ಈ ವಾರ ನೀವೇನಾದರೂ ಸಿನಿಮಾ ನೋಡ್ಬೇಕು ಅಂತ ಅಂದುಕೊಂಡ್ರೆ ಕನ್ಫ್ಯೂಸ್ ಆಗೋದು ಪಕ್ಕಾ. ಏಕಂದ್ರೆ, ಈ ವಾರ ನಾಲ್ಕು ನಿರೀಕ್ಷಿತ ಚಿತ್ರಗಳು ತೆರೆಗೆ ಬರ್ತಿದೆ. ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾ ಇಂದು ಥಿಯೇಟರ್ಗೆ ಬಂದಾಗಿದೆ, ಶುಕ್ರವಾರ ಮತ್ತೆ ಮೂರು ಚಿತ್ರಗಳು ಬಿಡುಗಡೆಯಾಗ್ತಿದ್ದು, ಯಾವುದು ಮೊದಲು ಆಯ್ಕೆ ಮಾಡ್ಕೋಬೇಕು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡೋದು ಪಕ್ಕಾ.
ತ್ರಿವಿಕ್ರಮ
ಜೂನ್ 24, ಅಂದ್ರೆ ನಾಳೆ ಕ್ರೇಜಿಸ್ಟಾರ್ ಫ್ಯಾನ್ಸ್ಗೆ ಸಿನಿ ಸಂಭ್ರಮ. ಕ್ರೇಜಿಸ್ಟಾರ್ ಫ್ಯಾನ್ಸ್ ಅಂದಾಕ್ಷಣ ರವಿಚಂದ್ರನ್ ಸಿನಿಮಾ ಬರ್ತಿದ್ಯಾ ಅಂದ್ಕೋಬೇಡಿ. ರವಿಚಂದ್ರನ್ ಎರಡನೇ ಮಗ ವಿಕ್ರಮ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ರಿಲೀಸ್ ಆಗ್ತಿದೆ. ಸಹನಾ ಮೂರ್ತಿ ಸಾರಥ್ಯದಲ್ಲಿ ಬರ್ತಿರೋ ತ್ರಿವಿಕ್ರಮ ಸಾಂಗ್, ಟ್ರೈಲರ್ನಿಂದ ಭರ್ಜರಿ ಸದ್ದು ಮಾಡ್ತಿದ್ದು, ಜನರನ್ನ ರಂಜಿಸೋದ್ರಲ್ಲಿ ಗೆಲ್ಲಲಿದೆ ಅನ್ನೋ ನಿರೀಕ್ಷೆ ಇದೆ.
ಬಡ್ಡೀಸ್
ಕಾಲೇಜ್ ಸ್ಟೂಡೆಂಟ್ಗಳನ್ನೇ ಟಾರ್ಗೆಟ್ ಮಾಡಿದಂತಿರೋ ‘ಬಡ್ಡೀಸ್’ ಸಿನಿಮಾ ನಾಳೆ ಚಿತ್ರಮಂದಿರಕ್ಕೆ ಲಗ್ಗೆಯಿಡ್ತಿದೆ. ಕನ್ನಡತಿ ಸೀರಿಯಲ್ ಮೂಲಕ ತನ್ನದೆ ಫ್ಯಾನ್ ಫಾಲೋವರ್ಸ್ ಹೊಂದಿರೋ ಕಿರಣ್ ರಾಜ್ ಈಗ ಬಡ್ಡೀಸ್ ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ. ಟೀಸರ್ ಟ್ರೈಲರ್ ಸಾಂಗ್ಸ್ ಸಖತ್ ಕ್ಯಾಚಿಯಾಗಿದ್ದು, ಗುರುತೇಜ ಶೆಟ್ಟಿ ಡೈರೆಕ್ಷನ್ ಮಾಡಿದ್ದಾರೆ.
ತುರ್ತು ನಿರ್ಗಮನ
ಎರಡು ಮಾಸ್ ಚಿತ್ರಗಳ ಜೊತೆ ಬಹಳ ವಿಶೇಷವಾಗಿ ಬರ್ತಿರೋ ಸಿನಿಮಾ ‘ತುರ್ತು ನಿರ್ಗಮನ’. ಎಕ್ಸ್ಕ್ಯೂಸಿಮಿ ಖ್ಯಾತಿಯ ಸುನಿಲ್ ರಾವ್ 12 ವರ್ಷದ ನಂತರ ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡ್ತಿರೋ ಚಿತ್ರ ಇದಾಗಿದ್ದು, ವಿಶೇಷವೆನಿಸಿಕೊಂಡಿದೆ. ಹೇಮಂತ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಟ್ರೈಲರ್ ಸಖತ್ ಇಂಪ್ರೆಸ್ ಆಗಿದೆ. ಸುಧಾರಾಣಿ, ರಾಜ್ ಬಿ ಶೆಟ್ಟಿ, ಸಂಯುಕ್ತ ಹೆಗ್ಡೆ ಸೇರಿದಂತೆ ಅನೇಕ ಕಲಾವಿದರು ಈ ತುರ್ತು ನಿರ್ಗಮನದಲ್ಲಿ ನಟಿಸಿರೋದು ಸರ್ಪ್ರೈಸ್ ಪ್ಯಾಕೇಜ್ ಆಗಿರಲಿದೆ. ಒಟ್ನಲ್ಲಿ, ಈ ವಾರ ಕನ್ನಡ ಸಿನಿಮಾ ಪ್ರಿಯರಿಗೆ ಬಗೆ ಬಗೆಯ ಮನರಂಜನೆಯೂ ರಸದೌತಣ ಸಿದ್ದವಾಗಿದ್ದು, ಅದ್ಯಾವ ಚಿತ್ರ ಮನಸ್ಸಿಗೆ ಇಷ್ಟವಾಗಲಿದೆ ಅಂತ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post