ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ ಈಗ, ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ದಿನೇ, ದಿನೇ ಕೊರೊನಾ ಕೇಸ್ಗಳು ಹೆಚ್ಚುತ್ತಿವೆ. ದೇಶದಲ್ಲಿ ದಿನನಿತ್ಯ 10 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗ್ತಿದ್ದಾರೆ. ಲಂಡನ್ವೊಂದರಲ್ಲೇ ಕಳೆದೊಂದು ವಾರದಲ್ಲಿ, 11 ಸಾವಿರ ಕೇಸ್ಗಳು ವರದಿಯಾಗಿವೆ. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಕಠಿಣ ನಿಯಮಗಳನ್ನ ವಿಧಿಸಲಾಗಿದೆ. ಇಂಗ್ಲೆಂಡ್- ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯೂ ಕೊರೊನಾ ಆತಂಕದ ಕಾಡ್ತಿದೆ. ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಸೇರಿದಂತೆ, ಒಟ್ಟು ಆರು ಮಂದಿ ಆಟಗಾರರಿಗೆ ಕೊರೊನಾ ದೃಢಪಟ್ಟಿದೆ.
ಕಳೆದ ವರ್ಷ ಟೆಸ್ಟ್ ಸರಣಿ ವೇಳೆ ಟೀಮ್ ಇಂಡಿಯಾ ಆಟಗಾರರು, ಕೋವಿಡ್ ರೂಲ್ಸ್ ಬ್ರೇಕ್ ಮಾಡಿ, ಕೋಚ್ ರವಿ ಶಾಸ್ತ್ರಿ ಬುಕ್ ರಿಲೀಸ್ ಸಮಾರಂಭದಲ್ಲಿ ಭಾಗಿಯಾಗಿದ್ರು. ಇದರಿಂದ ಕೊರೊನಾ ಸ್ಫೋಟವಾಗಿ, ತಂಡದ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಸರಣಿಯ ಕೊನೆಯ ಪಂದ್ಯವನ್ನೇ ಮುಂದೂಡಲಾಯ್ತು. ಒಂದು ವೇಳೆ ಈ ಬಾರಿಯೂ ಆಟಗಾರರು ಕೊರೊನಾ ರೂಲ್ಸ್ನಾ ಸ್ಟ್ರಿಕ್ಟ್ ಆಗಿ ಫಾಲೋ ಮಾಡದೇ ಇದ್ರೆ, ಈ ಬಾರಿ ಪಂದ್ಯ ರದ್ದಾದ್ರೂ ಅಚ್ಚರಿ ಇಲ್ಲ.
ಯೆಸ್, ಟೀಮ್ ಇಂಡಿಯಾ- ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ನಡೆಯುತ್ತೋ, ಇಲ್ವೋ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಕಾರಣ ಇಂಗ್ಲೆಂಡ್ನಲ್ಲಿ ತೀವ್ರಗೊಳ್ಳುತ್ತಿರೋ ಕೊರೊನಾ ವೈರಸ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post