ರಾಜ್ಯಸಭೆಯಲ್ಲಿ ಹೀನಾಯವಾಗಿ ಸೋಲಿಗೆ ಕಾರಣವಾಗಿದ್ದ ನಾಯಕರ ವಿರುದ್ಧ ದಳಪತಿಗಳು ಕಾನೂನು ಸಮರ ಸಾರಿದ್ದಾರೆ. ಜೆಡಿಎಸ್ ವಿರುದ್ಧ ಬಂಡಾಯ ಕೋಲಾರ ಶಾಸಕ ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಉಚ್ಛಾಟನೆ ಮಾಡಲಾಗಿದೆ.
ರಾಜ್ಯದಲ್ಲಿ ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿದ್ದ ರಾಜ್ಯಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ಮುಖ ಭಂಗವಾಗಿತ್ತು. ತಮ್ಮ ಪಕ್ಷದಿಂದಲೇ ಗೆದ್ದು ಶಾಸಕ ಪಟ್ಟ ಗಿಟ್ಟಿಸಿದ್ದ ನಾಯಕರೇ ಜೆಡಿಎಸ್ ವಿರುದ್ಧ ತಿರುಗಿಬಿದ್ದಿದ್ರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೆಂಗಣ್ಣಿಗೂ ಗುರಿಯಾಗಿದ್ರು. ಇದೀಗ ಕ್ರಾಸ್ ವೋಟಿಂಗ್ ಮಾಡಿ ಕೋಲಾಹಲ ಸೃಷ್ಟಿಸಿದ್ದ ಇಬ್ಬರು ಶಾಸಕರಿಗೆ ಉಚ್ಛಾಟನೆ ಶಿಕ್ಷೆಯಾಗಿದೆ.
ಕೋಲಾರ, ಗುಬ್ಬಿ ಶಾಸಕರಿಗೆ ಪಕ್ಷದಿಂದ ಗೇಟ್‌ಪಾಸ್
ರಾಜ್ಯಸಭೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡರನ್ನ ದಳಪತಿಗಳು ಉಚ್ಛಾಟನೆ ಮಾಡಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ರನ್ನೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗೇಟ್ ಪಾಸ್ ನೀಡಲಾಗಿದೆ. ನಿನ್ನೆ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಇಬ್ಬರು ಶಾಸಕರನ್ನು ಉಚ್ಛಾಟಿಸಿ ಜೆಡಿಎಸ್ ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದಾರೆ.
ಕಾನೂನು ಸಮರಕ್ಕೆ ‘ದಳ’ ಸಿದ್ಧತೆ
- ಅಡ್ಡ ಮತದಾನ ಮಾಡಿದವರಿಗೆ ಪಾಠ ಕಲಿಸಲು ಸಿದ್ಧತೆ
- ಶ್ರೀನಿವಾಸ್ ಗೌಡ, ಗುಬ್ಬಿ ವಾಸು ವಿರುದ್ಧ ಕಾನೂನು ಸಮರ
- ಆ್ಯಂಟಿ ಡಿಫೆಕ್ಷನ್ ಕಾನೂನಿನ ಮೊರೆ ಹೋಗಲು ನಿರ್ಧಾರ
- ಶೆಡ್ಯೂಲ್ 11 ಅಡಿಯಲ್ಲಿ ಆಂಟಿ ಡಿಫೆಕ್ಷನ್ ಹಾಕಲು ಸಿದ್ಧತೆ
- ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್ಗೆ ದೂರು
- ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ದೂರು ನೀಡಲು ಸಿದ್ಧತೆ
- ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕಶಾಸ್ತಿ ಮಾಡುವ ಸಂದೇಶ
- 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ಹೋರಾಟ
- ವರಿಷ್ಠ ಹೆಚ್.ಡಿ. ದೇವೇಗೌಡರಿಂದ ನಾಯಕರಿಗೆ ಸೂಚನೆ
ಕೈತಪ್ಪಿದ ರಾಜ್ಯಸಭೆ ಸ್ಥಾನಕ್ಕೆ ಚಿಂತೆಯ ಜೊತೆ ಅಸ್ತಿತ್ವಕ್ಕೆ ಬಿದ್ದ ಏಟಿಗೆ ಜೆಡಿಎಸ್ ನಾಯಕರು ಅಸಮಾಧಾನ ಹೊಂದಿದ್ರು. ಈ ಸೋಲನ್ನೇ ಪ್ರತಿಷ್ಠೆಯಾಗಿಸಿಕೊಂಡ ಜೆಡಿಎಸ್ ನಾಯಕರು ಭವಿಷ್ಯದಲ್ಲಿ ಸೇಡಿನ ರಾಜಕಾರಣದ ಮುಹೂರ್ತಕ್ಕೆ ನಾಂದಿ ಹಾಡಿದ್ದಾರೆ. ಈ ಸೋಲಿಗೆ ಕಾರಣರಾದ ನಾಯಕರ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದೆ. ಆದ್ರೆ ದಳಪತಿಗಳ ಈ ನಡೆ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post