ಮರಾಠ ನೆಲದಲ್ಲಿ ರಾಜಕೀಯ ಬಿಕ್ಕಟ್ಟು ರಣರೋಚಕ ಘಟ್ಟ ತಲುಪಿಸಿದೆ. ಠಾಕ್ರೆ ಕಟ್ಟಿ ಬೆಳಸಿದ ಪಕ್ಷದ ಸೈನಿಕರು ಇವತ್ತು ಉದ್ಧವ್ ಠಾಕ್ರೆ ಕೈ ಬಿಟ್ಟಿದ್ದಾರೆ. ಅಘಾಡಿ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಬಣ ಪವರ್ ಫುಲ್ ಆಗ್ತಿದೆ. ಮೊದಲ ದಿನ 12 ಇದ್ದ ಶಾಸಕರ ಬೆಂಬಲ ಇವತ್ತು 42ರ ಗಡಿ ಮುಟ್ಟಿದೆ. ಇನ್ನೊಂದ್ಕಡೆ 55 ಇದ್ದ ಉದ್ಧವ್ ಠಾಕ್ರೆ ಸರ್ಕಾರದ ಶಾಸಕರ ಬಲ 13ಕ್ಕೆ ಕುಸಿದಿದೆ. ಈ ಮೂಲಕ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಸರ್ಕಾರ ರಕ್ಷಿಸೋ ಯತ್ನ ಕೈ ಕೊಡ್ತಿದೆ.
ಬಾಳಾ ಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆಯಲ್ಲಿ ಹೊಸ ಆಟ ಶುರುವಾಗಿದೆ. ಪುತ್ರ ಉದ್ಧವ್ ಠಾಕ್ರೆ ಕೈಯಿಂದ ಅಪ್ಪನ ಪ್ರೀಯ ಪಕ್ಷ ಕೈ ಜಾರುತ್ತಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬಾಂಬ್ ಫಿಕ್ಸ್ ಮಾಡಿ ಗುವಾಹಟಿಗೆ ಹಾರಿದ್ದ ಏಕನಾಥ್ ಶಿಂಧೆ ಬಣ ಕೇಕೆ ಹಾಕ್ತಿದೆ. ನಮ್ಮದೇ ಶಿವಸೇನೆ ಎಂದು ಶಕ್ತಿ ಪ್ರದರ್ಶಿಸುತ್ತಿದೆ. ಶಿಂಧೆ ಪರ ಬಂಡಾಯ ಶಾಸಕರು ಕುಲ್ಲಂಕುಲ್ಲಾ ಬೆಂಬಲ ಸೂಚಿಸಿದ್ದು, ಸಿಎಂ ಠಾಕ್ರೆ ಕುರ್ಚಿ ಐಸಿಯು ತಲುಪಿಸಿದೆ..
ಮಹಾರಾಷ್ಟ್ರದಲ್ಲಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಆಪತ್ತು!
ಅಧಿಕಾರದ ಜೊತೆ ಪಕ್ಷವೂ ಬುಟ್ಟಿಗೆ ಹಾಕಿಕೊಂಡ್ರಾ ಶಿಂಧೆ?
ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಅಂದ್ರೆನೇ ಗತ್ತು, ರಾಜ ಮರ್ಯಾದೆ. ಮರಾಠಿ ಮಾನುಸ್ ಬಾಳಾ ಸಾಹೇಬ್ ಅವರ ಇದೇ ಸೇನೆ ಇವತ್ತು ಚಿಲ್ಲಾಪಿಲ್ಲಾಯಾಗಿದೆ. ಉದ್ಧವ್ ವಿರುದ್ಧ ಸಿಡಿದೆದ್ದು, ಏಕನಾಥ್ ಶಿಂಧೆ ಪರ ಬೆಂಬಲಕ್ಕೆ ನಿಂತಿದೆ. ಅಧಿಕಾರ ಹೋದ್ರೆ ಹೋಗಲಿ, ಆದ್ರೆ ಪರಿಸ್ಥಿತಿ ಅದೆಷ್ಟು ಕೆಟ್ಟದಾಗಿದೆ ಅಂದ್ರೆ ಅಪ್ಪ ಕಟ್ಟಿ ಬೆಳಗಿಸಿದ ಪಕ್ಷ ಇವತ್ತು ಮತ್ತೊಬ್ಬ ಮರಾಠಿ ಮಾನುಸ್ ಕೈ ಸೇರುತ್ತಿದೆ.
ಠಾಕ್ರೆ ಕರೆದಿದ್ದ ಸಭೆಯಲ್ಲಿ 13 ಶಾಸಕರು ಮಾತ್ರ ಭಾಗಿ!
ಉದ್ಧವ್ ಠಾಕ್ರೆ ನೇತೃತ್ವದ ‘ಅಘಾಡಿ’ ಸರ್ಕಾರ ಪತನ?
ಸರ್ಕಾರ ಅಧಂಪತನ ತಲುಪುತ್ತಿರೋ ಹೊತ್ತಲ್ಲೇ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ಸೇರಿದ್ರು. ಆದ್ರೆ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದು ಮಾತ್ರ 13 ಮಂದಿ ಶಾಸಕರು. ಇನ್ನುಳಿದ ಮೂವರು ಶಾಸಕರು ಸಭೆಗೆ ಗೈರಾಗಿದ್ರೆ, 35 ಶಾಸಕರು ಏಕನಾಥ್ ಕ್ಯಾಂಪ್ನಲ್ಲಿ ಜೈ ಹೋ ಶಿಂಧೆ ಜೀ ಅಂತ ಘೋಷಣೆ ಕೂಗ್ತಿದ್ದಾರೆ. ಇದು ಸರ್ಕಾರ ಪತನದ ಜೊತೆ ಬಾಳಾ ಠಾಕ್ರೆ ಅವರ ಪಕ್ಷವೂ ತಮ್ಮ ಪುತ್ರನ ಕೈ ತಪ್ತಿರೋದು ಕುಲ್ಲಂಕುಲ್ಲಾ ಗೊತ್ತಾಗ್ತಿದೆ..
ಸಂಜಯ್ ರಾವತ್ ಸುಳ್ಳಿನ ಸತ್ಯ ಬಯಲು ಮಾಡಿ ರೆಬೆಲ್ಸ್!
ನಿತಿನ್ ದೇಶಮುಖ್ ಕಿಡ್ನ್ಯಾಪ್ ಮಾಡಿದ್ದಲ್ಲ ಎಂದು ಠಕ್ಕರ್
ಈ ಪೋಟೋಗಳನ್ನ ಒಮ್ಮೆ ಗಮನಿಸಿ. ನಗ್ನತ್ತಾ ಪೋಸ್ ಕೊಡ್ತಿರೋ ಇವರು ಶಾಸಕ ನಿತಿನ್ ದೇಶಮುಖ್ ಅಂತ, ಮೊನ್ನೆ ರಾತ್ರಿ ಶಿಂಧೆ ಬಣದಿಂದ ಎಸ್ಕೇಪ್ ಆಗಿ ಮುಂಬೈ ಸೇರಿದವರು. ಆದ್ರೆ ಇದನ್ನ ಬಂಡವಾಳ ಮಾಡಿಕೊಂಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್, ಸುಳ್ಳಿನ ಕಂತೆ ಕಟ್ಟಿದ್ದಾರೆ. ಸುದ್ದಿಗೋಷ್ಠಿ ನಡೆಸಿ ನಿತಿನ್ ದೇಶಮುಖ್ರನ್ನ ಕಿಡ್ನ್ಯಾಪ್ ಮಾಡಿ ಗುವಾಹಟಿಗೆ ಕರೆದುಕೊಂಡು ಹೋಗಿದ್ರು ಅಂತ ಆರೋಪಿಸಿದ್ರು. ಆದ್ರೆ ಈ ಫೋಟೋಗಳನ್ನ ಗಮನಿಸ್ತಿದ್ರೆ, ಯಾರ ಯಾರ ಜೊತೆ ಹೋಗ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ..
ಸರ್ಕಾರ ಪತನದ ಜೊತ್ತಲ್ಲೇ ಎನ್ಸಿಪಿ ಹೊಸ ಘೋಷಣೆ!
ವಿಪಕ್ಷದಲ್ಲಿ ಕುಳಿತುಕೊಳ್ಳಲು ನಾವು ರೆಡಿ ಎಂದ ಎನ್ಸಿಪಿ
ಮಹಾ ವಿಕಾಸ್ ಅಘಾಡಿ ಸರ್ಕಾರ ದಿವಾಳಿಯಾಗ್ತಿರೋ ಹೊತ್ತಲ್ಲೇ ಎನ್ಸಿಪಿ ಮತ್ತು ಕಾಂಗ್ರೆಸ್ ಮಹತ್ವದ ಸಭೆ ನಡೆಸಿತ್ತು. ಎನ್ಸಿಪಿ ಪ್ರಮುಖರು ಹಾಗೂ ಕೈ ನಾಯಕರು ಸದ್ಯದ ಆಗುಹೋಗುಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಿದ್ರು. ಸಭೆ ಬಳಿಕ ಮಾತನಾಡಿದ ಸಚಿವ ಹಾಗೂ ಎನ್ಸಿಪಿ ನಾಯಕ ಜಯಂತ್ ಪಾಟೀಲ್, ಹೊಸ ಘೋಷಣೆ ಮಾಡಿದ್ದಾರೆ. ಠಾಕ್ರೆ ಸರ್ಕಾರ ಇದ್ರೆ ಅವರ ಜೊತೆ ನಾವೀರುತ್ತೇವೆ. ಸರ್ಕಾರ ಪತನಾವಾದ್ರೆ ವಿಪಕ್ಷದಲ್ಲಿ ಕುಳಿತುಕೊಳ್ಳಲು ನಾವು ರೆಡಿ ಎಂದು ಎನ್ಸಿಪಿ ಘೋಷಿಸಿದೆ. ಇಷ್ಟೆಲ್ಲದ ನಡುವೆ ಶಿವಸೇನೆಯ ಮತ್ತಷ್ಟು ಶಾಸಕರು ಮತ್ತು ಸಂಸದರು ಏಕನಾಥ್ ಶಿಂಧೆ ಕ್ಯಾಂಪ್ ಸೇರಿಕೊಳ್ತಿದ್ದಾರೆ. ಕೆಲವರು ಅಲ್ಲಿಂದ ಎಸ್ಕೇಪ್ ಆಗಿದ್ರೆ, ಇನ್ನೂ ಕೆಲವರು ಅವರಿಚ್ಛೆಯಂತೆ ಶಿಂಧೆ ಪರ ನಿಂತಿದ್ದಾರೆ. ನೀವೇ ನಮ್ಮ ನಾಯಕರು, ನಿಮ್ಮ ಪರ ನಾವೀದ್ದೇವೆ ಎಂದು ಶಕ್ತಿ ಪ್ರದರ್ಶಿಸುತ್ತಿದ್ದಾರೆ.. ಈ ಮೂಲಕ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರೋ ಮಹಾ ಆಟ, ಫೈನಲ್ ತಲುಪಿದೆ.. ಮುಂದಿನ ಕೆಲ ಗಂಟೆಗಳಲ್ಲೇ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಅಧಿಕೃತವಾಗಿ ಬಿದ್ದು ಹೋದ್ರೂ ಅಚ್ಚರಿಯಿಲ್ಲ.
ಏಕನಾಥ್ ಶಿಂಧೆ ಬಣ ಸೇರಿಕೊಂಡ್ರು ಸರ್ಕಾರ 42 ಸೈನಿಕರು!
3 ದಿನಗಳಿಂದ ನಡೆಯುತ್ತಿರೋ ಮಹಾರಾಷ್ಟ್ರ ರಾಜಕೀಯ ಕ್ಷಣಕ್ಷಣಕ್ಕೂ ಸ್ಫೋಟಕ ತಿರುವು ಪಡೆದುಕೊಳ್ತಿದೆ. ನಮ್ಮ ಶಾಸಕರು ನಮ್ಮ ಬಳಿಯೇ ಇದ್ದಾರೆ ಅಂತಿದ್ದ ಠಾಕ್ರೆ ಬಳಗ ಇವತ್ತು ದಿಕ್ಕೆಟ್ಟು ಹೋಗಿದೆ. ಒಬ್ಬೊಬ್ಬರಂತೆ ಠಾಕ್ರೆ ಪರ ಇದ್ದ ಶಾಸಕರು ಶಿಂಧೆ ಕ್ಯಾಂಪ್ ಸೇರಿಕೊಳ್ತಿದ್ದಾರೆ. 12 ಶಾಸಕರಿಂದ ಶುರುವಾಗಿದ್ದ ಸರ್ಕಾರ ಉರುಳಿಸಿರೋ ಪಂದ್ಯಕ್ಕೆ ಇವತ್ತು 42 ಜನ ಕೈ ಜೋಡಿಸಿದ್ದಾರೆ. ಶಿವಸೇನೆಯ 35 ಶಾಸಕರು ಹಾಗೂ ಪಕ್ಷೇತರು 7 ಮಂದಿ ಸೇರಿ ಒಟ್ಟು ಬಂಡಾಯ ಶಾಸಕರ ಸಂಖ್ಯೆ 42ರ ಮುಟ್ಟಿದೆ. ಈ ಮೂಲಕ ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post