ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ನಡೀತಿದೆ. ಹರ್ಷ ಭುವಿಯನ್ನ ಹಸೆಮನೆ ಮೇಲೆ ನೋಡಿ ಹವಿ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಈ ನಡುವೆ ಕನ್ನಡತಿ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಹರ್ಷನ ಕೊನೆ ತಮ್ಮ ಆದಿ ಕನ್ನಡತಿಯಿಂದ ಹೊರಬಂದಿದ್ದಾರೆ.
ಆದಿ ಪಾತ್ರಕ್ಕೆ ಬಣ್ಣಹಚ್ಚಿದ್ದ ನಟ ರಕ್ಷಿತ್ ಕನ್ನಡತಿಯಿಂದ ಹೊರ ಬರ್ತಿದ್ದಾರೆ ಅನ್ನೋ ಸುದ್ದಿ ಹಲವಾರು ಬಾರಿ ಹರಿದಾಡಿತ್ತು. ಅದೆಲ್ಲವನ್ನ ಮೀರಿ ರಕ್ಷಿತ್ ತಮ್ಮ ಜರ್ನಿಯನ್ನ ಮುಂದುವರೆಸಿದ್ರು. ಈ ಬಾರಿ ಬಂದಿರುವ ಸುದ್ದಿ ಪಕ್ಕಾ ಆಗಿದ್ದು, ಕನ್ನಡತಿಯಿಂದ ಹೊರ ನಡೆದಿದ್ದಾರೆ ರಕ್ಷಿತ್.
ಮನೆಗೆ ತಕ್ಕ ಮಗನಾಗಿ ಲವಲವಿಕೆಯಿಂದ ಕೂಡಿದ್ದ ಆದಿ ಪಾತ್ರವನ್ನ ರಕ್ಷಿತ್ ತುಂಬಾ ಚೆನ್ನಾಗಿ ನಿಭಾಯಿಸಿದ್ರು. ವೀಕ್ಷಕರು ಕೂಡ ರಕ್ಷಿತ್ ಅವ್ರನ್ನ ಆದಿ ಇಷ್ಟಪಟ್ಟಿದ್ದರು. ಈ ಬಗ್ಗೆ ಮಾತ್ನಾಡಿರುವ ರಕ್ಷಿತ್, ಕನ್ನಡತಿ ತುಂಬಾ ಸ್ಪೆಷಲ್ ಪ್ರಾಜೆಕ್ಟ್. ಆದರೆ ವೈಯಕ್ತಿಕ ಕಾರಣದಿಂದಾಗಿ ಆದಿ ಪಾತ್ರದಿಂದ ಹೊರ ಬರ್ತಿದ್ದೀನಿ. ಮತ್ತೆ ಬೇರೆ ಹೊಸ ಹೊಸ ಪ್ರಾಜೇಕ್ಟ್ಗಳಿಂದ ವೀಕ್ಷಕರನ್ನ ಎಂಟರ್ಟೈನ್ ಮಾಡ್ತೀನಿ ಅನ್ನೋ ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಸಾನಿಯಾ ಪಾತ್ರ ಬದಲಾಗಿತ್ತು. ಇತ್ತೀಚೆಗಷ್ಟೆ ದೇವ್ ಪಾತ್ರ ಕೂಡ ರಿಪ್ಲೇಸ್ ಆಗಿದೆ. ಈಗ ಆದಿ ಪಾತ್ರ ಆಗ್ತಿದೆ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ತರ್ಸಬಹುದು. ಆದ್ರೆ ಬದಲಾವಣೆ ಜಗದ ನಿಯಮ ಅನ್ನೋದು ಸರ್ವಕಾಲಿಕ ಸತ್ಯ. ಇನ್ಮುಂದೆ ಆದಿ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಅನ್ನೋ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ನೀಡ್ತಿವಿ ಎಂದಿದ್ದಾರೆ.
ಒಟ್ನಲ್ಲಿ ಇಷ್ಟು ದಿನ ಆದಿಯಾಗಿ ವೀಕ್ಷಕರನ್ನ ರಂಜಿಸಿದ ನಟ ರಕ್ಷಿತ್ ಅವ್ರಿಗೆ ಒಳ್ಳೆದಾಗಲಿ. ಆದಷ್ಟು ಬೇಗ ಉತ್ತಮ ಪಾತ್ರದೊಂದಿಗೆ ಮತ್ತೆ ತೆರೆಮೇಲೆ ಬರ್ಲಿ ಅನ್ನೋದು ಅವ್ರ ಅಭಿಮಾನಿಗಳ ಆಶಯವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post