ಮಹಾರಾಷ್ಟ್ರದಲ್ಲಿ ಉದ್ಧವ್ ಸರ್ಕಾರ ಪತನದತ್ತ ಸಾಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ್ದಕ್ಕೆ ಕಂಗನಾ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅವರ ಮನೆಯನ್ನ ಕೆಡವಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಟಿ, ಠಾಕ್ರೆಜೀ ಇಂದು ನನ್ನ ಮನೆ ಕೆಡವಿದ್ದೀರಿ. ಮುಂದೊಂದು ದಿನ ನಿಮ್ಮ ದುರಹಂಕಾರ ಕೂಡ ನಾಶವಾಗುತ್ತೆ ಎಂದಿದ್ದರು. ಈ ವಿಡಿಯೋದ ಬೆನ್ನಲ್ಲೇ, ಈಗ ಮತ್ತೊಂದು ವಿಡಿಯೋ ವೈರಲ್ ಆಗ್ತಿದೆ. ನೀವು ಇತಿಹಾಸ ಗಮನಿಸಿರಬಹುದು, ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ. ಸೀತೆಗೆ ಅವಮಾನ ಮಾಡಿದ ರಾವಣ, ದ್ರೌಪದಿಗೆ ಅವಮಾನ ಮಾಡಿದ ಕೌರವರು ನಾಶವಾದರು. ಈಗ ನಿಮ್ಮ ಸರದಿ ಎಂದಿದ್ದಾರೆ.
#UddhavThackarey
Only #KanganaRanaut has the power to predict 🙄 pic.twitter.com/IaatY1Dpgr— Biraja Prasad Rath (@iambiraja) June 22, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post