ನಾನು ಕಾಲೇಜಿಗೆ ಹೋಗುತ್ತಿದ್ದಾಗ ಕಿಚ್ಚ ಸುದೀಪ್ ಸಿನಿಮಾ ನೋಡಲು ಮನೆಯಲ್ಲಿ ಸುಳ್ಳು ಹೇಳಿ ಹಣವನ್ನ ತೆಗೆದುಕೊಂಡು ಹೋಗಿದ್ದೆ ಎಂದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ನಿನ್ನೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಪ್ರೀ-ರಿಲೀಸ್ ಇವೆಂಟ್ನಲ್ಲಿ ಶೆಟ್ಟಿ ಮಾತನಾಡಿದರು. ‘ದಮ್ ಸಿನಿಮಾ ರಿಲೀಸ್ ಆದಾಗ ನಾನು ಕಾಲೇಜಿನಲ್ಲಿದ್ದೆ. ಮನೆಯಲ್ಲಿ ಹುಷಾರಿಲ್ಲ ಎಂದು ಸುಳ್ಳು ಹೇಳಿ ದುಡ್ಡನ್ನ ತೆಗೆದುಕೊಂಡು ಹೋಗಿದ್ದೆ. ಆ ದುಡ್ಡಲ್ಲಿ ಒಂದೇ ಒಂದು ಸಿರಪ್ ತೆಗೆದುಕೊಂಡು, ಉಳಿದ ದುಡ್ಡಿನಲ್ಲಿ ಸಿನಿಮಾ ನೋಡಿಕೊಂಡು ಬಂದಿದ್ದೆ‘.
ಆವಾಗ ಥಿಯೇಟರ್ಗೆ ಹೋಗಬೇಕಾದರೆನೂ ಭಯ. ನಿನ್ನೆ ಮತ್ತೆ ಕಾರ್ಯಕ್ರಮಕ್ಕೆ ಬರಬೇಕು ಎಂದಾಗ ಭಯ ಶುರುವಾಗಿತ್ತು. ಸುದೀಪ್ ಸರ್ ಅಂದ್ರೆನೇ ಭಯ. ಮಂಗಳೂರಿನಿಂದ ಎಲ್ಲೋ ಸಿನಿಮಾ ಮಾಡಿಕೊಂಡು ಬಂದವನಿಗೆ ಈ ವೇದಿಕೆ ಮೇಲೆ ಮಾತನಾಡಬೇಕು ಎಂದಿಲ್ಲ. ಇದು ಅವರ ದೊಡ್ಡತನವನ್ನ ತೋರಿಸುತ್ತದೆ ಎಂದರು.
ಇಲ್ಲಿ ನಿಂತುಕೊಂಡ ಟ್ರೈಲರ್ ನೋಡೋದು ನನ್ನ ಭಾಗ್ಯ. ಅಂದು ಯಾರ ಸಿನಿಮಾವನ್ನ ನೋಡಲು ಸುಳ್ಳು ಹೇಳಲು ಹೋಗಿದ್ದೆ. ಇಂದು ಅವರ ಸಿನಿಮಾದ ಟ್ರೈಲರ್ ಫಸ್ಟ್ ನೋಡೋದು ನನ್ನ ಭಾಗ್ಯ ಅಂದ್ಕೊಳ್ತೀನಿ ಎಂದರು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post