ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರೋ ರಣಜಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಪರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಜಿ ಪ್ಲೇಯರ್ ಸರ್ಫರಾಜ್ ಖಾನ್ ಅಬ್ಬರದ ಶತಕ ಸಿಡಿಸಿದ್ರು.
ಫಸ್ಟ್ ಡೇ 125 ಎಸೆತಗಳ ಎದುರಿಸಿ 40 ರನ್ ಕಲೆಹಾಕಿದ್ದ ಸರ್ಫರಾಜ್ ಖಾನ್ ಎರಡನೇ ದಿನವೂ ತನ್ನ ಆರ್ಭಟ ಮುಂದುವರಿಸಿದ್ರು. ಬರೋಬ್ಬರಿ 243 ಎಸೆತಗಳಲ್ಲಿ 55.14ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ 134 ರನ್ ಸಿಡಿಸಿದ್ರು.
ಇನ್ನು, ಸರ್ಫರಾಜ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್ ಸಿಡಿಸಿದ್ರು. ಕೊನೆಗೂ ಕ್ಯಾಚ್ ನೀಡಿ ಔಟಾದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post