ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿ ಇಂದಿಗೆ 15 ವರ್ಷ. ಹೀಗಾಗಿ ಹಿಟ್ಮ್ಯಾನ್ ರೋಹಿತ್ ಪಾಲಿಗೆ ಇಂದು ವಿಶೇಷ ದಿನ.
ಬರೋಬ್ಬರಿ 15 ವರ್ಷಗಳ ಹಿಂದೆ 2007 ಜೂನ್ 23ನೇ ತಾರೀಖು ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ರೋಹಿತ್ ಪಾದರ್ಪಣೆ ಮಾಡಿದರು. ತಂಡದ ಆಟಗಾರನಾಗಿ ಎಂಟ್ರಿ ಕೊಟ್ಟ ರೋಹಿತ್ ಇಂದು ಟೀಂ ಇಂಡಿಯಾದ ಎಲ್ಲಾ ಫಾರ್ಮೆಟ್ ಕ್ಯಾಪ್ಟನ್ ಆಗಿ ಬೆಳೆದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರೋ ರೋಹಿತ್ ಶರ್ಮಾ, ಇಂದಿಗೆ ನಾನು ಟೀಂ ಇಂಡಿಯಾ ಪರ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟು 15 ವರ್ಷಗಳು ಕಳೆದಿವೆ. ಇದೊಂದು ಅದ್ಭುತ ಪಯಣ. ನನ್ನ ವೃತ್ತಿ ಜೀವನಕ್ಕೆ ಸಹಕರಿಸಿದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post