಲಿ ಅಬ್ಬರಿಸಿ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಸ್ಪಿನ್ನರ್ಸ್.!
ವಿಶ್ವಕಪ್ನಲ್ಲಿ ಫೇಲ್ ಆಗಿದ್ದೇ ಆಗಿದ್ದು, ಚಹರ್-ವರುಣ್ ಪತ್ತೇನೇ ಇಲ್ಲ.!
ಹೌದು..! 2021ರ IPLನಲ್ಲಿ ರಾಹುಲ್ ಚಹರ್ ಮತ್ತು ವರುಣ್ ಚಕ್ರವರ್ತಿ, ಡೇಂಜರಸ್ ಸ್ಪಿನ್ನರ್ಗಳಾಗಿದ್ರು. ಪಂದ್ಯ ಪಂದ್ಯದಲ್ಲೂ ವಿಕೆಟ್ ಬೇಟೆಯಾಡಿ ಗೇಮ್ ಚೇಂಜರ್ಸ್ ಎನಿಸಿಕೊಂಡಿದ್ರು. ಅದ್ರಲ್ಲೂ UAEನಲ್ಲೇ IPL ಬಳಿಕ T20 ವಿಶ್ವಕಪ್ ಕೂಡ ಆಯೋಜನೆಯಾಗಿತ್ತು. ಇದೇ ಕಾರಣಕ್ಕೆ ಚಹಲ್, ಕುಲ್ದೀಪ್ರಂಥ ಮೇಜರ್ ಸ್ಪಿನ್ನರ್ಗಳನ್ನೇ ಹಿಂದಿಕ್ಕಿ, ಅಚ್ಚರಿ ಎಂಬಂತೆ T20 ವಿಶ್ವಕಪ್ಗೆ ಈ ಇಬ್ಬರು ಆಯ್ಕೆಯಾಗಿದ್ರು.
ಆದ್ರೆ ವಿಶ್ವಕಪ್ನಲ್ಲಿ ರಾಹುಲ್ ಚಹರ್-ವರುಣ್ ಚಕ್ರವರ್ತಿ, ಕೈ ಕೊಟ್ರು. ಟೀಮ್ ಮ್ಯಾನೇಜ್ಮೆಂಟ್ ಇಟ್ಟಿದ್ದ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ವಿಫಲರಾದ್ರು. ಭವಿಷ್ಯದಲ್ಲಿ ಭಾರತ ತಂಡದಲ್ಲಿ ಈ ಇಬ್ರು ಸ್ಪಿನ್ನರ್ಗಳೇ, ರೂಲಿಂಗ್ ಮಾಡ್ತಾರೆ ಎಂಬ ಅಲೆಯನ್ನ ಸುಳ್ಳಾಗಿಸಿದ್ರು. ವಿಕೆಟ್ ಕಬಳಿಸೋಕೆ ಪರದಾಡಿದ ಈ ಜೋಡಿ, ವಿಶ್ವಕಪ್ನಲ್ಲಿ ಫೇಲ್ ಆಗ್ತಿದ್ದಂತೆ ಈಗ ಪತ್ತೆಗೇ ಇಲ್ಲವಾಗಿದೆ.
ಪ್ರಸ್ತುತ IPLನಲ್ಲೂ ಚಹರ್ - ವರುಣ್ ಫ್ಲಾಪ್ ಶೋ.!!
ಕಳೆದ IPL ಸೀಸನ್ನಲ್ಲಿ ವರುಣ್ 18 ವಿಕೆಟ್ ಪಡೆದು, ಉತ್ತಮ ಎಕಾನಮಿ ಕಾಪಾಡಿಕೊಂಡಿದ್ರು. ರಾಹುಲ್ ಚಹರ್ ಆಡಿದ ಕಡಿಮೆ ಪಂದ್ಯಗಳಲ್ಲಿ ಅದ್ಭುತ ಎಕಾನಮಿ ಜೊತೆಗೆ 13 ವಿಕೆಟ್ ಕಬಳಿಸಿದ್ರು. ಆದ್ರೆ ಈ ವರ್ಷ ನಡೆದ IPLನಲ್ಲಿ ವರುಣ್-ರಾಹುಲ್ ಕಳಪೆ ಪ್ರದರ್ಶನ ನೀಡ್ತು. ವರುಣ್ ಚಕ್ರವರ್ತಿ 11 ಪಂದ್ಯಗಳನ್ನಾಡಿ 6 ವಿಕೆಟ್ ಪಡೆದ್ರೆ, ರಾಹುಲ್ ಚಹರ್ 14 ವಿಕೆಟ್ ಉರುಳಿಸಿ ಪರವಾಗಿಲ್ಲ ಎನಿಸಿಕೊಂಡ್ರು.
ಹೇಳಿದಂತೆ ನಡೆದುಕೊಳ್ಳದ ಬಿಸಿಸಿಐ, ಸೆಲೆಕ್ಟರ್ಸ್ ವಿರುದ್ಧ ಟೀಕೆ!!
ಹೌದು.! ರಾಹುಲ್ ಚಹರ್-ವರುಣ್ ಚಕ್ರವರ್ತಿ ಇಬ್ರೂ, ಭಾರತಕ್ಕೆ ಸಿಕ್ಕ ಅಪರೂಪದ ಸ್ಪಿನ್ನರ್ಸ್. ವರುಣ್ರಂಥ ಮಿಸ್ಟ್ರಿ ಸ್ಪಿನ್ನರ್ ಸಿಕ್ಕಿರೋದೇ ಅದೃಷ್ಟ. ಮಿಸ್ಟ್ರಿ ಸ್ಪಿನ್ನರ್ಗಳು ಬೇರೆ ಯಾವ ತಂಡಗಳಲ್ಲೂ ಇಲ್ಲ. ಹಾಗೇ ರಾಹುಲ್ ಚಹರ್ ಲೆಗ್ಬ್ರೇಕ್ ಸ್ಪಿನ್ನರ್. ನಮ್ಮಲ್ಲಿ ಲೆಗ್ಬ್ರೇಕ್ ಸ್ಪಿನ್ನರ್ಗಳ ಕೊರತೆ ಇದೆ. ಹಾಗಾಗಿ ಈ ಅಪರೂಪದ ಪ್ರತಿಭೆಗಳನ್ನ ಉಳಿಸಿ ಬೆಳೆಸಬೇಕು ಅಂತ, ಬಿಸಿಸಿಐ ಹೇಳಿತ್ತು.
ಆದ್ರೀಗ ಅವರನ್ನೇ ಮರೆತಿರೋದು ಸರಿನಾ.?
T20 ವಿಶ್ವಕಪ್ಗೆ ರವೀಂದ್ರ ಜಡೇಜಾ-ಆರ್.ಅಶ್ವಿನ್ ಜೊತೆಗೆ, ಮತ್ತೊಬ್ಬ ಸ್ಪಿನ್ನರ್ ಅಗತ್ಯ ಇತ್ತು. ಈ ಸ್ಥಾನಕ್ಕೆ ಕುಲ್ದೀಪ್-ಚಹಲ್ರಲ್ಲಿ ಒಬ್ರು ಆಯ್ಕೆ ಆಗ್ತಾರೆ ಎನ್ನಲಾಗಿತ್ತು. ಆದ್ರೆ ವಿಶ್ವಕಪ್ಗೂ ಮುನ್ನ ಕೆಲವು ಸರಣಿಗಳಲ್ಲಿ, ಕುಲ್ಚಾ ಜೋಡಿ ವೈಫಲ್ಯ ಅನುಭವಿಸಿತ್ತು. ಆದ್ರೆ ಚಹಲ್ ಅದೇ IPLನಲ್ಲಿ ಘರ್ಜಿಸಿದ್ರು. ಆದ್ರೂ ವಿಶ್ವಕಪ್ಗೆ ಚಹರ್-ವರುಣ್ಗೆ ಅವಕಾಶ ನೀಡಿದ್ದು, ಅಚ್ಚರಿ ಮೂಡಿಸ್ತು. ಆದ್ರೆ ಬೇರೆ ಕ್ರಿಕೆಟ್ ತಂಡಗಳು ಇಂಥ ಪ್ರತಿಭೆಗಳನ್ನ ಬೆಳೆಸಿದ್ರೆ, ನಮ್ಮ ತಂಡ ಇಬ್ಬರನ್ನೂ ದೂರ ಇಟ್ಟಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದ್ವಿಪಕ್ಷೀಯ ಸರಣಿಗಳಿಗೂ ಇಲ್ಲ ಈ ಜೋಡಿಗೆ ಅವಕಾಶ..!
ಮೇಜರ್ ಟೂರ್ನಿಗಿರಲಿ ಪ್ರಸ್ತುತ ನಡಿತಿರೋ ದ್ವಿಪಕ್ಷೀಯ ಸರಣಿಗಳಿಗೂ ರಾಹುಲ್ ಚಹರ್ – ವರುಣ್ ಚಕ್ರವರ್ತಿಗೆ ಅವಕಾಶವೇ ಇಲ್ಲದಂತಾಗಿದೆ. ಪ್ರಮುಖ ಸ್ಪಿನ್ನರ್ಗಳು ತಂಡದಲ್ಲಿ ಇಲ್ಲದಿರೋವಾಗ ಈ ಜೋಡಿಗೆ ಅವಕಾಶ ನೀಡಬಹುದಿತ್ತು. ಆದ್ರೆ ಕಡೆಗಣನೆ ಮಾಡ್ತಿರೋದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಮೊದಲು ಅವರನ್ನೇ ಬೇಕೆಂದು ಹೇಳಿದ್ದ ಬಿಸಿಸಿಐ ಮತ್ತು ಸೆಲೆಕ್ಟರ್ಸ್ ಈಗ ಮಾಡ್ತಿರೋದೇನು.? ಎಂಬುದು ಕ್ರಿಕೆಟ್ ಎಕ್ಸ್ಫರ್ಟ್ಗಳ ಪ್ರಶ್ನೆಯಾಗಿದೆ.
ರಾಹುಲ್ ಚಹರ್ ಯಾವುದೇ ಫಿಟ್ನೆಸ್ ಸಮಸ್ಯೆ ಇರಲಿಲ್ಲ. ಆದ್ರೆ ವರುಣ್ ಚಕ್ರವರ್ತಿ ಪದೆಪದೇ ಫಿಟ್ನೆಸ್ ಸಮಸ್ಯೆಗೆ ಸಿಲುಕುತ್ತಿದ್ರು. ಹಾಗಂತ ಅನ್ಫಿಟ್ ಆಗಿರಲಿಲ್ಲ. ಆದರೆ ಇಬ್ಬರನ್ನೂ ಬೆಳೆಸುವುದಾಗಿ ಹೇಳಿದ್ದ ಬಿಸಿಸಿಐ, ಈಗ ಲೆಕ್ಕಕ್ಕೇ ತೆಗೆದುಕೊಳ್ದೇ ಇರೋದು ಸರಿಯಲ್ಲ. ಒಂದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಮಾತ್ರಕ್ಕೆ ಅವರ ಬೌಲಿಂಗ್ ಕಳಪೆ ಎಂದು ನಿರ್ಧರಿಸೋದು ಯಾವ ನ್ಯಾಯ.? ಎಂಬ ಚರ್ಚೆ ನಡೀತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post