ಐತಿಹಾಸಿಕ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿರುವ ರೋಹಿತ್ ಪಡೆ ಆಂಗ್ಲರ ನಾಡಲ್ಲಿ ಭರ್ಜರಿ ಅಭ್ಯಾಸ ಆರಂಭಿಸಿದೆ. ಆದ್ರೆ, ಕಳೆದ 3 ತಿಂಗಳಿಂದ ವೈಟ್ಬಾಲ್ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದ ಪ್ಲೇಯರ್ಸ್ ಮುಂದೆ ರೆಡ್ಬಾಲ್ ಫಾರ್ಮೆಟ್ಗೆ ಶಿಫ್ಟ್ ಆಗೋ ಚಾಲೆಂಜ್ ಇದೆ. ಹೀಗಾಗಿಯೇ ಮೊದಲ ದಿನದಲ್ಲಿ ವಿಶಿಷ್ಟ ಅಭ್ಯಾಸವನ್ನ ನಡೆಸಿದ್ದಾರೆ.
ಅಭ್ಯಾಸಕ್ಕೆ ಮೊದಲು ಆಟಗಾರರಿಗೆ ಕೊಹ್ಲಿ ಕಿವಿಮಾತು
ಟೀಮ್ ಇಂಡಿಯಾದ ಮೊದಲ ಬ್ಯಾಚ್ ಶುಕ್ರವಾರವೇ ಲಂಡನ್ ತಲುಪಿತ್ತು. ಇದೀಗ ಇನ್ನೊಂದು ಬ್ಯಾಚ್ ಕೂಡ ಲಂಡನ್ನಲ್ಲಿ ತಂಡವನ್ನ ಕೂಡಿಕೊಂಡಿದ್ದು, ಅಧಿಕೃತವಾಗಿ ಇಡೀ ತಂಡ ಅಭ್ಯಾಸ ಆರಂಭಿಸಿದೆ. ಈ ಅಭ್ಯಾಸಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊಟಿವೇಷನ್ ಸ್ಪೀಚ್ ನೀಡಿ ಆಟಗಾರರನ್ನ ಹುರಿದುಂಬಿಸಿದ್ದಾರೆ.
ಫಾರ್ಮ್ ಕಳೆದುಕೊಂಡಿರುವ ಕೊಹ್ಲಿಗೆ ದ್ರಾವಿಡ್ ಟಿಪ್ಸ್
ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ಟೀಮ್ ಇಂಡಿಯಾಗೆ ದೊಡ್ಡ ಹೊರೆಯಾಗಿದೆ. ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಾದ್ರೂ ಕಮ್ಬ್ಯಾಕ್ ಮಾಡ್ತಾರಾ ಅನ್ನೋ ಪ್ರಶ್ನೆ ಹೆಚ್ಚು ಚರ್ಚೆಯಾಗ್ತಿದೆ. ಇನ್ಕನ್ಸಿಸ್ಟೆನ್ಸಿ ಪ್ರದರ್ಶನದಿಂದ ಟೀಕೆ ಗುರಿಯಾಗಿರೋ ವಿರಾಟ್ಗೆ ಬೆಂಬಲಕ್ಕೆ ದ್ರಾವಿಡ್ ನಿಂತಿದ್ದು, ಅಭ್ಯಾಸಕ್ಕೂ ಮುನ್ನ ಟಿಪ್ಸ್ ನೀಡಿದ್ದಾರೆ.
ಸ್ಲಿಪ್ ಕ್ಯಾಚ್ ಪ್ರಾಕ್ಟಿಸ್ ಮಾಡಿದ ರೋಹಿತ್-ಕೊಹ್ಲಿ
CATCHES WINS MATCHES ಅನ್ನೋ ಮಾತು 100% ಸತ್ಯ. ಒಂದೇ ಒಂದು ಡ್ರಾಪ್ ಕ್ಯಾಚ್ಗೆ ಇಡೀ ಪಂದ್ಯವನ್ನೇ ಬದಲಿಸೋ ಶಕ್ತಿಯಿದೆ. ಇದೀಗ ಇಂಗ್ಲೆಂಡ್ ನಾಡಿಗೆ ಕಾಲಿಟ್ಟಿರುವ ಟೀಮ್ ಇಂಡಿಯನ್ಸ್ ಕೂಡ ಫೀಲ್ಡಿಂಗ್ ಡ್ರಿಲ್ ಹೆಚ್ಚು ಒತ್ತು ನೀಡಿದ್ದಾರೆ. ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಸ್ಲಿಪ್ ಕ್ಯಾಚ್ ಪ್ರಾಕ್ಟಿಸ್ ಮಾಡಿದ್ದಾರೆ.
ಲಾಂಗ್ ವಾರ್ಮ್ಅಪ್ ಮಾಡಿದ ಆಟಗಾರರು
ಅಭ್ಯಾಸಕ್ಕಿಳಿದ ಮೊದಲ ದಿನ ಲಾಂಗ್ ರನ್ಅಪ್ ಮಾಡಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಸೇರಿದಂತೆ ಹಲವರು ಲೆಸಿಸ್ಟರ್ ಮೈದಾನದ ರೌಂಡ್ಸ್ ಹೊಡೆದಿದ್ದಾರೆ. ಒಂದೆಡೆ ಕೆಲ ಆಟಗಾರರು ಲಾಂಗ್ ರನಪ್ ಮಾಡಿದ್ರೆ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಪ್ರಸಿದ್ಧ ಕೃಷ್ಣ, ಕೆಎಸ್ ಭರತ್ ಹಾಗೂ ಮೊಹಮದ್ ಶಮಿ ಫುಟ್ಭಾಲ್ ಆಡಿ ವಾರ್ಮ್ಅಪ್ ಆದ್ರು.
ವಿಶೇಷ ಅಭ್ಯಾಸ ಮಾಡಿಸಿದ ಸ್ರೆಂಥ್ & ಕಂಡಿಷನಿಂಗ್ ಕೋಚ್
ಟೀಮ್ ಇಂಡಿಯಾ ಪ್ಲೇಯರ್ಸ್ ಟೆಸ್ಟ್ ಕ್ರಿಕೆಟ್ ಆಡಿ 3 ತಿಂಗಳೇ ಕಳೆದಿವೆ. ಇದೀಗ ಒಂದೇ ಸಲ ರೆಡ್ ಬಾಲ್ ಕ್ರಿಕೆಟ್ ಆಡೋದು ಕಷ್ಟವಾಗಲಿದೆ. ಹಾಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ತಂಡದ ಸ್ಟ್ರೆಂಥ್ & ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ವಿಶೇಷ ಅಭ್ಯಾಸ ಮಾಡಿಸಿದ್ದಾರೆ.
ಇಷ್ಟೆಲ್ಲಾ ಅಭ್ಯಾಸ ನಡೆಸಿದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ ಸೇರಿದಂತೆ ಹಲವರು ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ. ಒಟ್ಟಿನಲ್ಲಿ ಇಂದಿನಿಂದ ನಡೆಯೋ ಅಭ್ಯಾಸ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿಯಾಗಿ ಸಜ್ಜಾಗಿದೆ. ಪ್ರಾಕ್ಟೀಸ್ ಗೇಮ್ನಲ್ಲಿ ಆಟಗಾರರ ಪ್ರದರ್ಶನ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post