ಕಲಬುರಗಿ: ಮೃತ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡಲು ಬಿಡದೇ ಕೋತಿಯೊಂದು ಸಾವಿನ ಮನೆಯಲ್ಲಿ ಕೂತಿರುವ ವಿಚಿತ್ರ ಘಟನೆಯೊಂದು ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಶ್ಯಾಮಲಾ ಎಂಬುವವರು ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದರು. ಸಂಜೆ ಸಾವಿನ ಮನೆಗೆ ಬಂದ ಕೋತಿ ಶವದ ಬಂದು ಕೂತಿದೆ.
ಗ್ರಾಮಸ್ಥರು ಹಾಗೂ ಸಂಬಂಧಿಕರ ಜೊತೆಯಲ್ಲೇ ನಿನ್ನೆಯಿಂದ ಮೃತದೇಹದ ಮುಂದೆ ಕೋತಿ ಕುಳಿತುಕೊಂಡು ಇದೆ. ಇನ್ನೊಂದು ವಿಚಾರ ಏನಂದ್ರೆ ಯಾರಿಗೂ ಕೂಡ ಮೃತದೇಹವನ್ನ ಮುಟ್ಟಲು ಕೋತಿ ಬಿಡುತ್ತಿಲ್ಲ. ಸ್ಥಳೀಯರು ಕೋತಿಯನ್ನು ಓಡಿಸಲು ಪ್ರಯತ್ನಿಸಿದರೂ ಜಾಗ ಕದಲುತ್ತಿಲ್ಲ. ಹೀಗಾಗಿ ಎಲ್ಲಿ ಸಂಬಂಧಿಕರು ಮೃತದೇಹ ಇದ್ದ ಜಾಗಕ್ಕೆ ಬರಲು ಹೆದರುತ್ತಿದ್ದಾರೆ ಎನ್ನಲಾಗಿದೆ.
ಅಂತ್ಯಸಂಸ್ಕಾರ ಮಾಡೋದಕ್ಕೆ ಶವ ತೆಗೆದುಕೊಂಡು ಹೋಗಲು ಜನ ಭಯ ಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕೋತಿಯ ಈ ವಿಚಿತ್ರ ವರ್ತನೆಯಿಂದಾಗಿ ಸಂಬಂಧಿಕರು ಶವಸಂಸ್ಕಾರ ಮಾಡಲಾಗದೇ ಪರದಾಡುವಂತಾಗಿದೆ.
ಇನ್ನೊಂದು ವಿಚಾರ ಅಂದರೆ ಈ ಹಿಂದೆ ಕೋತಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ದಿಢೀರನೇ ಕೋತಿ ಅವರ ಮನೆಯಲ್ಲಿ ಬಂದು ಕುತಿರೋದು ಹಲವು ಅಚ್ಚರಿಗೆ ಕಾರಣವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post