ಕೋವಿಡ್ ಸೋಂಕಿಗೆ ತುತ್ತಾಗಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಆರ್.ಅಶ್ವಿನ್ ಈಗ ಸುಧಾರಿಸಿಕೊಂಡಿದ್ದು, ನಾಳೆಯೇ ಜೂನ್ 24ರಂದು ಇಂಗ್ಲೆಂಡ್ಗೆ ತೆರಳಲಿದ್ದಾರೆ. ಈಗಾಗಲೇ ಮೊದಲ ಅಭ್ಯಾಸ ಪಂದ್ಯವನ್ನ ಮಿಸ್ ಮಾಡಿಕೊಂಡಿರೋ ನಾಳೆಯೇ ಭಾರತ ತಂಡ ಸೇರಲಿದ್ದಾರೆ.
ಇನ್ನು ಅಶ್ವಿನ್ ಸ್ಥಾನಕ್ಕೆ ಸ್ಟಾಂಡ್ ಬೈ ಆಟಗಾರನಾಗಿ ಜಯಂತ್ ಯಾದವ್ಗೆ ಮಣೆ ಹಾಕಲಾಗಿತ್ತು. ಜಯಂತ್ ಯಾದವ್ ಕೂಡ ಬೆಂಗಳೂರಿನ ಎನ್ಸಿಎನಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು. ಈಗ 7 ದಿನಗಳ ಕಾಲ ಕ್ವಾರಂಟೀನ್ ಅವಧಿ ಮುಗಿಸಿರೋ ಅಶ್ವಿನ್ ನಾಳೆ ಇಂಗ್ಲೆಂಡ್ಗೆ ತೆರಳುತ್ತಿದ್ದಾರೆ.
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲೂ ಆರ್. ಅಶ್ವಿನ್ ಮಿಂಚಿದ್ರು. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ಫೈನಲ್ಸ್ಗೆ ಹೋಗಲು ಅಶ್ವಿನ್ ಪಾತ್ರ ಬಹಳ ಇತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post