ಟಿಎನ್ ಸೀತಾರಂ ಅವರ ಧಾರಾವಾಹಿಗಳಿಗಾಗಿ ಕಾಯೋ ವೀಕ್ಷಕರ ವರ್ಗಯಿದೆ. ಅವರ ನಿರ್ದೇಶನದ ಶೈಲಿಯೇ ಭಿನ್ನ. ವಾಸ್ತವಕ್ಕೆ ಹತ್ತಿರವಾಗುವಂತಹ ಸ್ಕ್ರೀನ್ ಪ್ಲೇ, ಸಹಜ ಅಭಿನಯ, ಮೌಲ್ಯ ತುಂಬಿರುವ ಸ್ಪಷ್ಟ ಸಂಭಾಷಣೆ ಇನ್ನೂ ಹತ್ತು ಹಲವಾರು ವಿಶೇಷತೆಗಳು ಟಿಎನ್ಎಸ್ ಅವ್ರ ಧಾರಾವಾಹಿಗಳಲ್ಲಿ ಸಿಗುತ್ತವೆ. ಅದಕ್ಕೆ ಜನ ಅವ್ರನ್ನ ಅಷ್ಟು ಇಷ್ಟಪಡೋದು.
ಕೋವಿಡ್ ಕಾರಣದಿಂದ ಹಲವಾರು ಧಾರಾವಾಹಿಗಳು ಅರ್ಧಕ್ಕೆ ತಮ್ಮ ಕತೆಯನ್ನ ಸ್ಟಾಪ್ ಮಾಡುವ ಪರಿಸ್ಥಿತಿ ಬಂತು. ಈ ಸಾಲಿನಲ್ಲಿ ಟಿ.ಎನ್ ಸೀತಾರಾಮ್ ಅವ್ರ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಗಳು ಜಾನಕಿ ಕೂಡ ಇತ್ತು. ಅರ್ಧದಲ್ಲಿಯೇ ನಿಲ್ಲಿಸಿದ್ದ ಈ ಧಾರಾವಾಹಿ ಮತ್ತೆ ಮುಂದುವರೆಯಲಿದೆ. ಆದರೆ ಇಲ್ಲೊಂದು ವಿಶೇಷತೆಯಿದೆ. ಟಿವಿ ಪರದೆಮೇಲೆ ಜಾನಕಿ ಬರುವುದಿಲ್ಲ. ಬದಲಿಗೆ ನಿಮ್ಮ ಅಂಗೈಯಲ್ಲಿಯೇ ಬರ್ತಾಳಂತೆ.
ಹೌದು, ಮಗಳು ಜಾನಕಿಯ ಮುಂದಿನ ಅಧ್ಯಾಯ ಭೂಮಿಕಾ ಟಾಕೀಸ್ ಯುಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಟಿಎನ್ಎಸ್ ಅವರ ಅದ್ಭುತ ಕೊಡುಗೆ ಮಯಾಮೃಗ ಭೂಮಿಕಾ ಟಾಕೀಸ್ನಲ್ಲಿ ಮತ್ತೊಮ್ಮೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಸದ್ಯ ಇದೇ ದಾರಿಯಲ್ಲಿ ಜಾನಕಿಯ ಮುಂದಿನ ಅಧ್ಯಾಯ ಬರಲಿದೆ. ಈಗಾಗಲೇ ನಾಯಕಿಯಾಗಿದ್ದ ಗಾನವಿ ಈ ಹೊಸ ಅಧ್ಯಾಯದಲ್ಲಿ ಇರುವವುದಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಇದೇ ತಿಂಗಳು ಶೂಟಿಂಗ್ ಕೂಡ ಶುರುವಾಗಲಿದೆ.
ಮತ್ತೊಂದು ವಿಶೇಷ ಅಂದರೆ ಕಂಪ್ಲೀಟ್ ಸೀರಿಯಲ್ ಯೂಟ್ಯೂಬ್ನಲ್ಲಿಯೇ ಬರಲಿದೆ. ಮಗಳು ಜಾನಕಿಯನ್ನ ಫ್ರೀಯಾಗಿ ನೋಡೊಕಾಗಲ್ಲ. ತಿಂಗಳಿಗೆ ಇಂತಿಷ್ಟು ಅಂತಾ ಹಣ ಕಟ್ಬೇಕು. ಇದು ಧಾರಾವಾಹಿಯ ಬೆಳವಣಿಗೆಗೆ ಸಹಕಾರವಾಗಲಿದೆ ಅಂತಾರೆ ಟಿಎನ್ಎಸ್ ಅವ್ರು. ಅಂದ್ಹಾಗೆ ಇದೇ ಸರಣಿಯಲ್ಲಿ ಕತೆಗಾರ, ಮಾಯಾ ಮಾಡಿದ ಮರ್ಡರ್ ಹೀಗೆ ಹಿಟ್ ಧಾರಾವಾಹಿಗಳು ಮರುಪ್ರಸಾರವಾಗಲಿವೆ.
ಒಟ್ನಲ್ಲಿ ಟಿಎನ್ ಸೀತಾರಾಮ್ ಅವರ ಅದ್ಭುತ ಧಾರಾವಾಹಿಗಳಿಗೆ ಡಿಜಿಟಲ್ ಪ್ಲಾಟ್ಫಾರಂ ಸಿಕ್ಕಿದೆ. ವೀಕ್ಷಕರ ಒತ್ತಾಯದ ಮೇರಿಗೆ ಹೊಸ ಪ್ರಯತ್ನ ಮಾಡ್ತಿದ್ದಾರೆ. ಇದು ಯಶಸ್ಸು ಕಂಡರೆ ಮತ್ತಷ್ಟು ಒಳ್ಳೆಯ ಕಂಟೆಂಟ್ಗಳು ಬರಲಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post